ಹನುಮಜಯಂತಿ : ಗಮನ ಸೆಳೆದ ಬೈಕ್ ರ್ಯಾಲಿ

ಲೋಕದರ್ಶನ ವರದಿ

ಹಾವೇರಿ19: ಎಲ್ಲಿ ನೋಡಿದರೂ ಭಾಗವಧ್ವಜಗಳ ಹಾರಟ ಯುವಕರು ಜೈ ಶ್ರೀರಾಮ ಜೈಭಜರಂಗಿ ಜಯಘೋಷದೊಂದಿಗೆ ಬೈಕ್ ಯರ್ಾಲಿ ಮೂಲಕ ಹೋಗುತ್ತಿದ್ದರೆ ಇತ್ತ ರಾಮಭಕ್ತನ ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಯುವ ಜನಾಂಗ.ಈ ದೃಶ್ಯ ಕಂಡುಬಂದಿದ್ದು ತಾಲೂಕಿನ ನೆಗಳೂರಗ್ರಾಮದಲ್ಲಿ ಶುಕ್ರವಾರ ಜರುಗಿದ ಹನುಮ ಜಯಂತಿ ಆಚರಣೆಯ ಅಂಗವಾಗಿ ಗ್ರಾಮದ ಡ್ರೀಮ್ ನೆಗಳೂರ ಯೂಥ್ ಕ್ಲಬ್ ಹಾಗೂ ವಿವಿಧ ಯುವ ಸಂಘಟನೆಗಳ ಆಶ್ರಯದಲ್ಲಿ ಹನುಮಜಯಂತಿ ಆಚರಣೆ ಬಹಳ ವಿಜೃಂಭಣೆಯಿಂದ ಜರುಗಿತು. 

ಗಮನ ಸೆಳೆದ ಬೈಕ್ ರ್ಯಾಲಿ

       ಡ್ರೀಮ್ ನೆಗಳೂರ ಯೂಥ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೈಕ್ ಯರ್ಾಲಿಯು ಅತ್ಯಂತ ಹೆಚ್ಚು ಆರ್ಕಷಣೆಯಿಂದ ಕೊಡಿತ್ತು. ಎತ್ತರದ ಭಜರಂಗಿ ಭಾಗವ ಧ್ವಜಗಳನ್ನು ಹಿಡಿದು ಯುವಕರು ಗ್ರಾಮದ ಆಂಜನೇಯ ದೇವಸ್ಥಾನದಿಂದ ಪ್ರಾರಂಭಗೊಂಡ ಬೈಕ್ ರ್ಯಾಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನ ತಲುಪಿ ಸಂಪನ್ನಗೊಂಡಿತ್ತು.

    ಮೆರವಣಿಗೆಯಲ್ಲಿ ಶುಭಂ ಸಂಶಿ ಶಂಕರ ಸಪ್ಪಿನ್ ಅಮರ ಗಂಗನಗೌಡ್ರ ಕಾಂತೇಶರೆಡ್ಡಿ ಶಟ್ಟೇಪ್ಪನವರ ಮೋಹನರೆಡ್ಡಿ ಮರೆಡ್ಡರ ಲಿಂಗರಾಜ ಕಟ್ಟೆಣ್ಣನವರ ಕುಮಾರ ಹುಲೇಪ್ಪನವರ ಫಕ್ಕೀರೇಶ ಪುಜಾರ ಪುನೀತ ಮಠದ ಚಂದನ ಪಾಟೀಲ ಮಾಲತೇಶ ಮೈಲಾರ ಅರುಣ ರಿತ್ತಿಮರಿಯಣ್ಣನವರ ಚೇತನ ಬಿಷ್ಟನಗೌಡ್ರ ಶರಣ ಕರ್ಕಣ್ಣನವರ ಮಂಜುನಾಥ ಚಂದಣ್ಣನವರ ಗಿರೀಶ ಅರಳಿಮರದಸಾಗರ ವಿಭೂತಿ ಹುಲಗೇಶ ಹಳ್ಳಾಕಾರ ಇತರು ಪಾಲ್ಗೊಂಡಿದ್ದರು. ನಂತರ ಅನ್ನ ಸಂರ್ತಪಣೆ ಜರುಗಿತು.