ಮಹಾಲಿಂಗಮ್ಮ ನಿಂಗಪ್ಪ ಸಾವಳಗಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ
ಧಾರವಾಡ 10 : ಶಿವಶರಣೆ ಅಕ್ಕ ನಾಗಮ್ಮ ಶರಣ ಚಳುವಳಿಯ ಸಾಕ್ಷಿ ಪ್ರಜ್ಞೆಯಾಗಿದ್ದಳು. ಬಸವಣ್ಣನವರಲ್ಲಿಆತ್ಮ ಶಕ್ತಿ ತುಂಬಿದವಳೇ ಅಕ್ಕನಾಗಮ್ಮಎಂದುಡಾ. ವೀಣಾಯಲಿಗಾರ ಹೇಳಿದರು ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ದಿ.ಶ್ರೀಮತಿ ಮಹಾಲಿಂಗಮ್ಮ ನಿಂಗಪ್ಪ ಸಾವಳಗಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ‘ಮಹಾನ್ ಮಹಿಳೆ ಶರಣೆ ಅಕ್ಕ ನಾಗಲಾಂಬಿಕೆ’ ವಿಷಯ ಕುರಿತು ಮಾತನಾಡುತ್ತಿದ್ದರು.ಮುಂದುವರೆದು ಮಾತನಾಡಿದ, ಮಹಾಶಿವಶರಣೆ ಅಕ್ಕ ನಾಗಮ್ಮನು ಬಸವಣ್ಣನವರ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಬಸವಣ್ಣನವರ ಎಲ್ಲಾ ಹೋರಾಟಕ್ಕೆ ಬೆಂಗಾವಲಾಗಿ ನಿಂತುಚೈತನ್ಯ ಸ್ವರೂಪಗಳಾಗಿದ್ದಲ್ಲದೆ ಬಸವಣ್ಣನವರ ಉಜ್ವಲ ಭವಿಷ್ಯ ನಿರ್ಮಿಸುವಲ್ಲಿ ಪ್ರೇರಕ ಶಕ್ತಿಯಾಗಿದ್ದಳು.ಬಸವಣ್ಣನವರ ಸಮ ಸಮಾಜ ಹಾಗೂ ಸ್ವಾತಂತ್ರ್ಯದ ಕಲ್ಪನೆಗೆ ಮತ್ತು ಬಸವಣ್ಣನವರು ಜಗತ್ತಿನ ಮೊದಲ ವಿಚಾರವಾದಿಯಾಗಿ ರೂಪಗೊಳ್ಳಲು ಅಕ್ಕ ನಾಗಮ್ಮ ಸಹೋದರನಿಗೆ ನೀಡಿದ ಸಂಸ್ಕಾರವೇ ಕಾರಣ.ಅನುಭವ ಮಂಟಪದಲ್ಲೂ ಸಕ್ರೀಯ ಪಾತ್ರ ವಹಿಸಿದ್ದಳು.ಈ ತಾಯಿಯತ್ಯಾಗ, ನಿಸ್ವಾರ್ಥತೆ, ಇಡೀ ಶರಣ ಸಂಕುಲಕ್ಕೆ ಮಾದರಿ.ಎಲ್ಲಾ ಶರಣರಿಗೂತಾಯಿ ಸ್ವರೂಪಗಳಾಗಿದ್ದಳು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕತಾರದೋಹಾ ಬೌತಚಿಕಿತ್ಸಕಡಾ.ಸಿ.ಜಿ. ಪ್ರಶಾಂತ ಮಾತನಾಡಿ, ಮಹಾಲಿಂಗಮ್ಮ ಸಾವಳಗಿಯವರು ಹೃದಯವಂತರು ಕುಟುಂಬ ವತ್ಸಲರು.ಎಲ್ಲರನ್ನೂ ಪ್ರೀತಿಸುವ ಅವರ ಗುಣದೊಡ್ಡದು. ನಾವು ಅವರಿಂದಕಲಿತ ಸಹಕಾರ ಗುಣ, ಜವಾಬ್ದಾರಿ ನಿರ್ವಹಣೆಎಂದು ಮರೆಯಲು ಸಾಧ್ಯವಿಲ್ಲ. ನಮಗೆಲ್ಲ ಜೀವನದಲ್ಲಿ ಬದುಕಿನ ಪಾಠ ಹೇಳಿ ಜೀವನ ಮೌಲ್ಯತುಂಬಿದ ಮಹಾತಾಯಿ ಎಂದು ಹೇಳಿದರು.ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು.ದತ್ತಿದಾನಿಗಳ ಪರವಾಗಿರಾಜೇಂದ್ರ ಸಾವಳಗಿ ದತ್ತಿಆಶಯಕುರಿತು ಮಾತನಾಡಿದರು. ಮಾಳಮಡ್ಡಿಯ ಶಾರದಾ ಭಜನಾ ಮಂಡಳ ಸದಸ್ಯರು ಪ್ರಾರ್ಥಿಸಿದರು.ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಂಕರ ಕುಂಬಿ ನಿರೂಪಿಸಿದರು.ಡಾ. ಶೈಲಜಾಅಮರಶೆಟ್ಟಿ ವಂದಿಸಿದರು.ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ವೀರಣ್ಣಒಡ್ಡೀನ, ಡಾ.ಮಹೇಶ ಹೊರಕೇರಿ, ಸುರೇಶ ಸಾವಳಗಿ, ಡಾ.ವೀಣಾ ಸಂಕನಗೌಡರ, ಡಾ.ಪಾರ್ವತಿ ಹಾಲಭಾವಿ, ಪ್ರಮೀಳಾ ಜಕ್ಕಣ್ಣವರ, ಪಾರ್ವತಿ ಹಾಲಭಾವಿ, ಬಿ.ಎಸ್. ಶಿರೋಳ, ಡಾ.ಚಂದ್ರಶೇಖರರೊಟ್ಟಿಗವಾಡ, ಡಾ.ಮಾರ್ಕಂಡೇಯದೊಡಮನಿ, ಶಂಕರಲಿಂಗ ಶಿವಳ್ಳಿ, ಸುರೇಶ ಹಾಲಭಾವಿ, ಎಸ್.ಜಿ. ಪಾಟೀಲ, ಸಿ.ಎಸ್. ಪಾಟೀಲಕುಲಕರ್ಣಿ, ಮಹಾಂತೇಶ ನರೇಗಲ್ ಸೇರಿದಂತೆ ಸಾವಳಗಿ ಕುಟುಂಬದವರು ಉಪಸ್ಥಿತರಿದ್ದರು.