ಕುಡಚಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ತಮ್ಮಣ್ಣವರ ಭೂಮಿಪೂಜೆ

Bhoomipuja by MLA Thammanna for development works in Kudachi constituency
ಕುಡಚಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ತಮ್ಮಣ್ಣವರ ಭೂಮಿಪೂಜೆ
ಹಾರೂಗೇರಿ03 : ಕುಡಚಿ ವಿಧಾನಸಭಾ ಮತಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಭೂಮಿಪೂಜೆ ನೇರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು.  
     30 ಲಕ್ಷರೂ ವೆಚ್ಚದಲ್ಲಿ ಅಲಖನೂರ ಗ್ರಾಮದ ಅಲಖನೂರ-ಕೋಳಿಗುಡ್ಡ ರಸ್ತೆ ಡಾಂಬರೀಕರಣ, 7.36 ಕೋಟಿ ರೂ ವೆಚ್ಚದಲ್ಲಿ ಕುಡಚಿ ಗ್ರಾಮೀಣ ಭಾಗದಲ್ಲಿ 2900 ಮನೆಗಳಿಗೆ ಕ್ರಿಯಾತ್ಮಕ ನಳ ಜೋಡಣೆ, 40ಲಕ್ಷ ರೂ ವೆಚ್ಚದಲ್ಲಿ ಕುಡಚಿ ಗ್ರಾಮದ ಕುಡಚಿ-ಶಿರಗೂರ ಸೀಮೆಯಿಂದ ಗುಂಡವಾಡ ಕೂಡು ರಸ್ತೆ ಡಾಂಬರೀಕರಣ, 30ಲಕ್ಷರೂ ವೆಚ್ಚದಲ್ಲಿ ಪರಮಾನಂದವಾಡಿ ಗ್ರಾಮದ ಪರಮಾನಂದವಾಡಿ-ಹಾಳಶಿರಗೂರ ರಸ್ತೆಯಿಂದ-ಖೇಮಲಾಪೂರ ಕೂಡು ರಸ್ತೆ ಡಾಂಬರೀಕರಣ, 50ಲಕ್ಷರೂ ವೆಚ್ಚದಲ್ಲಿ ಪರಮಾನಂದವಾಡಿ ಗ್ರಾಮದ ಪರಮಾನಂದವಾಡಿ-ಖೇಮಲಾಪೂರ ಮುಖ್ಯ ರಸ್ತೆಯಿಂದ ಚೌಗಲಾ ತೋಟದ ಕೂಡು ರಸ್ತೆ ಡಾಂಬರೀಕರಣ, 30ಲಕ್ಷರೂ ವೆಚ್ಚದಲ್ಲಿ ಖೇಮಲಾಪೂರ ಗ್ರಾಮದ ಗಸ್ತಿ ತೋಟದಿಂದ ವಡಗಿ ತೋಟದವರೆಗೆ ರಸ್ತೆ ಡಾಂಬರೀಕರಣ, 19ಲಕ್ಷರೂ ವೆಚ್ಚದ ಯಬರಟ್ಟಿ ಅಲಗೌಡಾ ಪಾಟೀಲ ತೋಟದಿಂದ ಹೀರೆಹಳ್ಳದವರೆಗೆ ರಸ್ತೆ ಡಾಂಬರೀಕರಣ. 
  2.18ಕೋಟಿರೂ ವೆಚ್ಚದಲ್ಲಿ ಅಳಗವಾಡಿ ಗ್ರಾಮದ ಹತ್ತಿರ ಹಳ್ಳಕ್ಕೆ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ ಕಾಮಗಾರಿ, 5.20 ಲಕ್ಷರೂ ವೆಚ್ಚದಲ್ಲಿ ನಿಡಗುಂದಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಕ್ಕೇರಿ ತೋಟದ ಶಾಲೆಗೆ ಶೌಚಾಲಯ ನಿರ್ಮಾಣ ಕಾಮಗಾರಿ, 48.62 ಲಕ್ಷರೂ ವೆಚ್ಚದಲ್ಲಿ ಮೊರಬ ಗ್ರಾಮದ ಸರಕಾರಿ ಪ್ರೌಢಶಾಲೆಯ 3ಕೊಠಡಿ ನಿರ್ಮಾಣ ಕಾಮಗಾರಿ, 5ಲಕ್ಷರೂ ವೆಚ್ಚದಲ್ಲಿ ಸುಟ್ಟಟ್ಟಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೇರವೇರಿಸಿದರು. 
  ನಂತರ ಮಾತನಾಡಿದ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಕುಡಚಿ ಮತಕ್ಷೇತ್ರದ ಪ್ರತಿಯೊಂದು ಗ್ರಾಮ ಮತ್ತು ಪಟ್ಟಣಗಳ ಅಭಿವೃದ್ಧಿಗೆ ಪೂರಕವಾಗಿ ಖುದ್ದಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಕುಡಚಿ ಮತಕ್ಷೇತ್ರದಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಅವರ ಗಮನಕ್ಕೆ ತಂದು ಕೋಟ್ಯಾಂತರ ರೂ. ಅನುದಾನವನ್ನು ಮಂಜೂರು ಮಾಡಿಸಿಕೊಂಡು ಬರಲಾಗಿದೆ. ಕ್ಷೇತ್ರದ ಪ್ರತಿಯೊಂದು ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.  ಕುಡಚಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಶಿವಪುತ್ರ ಹಾಡಕಾರ, ಗೋಪಾಲ ಹಂಜೆ, ಕರೆಪ್ಪ ಲಟ್ಟೆ, ಮುತ್ತಪ್ಪ ಬನಶಂಕರಿ, ಮಹಾವೀರ ಕರಿಗಾರ, ಪುಟ್ಟುರಾಜ ಗವಾಣಿ, ಪುಂಡಲೀಕ ಕೊಂಕಣೆ, ಸದಾಶಿವ ಹಿರೇಕೋಡಿ, ಅರುಣ ಠಕ್ಕಣ್ಣವರ, ದಿವಾಕರ, ಮಿಥುನ ಕಾಂಬಳೆ, ಸಹದೇವ ಪಾಟೀಲ, ಸುಭಾಸ ಕಾಂಬಳೆ, ಶರದ ಪಾಟೀಲ, ವಿನೋದ ಶಾಂಡಗೆ, ಲಕ್ಕಪ್ಪ ಬಾನೆ, ವರ್ಧಮಾನ ಶಿರಹಟ್ಟಿ, ಕಲ್ಮೇಶ ಕಾಂಬಳೆ, ಮಾರ್ತಾಂಡ ಧುಮಾಳೆ, ಗುರುನಾಥ ಖೋತ, ಗುತ್ತಿಗೆದಾರ ಸಂದೀಪ ಗಡ್ಡಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.