ದೇಶದ ಅಭಿವೃದ್ಧಿಗಾಗಿ ಮೋದಿಗೆ ಮತ ನೀಡಿ: ಡಾ. ಪ್ರಭಾಕರ ಕೋರೆ

ಹಾವೇರಿ, 16: ವಿಶ್ವದಲ್ಲೇ ಸರ್ವಮಾನ್ಯವಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಪ್ರಜೆಗಳೇ ಪ್ರಭುಗಳಾಗಿ ದೇಶದ ಅಭಿವೃದ್ಧಿಗೋಸ್ಕರ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಹಾವೇರಿ ಅಂಗಸಂಸ್ಥೆಗಳ ಸ್ಪಂದನಾ ಕಾರ್ಯಕ್ರಮದಲ್ಲಿ ಕೆ. ಎಲ್. ಇ. ಸಂಸ್ಥೆಯ ಕಾಯರ್ಾಧ್ಯಕ್ಷ ಡಾ|| ಪ್ರಭಾಕರ ಬಿ. ಕೋರೆ ಹೇಳಿದರು. 

    ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಸುಭದ್ರ ಮತ್ತು ಸಮೃದ್ಧ ರಾಷ್ಟ್ರ ನಿಮರ್ಾಣಕ್ಕಾಗಿ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಜಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತ ನೀಡುವುದರ ಜೊತೆಗೆ ಎಲ್ಲರಿಗೂ ದೇಶಾಭಿವೃದ್ಧಿ ಕುರಿತು ಮನವರಿಕೆ ಮಾಡಬೇಕಿದೆ. ನೆರೆ ರಾಷ್ಟ್ರಗಳೊಂದಿಗೆ ಅಮೂಲ್ಯ ಸಂಬಂಧ ಬೆಳೆಸಿ ಎಲ್ಲರಲ್ಲೂ ಶ್ರೇಷ್ಠ ವ್ಯಕ್ತಿತ್ವದ ಛಾಪು ಮೂಡಿಸಿರುವಂತಹ ಮೋದಿಯವರನ್ನು ಇನ್ನೊಮ್ಮೆ ಈ ದೇಶದ ಪ್ರಧಾನಿಯನ್ನಾಗಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕಿದೆ ಎಂದರು. 

ಹಾನಗಲ್ ಶಾಸಕ ಸಿ. ಎಮ್. ಉದಾಸಿ ಮಾತನಾಡಿ ಈ ದೇಶದ ವ್ಯವಸ್ಥೆಯ ಬದಲಾವಣೆಗಾಗಿ ಮತ್ತು ಬೆಳವಣಿಗೆಗಾಗಿ ಪ್ರತಿಯೊಬ್ಬ ಮತದಾರನೂ ಜವಾಬ್ದಾರಿ ಅರಿತು ಮತದಾನ ಮಾಡಬೇಕಿದೆ. ಕೇವಲ 4 ವರ್ಷಗಳಲ್ಲಿ ಅಮೂಲಾಗ್ರ ಅಭಿವೃದ್ಧಿ ಮಾಡಿದ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸಕರ್ಾರ ಮತ್ತೆ ಅಧಿಕಾರಕ್ಕೆ ಬಂದರೆ ಇಡೀ ವಿಶ್ವವೇ ಭಾರತದತ್ತ ನೋಡುವಂತಾಗುತ್ತದೆ ಎಂದರು. 

              ಕೆ.ಎಲ್.ಇ. ನಿದರ್ೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ ಇವತ್ತಿನ ಪರಿಸ್ಥಿತಿಯಲ್ಲಿ ಮೋದಿ ಅಲೆ ಎಲ್ಲೆಡೆಗೂ ವ್ಯಾಪಿಸಿದ್ದು, ಬುದ್ಧಿ ಜೀವಿಗಳಾದವರು ಸರಿಯಾದ ದೃಷ್ಠಿಕೋನ ಮತ್ತು ನೇರ ಉದ್ದೇಶಗಳನ್ನು ಹೊತ್ತಿರುವ ನರೇಂದ್ರ ಮೋದಿ ನೇತೃತ್ವದ ಆಡಳಿತಕ್ಕೆ ಇನ್ನೊಮ್ಮೆ ಅಧಿಕಾರ ನೀಡುವುದೆಂಬ ನಂಬಿಕೆ ನನ್ನದಾಗಿದೆ. ಸಮೃದ್ಧ ಭಾರತ ನಿಮರ್ಿಸುವ ಕನಸ್ಸು ಹೊತ್ತಿರುವ ಅವರ ಆಶಯಗಳಿಗೆ ನಾವುಗಳೆಲ್ಲ ತಪ್ಪದೇ ಮತದಾನ ಮಾಡಿ ಮತ್ತೆ ಭಾರತವನ್ನು ಜಗದ್ಗುರು ಸ್ಥಾನಕ್ಕೆ ಕೊಂಡೊಯ್ಯಬೇಕಿದೆ ಎಂದರು. 

       ವೇದಿಕೆಯಲ್ಲಿ ಕೆ.ಎಲ್.ಇ. ಸಂಸ್ಥೆಯ ಉಪಾಧ್ಯಕ್ಷ ಎಮ್. ಸಿ. ಕೊಳ್ಳಿ, ಸಿ. ಆರ್. ಬಳ್ಳಾರಿ, ಸದಸ್ಯರಾದ ಬಸವರಾಜ ಮಾಸೂರ, ಎಸ್. ಎಮ್. ಹುರಳಿಕುಪ್ಪಿ, ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ, ಪ್ರೊ. ಜೆ. ಆರ್. ಸಿಂಧೆ, ಪ್ರೊ. ಬಿ. ಚನ್ನಪ್ಪ, ಪ್ರೊ. ರಾಣಿ ಯೂಹಾನನ್ ಉಪಸ್ಥಿತರಿದ್ದರು. 

           ಜಿಲ್ಲಾ ಜಿ.ಜೆ.ಪಿ. ಸಂಘಟನಾ ಕಾರ್ಯದಶರ್ಿ ಸಿದ್ಧರಾಜ ಕಲಕೋಟಿ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾಯರ್ಾಧ್ಯಕ್ಷ ಪಿ. ಡಿ. ಶಿರೂರ ಸ್ವಾಗತಿಸಿದರು. ಪ್ರೊ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. 

 ಕಾರ್ಯಕ್ರಮದಲ್ಲಿ ಜಿ.ಹೆಚ್. ಕಾಲೇಜ್, ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್, ಕೆ.ಎಲ್.ಇ. ಆಂಗ್ಲ ಶಾಲೆ, ಹಾನಗಲ್ ಕೆ.ಎಲ್.ಇ. ಕಾಲೇಜುಗಳ ಬೊಧಕ-ಬೋಧಕೇತರ ಸಿಬ್ಬಂದಿ ಜ್ಯೋತಿ ಬುದ್ದಿಮಾಂಧ್ಯ ಮಕ್ಕಳ ವಸತಿ ಶಾಲೆ,. ಎನ್. ಎಚ್. ದಯಾನಂದ, ಜ್ಞಾನ ಜ್ಯೋತಿ ಅಂಧ ಮಕ್ಕಳ ವಸತಿ ಶಾಲೆ, ಬೀರೇಶ್ವರ ಸ್ವಾಹಾರ್ಧ ಸಹಕಾರಿ ಬ್ಯಾಂಕ್, ಸಿಬ್ಬಂದಿವರ್ಗ, ಡಾ. ಪ್ರಭಾಕರ ಕೋರೆ, ಸೌಹಾರ್ಧ ಸಹಕಾರಿ ಬ್ಯಾಂಕಿನ ಸಿಬ್ಬಂದಿ ವರ್ಗ ಹಾಗೂ ಅಭಿಮಾನಿಗಳು ತಮ್ಮ ಬೆಂಬಲ ಹಾಗೂ ಧನ್ಯವಾದಗಳನ್ನು ಸೂಚಿಸಿದರು.