ಬುದ್ಧ ಜಯಂತಿ ಅಂಗವಾಗಿ ಉಚಿತ ಆರೋಗ್ಯ ತಪಾಸನೆ ಶಿಬಿರ
ಕಾಗವಾಡ, 18: ಆರೋಗ್ಯ ಶಿಬಿರದ ಮುಖ್ಯ ಉದ್ದೇಶವೇಂದರೆ ಸಮುದಾಯದ ಪ್ರತಿಯೊಬ್ಬರು ಆರೊಗ್ಯದಿಂದ ಬಾಳಬೇಕು, ಬದುಕಬೇಕು. ಆರೊಗ್ಯದಿಂದ ಇರುವುದು ನನ್ನ ಜನ್ಮ ಸಿದ್ದ ಹಕ್ಕು ಎಂದು ತಿಳಿದು ಕೊಳಬೇಕೆಂದು ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ಮಂಜುನಾಥ ಕೂಡಲಗಿ ಹೇಳಿದರು.
ಅವರು ಶನಿವಾರ ದಿ. 17ರಂದು ತಾಲೂಕಿನ ಐನಾಪುರ ಪಟ್ಟಣದ ಜೈ ಭೀಮ ನಗರದಲ್ಲಿರುವ ಕರುಣಾ ಬೌದ್ಧ ವಿಹಾರದಲ್ಲಿ ದ ಬುಧಿಷ್ಟ ಸೊಸೈಟಿ ಆಫ್ ಇಂಡಿಯಾ, ಭಾರತೀಯ ಬೌದ್ಧ ಮಹಾಸಭಾ, ಛಲವಾದಿ ಮಹಾಸಭಾ ಐನಾಪೂರ, ಸಮುದಾಯ ಅರೋಗ್ಯ ಕೇಂದ್ರ ಕಾಗವಾಡ, ಪ್ರಾಥಮಿಕ ಅರೋಗ್ಯ ಕೇಂದ್ರ ಐನಾಪೂರ ಹಾಗೂ ಪಟ್ಟಣ ಪಂಚಾಯತ್ ಐನಾಪೂರ ಇವರ ಸಂಯುಕ್ತ ಆಶ್ರಯದಲ್ಲಿ ತಥಾಗತ ಗೌತಮ ಬುದ್ಧ ಜಯಂತಿಯ ಅಂಗವಾಗಿ ಏರಿ್ಡಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗೌತಮ ಬುದ್ಧ ಹಾಗೂ ಡಾ ಬಾಬಾಸಾಬ ಅಂಬೆಡ್ಕರವರ ವಿಗ್ರಹಗಳಿಗೆ ಪೂಜೆ ಸಲ್ಲಿಸಿ, ಚಾಲನೆ ನೀಡಿ, ಮಾತನಾಡುತ್ತಿದ್ದರು.
ಸಮುದಾಯದಲ್ಲಿ ಕಾನ್ಸರ್ ಎಚ್ಐವ್ಹಿ, ಬಿಪಿ, ಶುಗರ್ ಕಾಯಿಲೆಗಳ ಬಗ್ಗೆ ಜಾಗೃತಿ ಇಲ್ಲದ ಕಾರಣ ಸಮುದಾಯದ ಜನರಿಗೆ ಕಾಡುತ್ತವೆ. ಅವುಗಳನ್ನು ದೂರ ಮಾಡುವದು ಅವಶ್ಯಕವಾಗಿದೆ. 65 ವಯಸ್ಸು ದಾಟಿದವರು, ಶುಗರ್ವಿರುವರು ತಪ್ಪದೆ ಟಿಬಿ ತಪಾಸಣೆ ಮಾಡಿಕೊಂಡು, ರೋಗದಿಂದ ಬಳಲುತ್ತಿರುವವರು, ರೋಗ ನಿರೋಧಕ ಬಿಸಿಜಿ ಲಸಿಕೆ ಮಾಡಿಸಿಕೊಂಡು, ಭಾರತವನ್ನು ಟಿಬಿ ರೋಗದಿಂದ ಮುಕ್ತ ಮಾಡಲು ಪಣತಡೋಣ ಎಂದರು.
ಈ ಆರೋಗ್ಯ ಶಿಬಿರದಲ್ಲಿ 200 ಕ್ಕೂ ಹೆಚ್ಚು ಜನ ಭಾಗವಹಿಸಿ ಅರ್ಡಲಟ್, ಬಿಸಿಜಿ ವ್ಯಾಕ್ಸಿನೇಷನ್, ಐಸಿಟಿಸಿ, ಎತ್ತರ, ತೂಕ, ಬಿಪಿ, ಶುಗರ್, ರಕ್ತ ತಪಾಸಣೆ, ಜನರಲ್ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಕಾಗವಾಡ ಸಮುದಾಯ ಕೇಂದ್ರದ ಶಿವಪ್ಪಾ ಯಡ್ರಾಂವಿ, ಡಾ. ಶಿವಕುಮಾರ ಹೊನಕಾಂಬಳೆ, ಸಿಎಚ್ಒ ಗೋಪಾಲ ವಂಟಗುಡೆ, ಅಶ್ಪಕ್ ಅತ್ತಾರ, ಕೆ.ಬಿ. ಪವಾರ, ಶಿಕ್ಷಕ ಸಂಜಯ ಕುರಣೆ, ಹನಮಂತ ಮದಾಳೆ, ಲಖನ ಕಾಂಬಳೆ, ಮಹೇಶ ಜಯಕರ, ಅನೀಲ ತಳಕೇರಿ, ಚಂದ್ರಕಾಂತ ನಡೊಣಿ ಸೇರಿದಂತೆ ಎಲ್ಲ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು, ಮಹಿಳಾ ಸದಸ್ಯರು ಸಮಸ್ತ ನಾಗರಿಕರು, ಎಲ್ಲ ಸಮುದಾಯದ ನಾಗರೀಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.