ಅಂಬೇಡ್ಕರ್ ಸೇನೆ ತಾಲೂಕ ಘಟಕದ ಪದಾಧಿಕಾರಿಗಳ ಸಭೆ ಸಂಘಟನೆ ನೊಂದವರ ಧ್ವನಿ ಆಗಬೇಕು: ಬಸ್ಸು ಮಾದರ
ತಾಳಿಕೋಟಿ, 18 : ಸಂಘಟನೆಗಳು ಸಮಾಜದಲ್ಲಿ ಅನ್ಯಾಯ, ದೌರ್ಜನ್ಯ ಹಾಗೂ ತುಳಿತಕ್ಕೆ ಒಳಗಾದ ಜನರ ಧ್ವನಿಯಾಗಿ ಕೆಲಸ ಮಾಡಬೇಕು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಬದುಕು ನಮಗೆ ಮಾದರಿ ಯಾಗಬೇಕು ಎಂದು ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಬಸ್ಸು ಮಾದರ (ಕಟ್ಟಿಮನಿ) ಹೇಳಿದರು.
ರವಿವಾರ ಪಟ್ಟಣದ ಪ್ರವಾಸಿ ಮಂದರದಲ್ಲಿ ನಡೆದ ಅಂಬೇಡ್ಕರ್ ಸೇನೆ ತಾಲೂಕ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ತಾಳಿಕೋಟಿ ತಾಲೂಕ ಘಟಕದ ಅಧ್ಯಕ್ಷ ಗೋಪಾಲ ಕಟ್ಟಿಮನಿ ಮಾತನಾಡಿ ಪದಾಧಿಕಾರಿಗಳು ಸಂಘಟನೆ ನಿಯಮ ಹಾಗೂ ಶಿಸ್ತನ್ನು ಕಡ್ಡಾಯವಾಗಿ ಪಾಲಿಸಬೇಕು ಯಾವುದೇ ರೀತಿಯ ಅಪಪ್ರಚಾರ ಹಾಗೂ ವಿವಾದಗಳಿಗೆ ಅವಕಾಶ ಮಾಡಿ ಕೊಡಬಾರದು, ಡಾ.ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ಸಂಘಟನೆ ತನ್ನ ಉದ್ದೇಶದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಸಂಘಟನೆಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಮೆಹಬೂಬ್ ಆರ್.ಅವಟಿ ಹಾಗೂ ಉಪಾಧ್ಯಕ್ಷರಾಗಿ ಮೌಲಾಲಿ ಪಿಂಜಾರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಆದೇಶ ಪತ್ರ ವಿತರಿಸಲಾಯಿತು. ಸಭೆಯಲ್ಲಿ ಕಾರ್ಯದರ್ಶಿ ಮಹಾದೇವ ಅಸ್ಕಿ, ಅಂಬೇಡ್ಕರ್ ಸೇನೆ ತಾಲೂಕ ಉಪಾಧ್ಯಕ್ಷ ಸೋಮು ಚಕ್ರವರ್ತಿ, ಪದಾಧಿಕಾರಿಗಳಾದ ಮರಿಯಪ್ಪ ಚಲವಾದಿ, ಚಾಂದ್ ಬಾಷಾ ವಜ್ಜಲ್, ಪರುಶುರಾಮ ನಾಲತವಾಡ ಯಮನಪ್ಪ ಶಿವಪುರ ನಾಗರಾಜ ಗಜಕೋಶ, ಮಡು ಚಲವಾದಿ,ಶಿವು ವನಹಳ್ಳಿ, ಬಾಗಪ್ಪ ಮಸ್ಕಿನಾಳ,ಕಾಶಿನಾಥ ವಜ್ಜಲ, ಮಾನಪ್ಪ ಶಿರೋಳ ಮತ್ತಿತರರು ಇದ್ದರು.