ಅಪಘಾತದಲ್ಲಿ ನಿಧನ: ವಾರಸುದಾರರಿಗೆ ಧನಸಾಯದ ಚೆಕ್ ವಿತರಣೆ
ಮಾಂಜರಿ 13: ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ್ ಕೋರೆ ಇವರು ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಮುಖಾಂತರ ಮಾಡಿರುವ ಅಕ್ಷರ ದಾಸೋಹ ಕಾರ್ಯ ಹಾಗೂ ಸಹಕಾರಿ ಸಂಸ್ಥೆಯ ಮತ್ತು ಕೆಎಲ್‌ಇ ಆಸ್ಪತ್ರೆಯ ಮುಖಾಂತರ ಮಾಡುತ್ತಿರುವ ಆರೋಗ್ಯ ಸೇವೆಯ ಕಾರ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ ಎಂದು ಡಾ ಪ್ರಭಾಕರ್ ಕೋರೆ ಕೋಪ ಕ್ರೆಡಿಟ್ ಸೊಸೈಟಿಯ ಶಿವಶಕ್ತಿ ಶುಗರ್ಸ್ ಆವರಣದಲ್ಲಿರುವ ಶಾಖೆಯ ಸಲಹಾ ಸಮಿತಿಯ ಅಧ್ಯಕ್ಷ ಬಾಲಚಂದ್ರ ದತ್ತವಾಡೇ ಹೇಳಿದರು.
ಅವರು ಸೋಮವಾರದಂದು ಶಾಖೆಯ ಸಭಾಭವನದಲ್ಲಿ ಆಯೋಜಿಸಲಾದ ಡಾ ಪ್ರಭಾಕರ್ ಕೋರೆ ಕೋ. ಆಪರೆಟಿವ್ ಸೊಸೈಟಿಯ ಸದಸ್ಯ ಭೀಮ ಮಾಳಿ ಇವರು ಇತ್ತೀಚೆಗೆ ಅಪಘಾತದಲ್ಲಿ ನಿಧನ ಹೊಂದಿದ್ದರಿಂದ ಅವರ ವಾರಸದಾರರಿಗೆ ಸಂಸ್ಥೆಯ ಮುಖಾಂತರ ಮಾಡಿರುವ ಜೀವವಿಮ ಯೋಜನೆಯ ಮುಖಾಂತರ ಮಂಜೂರಾತಿ ಪಡೆದ ಅಪಘಾತ ವಿಮೆ ಒಂದು ಲಕ್ಷ ಧನಸಾಯದ ಚೆಕ್‌ನ್ನು ವಿತರಿಸಿ ಮಾತನಾಡುತ್ತಿದ್ದರು.
ಶಿವಶಕ್ತಿ ಶುಗರ್ಸ ಅಧಿಕಾರಿ ಬಿ ಎ ಪಾಟೀಲ್ ಅಜಿತ ಸಂಗಮೇಶ್ವರ, ಬಸಪ್ಪಾ ಪಡಲಾಳ ,ಬಾಬು ಪಾಟೀಲ, ಅಣ್ಣಪ್ಪಾ ಖೋತ, ರಾಮು ಮಾಳಿ ಮತ್ತು ಕಲಪ್ಪಾ ನಿಂಗನೂರೆ ಸೆರಿದಂತೆ ವ್ಯವಸ್ಥಾಪಕ ನಿರ್ದೆಶಕರಾದ ದೇವೇಂದ್ರ ಕರೊಶಿ, ಶಾಖಾ ವ್ಯವಸ್ಥಾಪಕ ಚಿದಾನಂದ ಸರಡೆ ಹಾಗೂ ವಿಮೆ ವಿಭಾಗದ ವ್ಯವಸ್ಥಾಪಕ ರಾವಸಾಹೇಬ ಗುಂಡಕಲ್ಲೆ ಉಪಸ್ಥಿತರಿದ್ದರು.