‘ಡಾ. ಅಂಬೇಡ್ಕರ್‌ರವರ ಕನಸು ನನಸಾಗಲು ಪ್ರತಿಯೊಬ್ಬರು ಶಿಕ್ಷಣವಂತರಾಗಿ’

‘To make Dr. Ambedkar’s dream come true, everyone should be educated’

‘ಡಾ. ಅಂಬೇಡ್ಕರ್‌ರವರ ಕನಸು ನನಸಾಗಲು ಪ್ರತಿಯೊಬ್ಬರು ಶಿಕ್ಷಣವಂತರಾಗಿ’ 


  ಸಿಂದಗಿ 18: ಡಾ. ಬಾಬಾಸಾಹೇಬ ಅಂಬೇಡ್ಕರ್‌ರವರ ಸಿದ್ದಾಂತಗಳು ನಮಗೆ ಇಂದಿಗೂ ಪ್ರೇರಣೆ ಆಗಿದ.ೆ ಶಿಕ್ಷಣ ಸಂಘಟನೆ ಮತ್ತು ಹೋರಾಟ ಸತತ ನಡೆದರೂ ಮಕ್ಕಳು ಇಂದಿಗೂ ಶಿಕ್ಷಣದಿಂದ ವಂಚಿತರಾಗಿದ್ದಾರೆ ಈ ರೀತಿ ಆದ್ದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್‌ರವರ ಕನಸು ನನಸು ಆಗಲು ಸಾಧ್ಯವಿಲ್ಲ. ಅವರ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದು ಫಾದರ್ ಸಂತೋಷ್ ಹೇಳಿದರು.  

          ಸಿಂದಗಿ ನಗರದಲ್ಲಿರುವ ಸಂಗಮ ಸಂಸ್ಥೆಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ 134ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶದಲ್ಲಿ ನ್ಯಾಯ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಭಾರತದ ಸಂವಿಧಾನ. ಡಾ. ಬಿ ಆರ್ ಅಂಬೇಡ್ಕರರವರು ಸಂವಿಧಾನವನ್ನು ನೀಡದೆ ಹೋಗಿದ್ದರೆ ನಾವು ಯಾರು ಇಲ್ಲಿ ಇರುತಿರಲಿಲ್ಲ. ಅದೇ ರೀತಿ ನಮಗೆ ಅನ್ಯಾಯ ಅದಾಗ ನಮ್ಮ ರಕ್ಷಣೆಗೆ ಬರುವುದು ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರು ರಚಿಸಿರುವ ಕಾನೂನು ಎಂದರು.  

       ಆರೋಗ್ಯ ಇಲಾಖೆಯ ಸಿಬ್ಬಂದಿ ನಾಗರತ್ನ ತಿಳಗೂಳ ಮತ್ತು ಮಕ್ಕಳ ಪ್ರತಿನಿಧಿ ಕುಮಾರ ಭಾಗಣ್ಣ ಕುಂಬಾರ ಸೇರಿದಂತೆ ವಿವಿದ ಹಳ್ಳಿಯಿಂದ ಮಕ್ಕಳು, ಪಾಲಕರು ಮತ್ತು ವಿವಿಧ ಸಂಘಟನೆಯ ಮಹಿಳೆಯರು ಉಪಸ್ಥಿತರಿದ್ದರು.  

       ಮಲಕಪ್ಪ ಹಲಗಿ ನಿರೂಪಿಸಿದರು, ರಾಜೀವ ಕುರಿಮನಿ ಸ್ವಾಗತಿಸಿದರು. ಬಸವರಾಜ್ ಬಿಸನಾಳರವರು ವಂದಿಸಿದರು.