ಮಾಂಜರಿ: ಬಿಸಿಲಿನ ಬೇಗೆಯಿಂದ ಜನರು ಮಡಿಕೆಗಳಿಗೆ ಮೊರೆ

ಸಂತೋಷ ಕುಮಾರ ಕಾಮತ

ಮಾಂಜರಿ 26:  ಬಡವರ ಪ್ರಿಡ್ಜ ಎಂದೇ ಹೆಸರಾದ ಮಣ್ಣಿನ ಬಿಂದಿಗೆಗಳಿಗೆ ಬೇಸಿಗೆ ಬಂದರೆ ಸಾಕು ಅಪಾರ ಬೇಡಿಕೆ ಸುಡುವ ಬಿಸಿಲಿನಲ್ಲಿ ಬಡ ಜನರು ಇಂತಹ ಮಡಿಕೆಗಳಿಗೆ ಮೊರೆ ಹೋಗುವುದು ಸವರ್ೆ ಸಾಮಾನ್ಯ ಕಾರಣ ತಣ್ಣನೆಯ ನೀರು ಅಮೃತಕ್ಕೆ ಸಮಾನ ಬೇಸಿಗೆಯ ಕಾಲದಲ್ಲಿ ಕಡಿಮೆ ಖಚರ್ಿಗೆ ಸಿಗುವ ಎಕೈಕ ಫ್ರಿಡ್ಜ ಇದು ಆದರೆ ಈ ಬಾರಿ ಶೇ. 40 ರಷ್ಟು ಬೆಲೆ ದುಬಾರಿಯಾಗಿವೆ.

ಇಂದು ಗಡಿಗ್ರಾಮಗಳಲ್ಲಿ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸರಾಸರಿ 35 ರಿಂದ 37 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ಏರುತ್ತಿದೆ ಇದರಿಂದಾಗಿ ಸಾರ್ವಜನಿಕರು ಮಣ್ಣಿನ ಮಡಿಕೆಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ ಕಳೆದ ಸಾಲಿಗಿಂತಲೂ ಈ ಬಾರಿ ಶೇ 40 ರಷ್ಟು ಬೆಲೆ ದುಬಾರಿಯಾದರೂ ಖರೀದಿಸಲು ಮುಂದಾಗುತ್ತಿದ್ದಾರೆ. ಸರಾಸರಿ 150 ರಿಂದ 300 ರೂ. ಗಳವರೆಗೆ ಒಂದು ಮಾರಾಟವಾಗುತ್ತಿವೆ ಕೆಲವರು ಗ್ರಾಮೀಣ ಭಾಗದಲ್ಲಿ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಮಡಿಕೆಗಳನ್ನು ಖರೀದಿಸುತ್ತಿದ್ದಾರೆ ಇನ್ನೂ ಕೆಲವರು ಪಟ್ಟಣ ಪ್ರದೇಶಗಳಿಗೆ ತೆರಳಿ ನಗೆನಗೆಯ ವಿನ್ಯಾಸಗಳಲ್ಲಿ ತಯಾರಿಸಿದ ಮಡಿಕೆಗಳನ್ನು ಮನೆಗೆ ಒಯ್ಯುತ್ತಿದ್ದಾರೆ.

ಈ ಬಿಂದಿಗೆಗಳನ್ನು ಮಣ್ಣಿನಿಂದ ತಯಾರಿಸುತ್ತಾರೆ ಬಿಸಿಲಿನ ಬೇಗೆಯಿಂದ ಜನರು ತಮ್ಮ ಬಾಯಾರಿಕೆ ನೀಗಿಸಲು ಈ ಮಣ್ಣಿನಿಂದ ತಯಾರಾಸ ಮಡಿಕೆಗಳನ್ನೇ ಖರಿದಿಸುತ್ತಿದ್ದಾರೆ ಇಂದಿನ ದಿನಗಳಲ್ಲಿ ಜನ ಎಲೇಕ್ಟ್ರಾನಿಕ ವಸ್ತುಗಳತ್ತ ಮೊರೆ ಹೊಗುತ್ತಿದ್ದಾರೆ ಆದರೂ ಸಹ ಎಷ್ಟೇ ಆಧುನಿಕ ತಂಝತ್ರಜ್ಞಾನ ಮುಂದುವರೆದರೂ ಬೇಸಿಗೆ ಕಾಲದಲ್ಲಿ ಮಣ್ಣಿನ ಗಡಿಗಳನ್ನು ಇವೇ ನಮ್ಮಂಥ ಬಡವರ ಫ್ರೀಡ್ಕ್ ಎಂದು ಬಡವರು, ಮಧ್ಯಮ ವರ್ಗದವರು, ಕೂಲಿ ಕಾಮರ್ಿಕರು ಭಾವಿಸಿ ಖರೀದಿಸುತ್ತಾರೆ.

ನಾಲ್ಕು ತಿಂಗಳ ಬೇಸಿಗೆಯ ಬಿಸಿಲಿನ ತಾಪದಿಂದ ತಣ್ಣನೆಯ ನೀರನ್ನು ಕುಡಿಯುವುದಕ್ಕೋಸ್ಕರ ಜನರು ಇಂತಹ ಮಡಿಕೆಗಳನ್ನು ಖರೀದಿಸುತ್ತಾರೆ ಹತ್ತು ವರ್ಷಗಳ ಹಿಂದೆ ತಯಾರಿಸುತ್ತಿರುವ ಮಡಿಕೆಗಳನ್ನು ಈಗ ಹೊಸ ವಿನ್ಯಾಸಗಳೊಂದಿಗೆ ಹೊಸರೂಪ ಕೊಟ್ಟು ತಯಾರಿಸಲಾಗುತ್ತಿದೆ ಈ ಸಾಲಿನಲ್ಲಿ ಭಾರಿ ಪ್ರಮಾಣದಲ್ಲಿ ಬಿಸಿಲು ಬೀಳುತ್ತಿರುವುದರಿಂದ ಮಣ್ಣಿನ ಗಡಿಗೆಗಳಿಗೆ ಬೇಡಿಕೆ ಹೆಚ್ಚಾಗಿದೆ ಗ್ರಾಮೀಣ ಪ್ರದೇಶದ ಜನತೆ ಪಟ್ಟಣ ಪ್ರದೇಶಕ್ಕೆ ತೆರಳಿ ಮಣ್ಣಿನ ಗಡಿಗೆಗಳನ್ನು ಖರಿದಿಸುತ್ತಾರೆ ಬೇಸಿಗೆ ಕಾಲದಲ್ಲಿ ಕಡಿಮೆ ಖರ್ಚಿಗೆ ಸಿಗುವ ಎಕೈಕ ಫ್ರಿಡ್ಜ್ ಮಡಿಕೆ ಕಾರಣ ಇದರಲ್ಲಿನ ನೀರು ಅಮೃತ ಸಮಾನವಾಗಿರುತ್ತದೆ ಎಂಬುದು ರೈತಾಪಿ ವರ್ಗದ ಅಭಿಪ್ರಾಯವಾಗಿದೆ.