ಬೆಳಗಾವಿ 10: ಸಂತೋಷ ಮತ್ತು ದು:ಖಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ವಿದ್ಯಾರ್ಥಿಗಳು ಕನ್ನಡ ಲೇಖಕರ ಕೃತಿಗಳನ್ನು ಓದಬೇಕು, ಅದು ಅವರ ವ್ಯಕ್ತಿತ್ವವನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದು ನಟ ಅನಂತ ಕೃಷ್ಣ ದೇಶಪಾಂಡೆ ಅವರು ಹೇಳಿದರು.
ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಕನ್ನಡ ಬಳಗ ವಿಭಾಗವು ಆಯೋಜಿಸಿದ್ದ ಕನ್ನಡ ನುಡಿ ವೈಭವ’ ಕನ್ನಡೋತ್ಸವವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ದ.ರಾ. ಬೇಂದ್ರೆಯ ಕೃತಿಗಳು ಹಾಗೂ ಸಾಧನೆಗಳ ಬಗ್ಗೆ ಅವರು ವಿವರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಋಇಖ ಕಾಲೇಜಿನ ಆಡಳಿತ ಮಂಡಳಿಯ, ಅಧ್ಯಕ್ಷರು ಹಾಗೂ ಖಐಐಅ ಗವರ್ನಿಂಗ್ ಕೌನ್ಸಿಲ್ನ ಸದಸ್ಯ ಆರ್.ಎಸ್. ಮುತಾಲಿಕ್ ಅವರು ಕನ್ನಡ ಸಾಹಿತ್ಯ ಮತ್ತು ‘ಹಳೆ ಕನ್ನಡ’ ಸಾಹಿತಿಗಳು, ಕವಿಗಳ, ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಎ.ಹೆಚ್. ಹವಾಲದಾರ ಅವರು ಕನ್ನಡ ಬಳಗ ವಿಭಾಗದ ಸಾಧನೆಗಳ ಬಗ್ಗೆ ತಿಳಿಸಿದರು. ಪ್ರೊಫೆಸರ್ ಮೋನಿಷಾ ಸ್ವಾಮಿ ಸಮಾರಂಭಕ್ಕೆ ಸ್ವಾಗತ ಕೋರಿದರು. ಕನ್ನಡ ಬಳಗದ ಕಾರ್ಯದರ್ಶಿ ಮಲ್ಲಿಕಾರ್ಜುನ್ ಪೂಜಾರಿ 2024-25 ಶೈಕ್ಷಣಿಕ ವರ್ಷದ ಕನ್ನಡ ಬಳಗದ ಚಟುವಟಿಕೆಗಳ ವಿವರ ನೀಡಿದರು. ಪವನ್ ಶಿರೋಳ ಕಾರ್ಯಕ್ರಮವನ್ನು ನಿರ್ವಹಿಸಿದರು. ಪಲ್ಲವಿ ತಳವಾರ ಸಮಾರೋಪ ಭಾಷಣ ಮಾಡಿದರು.