ಅನಂತಕುಮಾರ ಶ್ರದ್ಧಾಂಜಲಿ ಸಭೆಯಲ್ಲಿ ಬ್ರಾಹ್ಮಣ ಮುಖಂಡ ಅನಿಲ ಪೋತದಾರ

ಲೋಕದರ್ಶನ ವರದಿ

ಬೆಳಗಾವಿ: ನನ್ನದು ಹಾಗೂ ಅನಂತಕುಮಾರ  ಇಬ್ಬರ ನಡುವೆ ಅನ್ಯೋನ್ಯ ಸಂಬಂಧವಿತ್ತು. ನನ್ನದು ಕಾಂಗ್ರೆಸ್ ಪಕ್ಷ ಅವರದ್ದು ಬಿಜೆಪಿಯಾದರೂ ನಮ್ಮಿಬ್ಬರ ಆತ್ಮೀಯತೆಗೆ ಪಕ್ಷವೆಂದೂ ಅಡ್ಡಗೋಡೆಯಾಗಲಿಲ್ಲ.  ಜಾತಿ, ಮತ, ಪಂಥ ಮೀರಿ ನಿಂತ ವ್ಯಕ್ತಿ ಅವರಾಗಿದ್ದರು. ಅವರ ಸೇವೆ ಯಾವುದೇ ಒಂದೇ ಸಮಾಜಕ್ಕೆ ಸೀಮಿತವಾಗಿರಲಿಲ್ಲ. ಎಲ್ಲರಿಗೂ ಅವರ ಸಹಾಯ ಹಸ್ತ ತೆರೆದಿರುತ್ತಿತ್ತು ಎಂದು  ಬ್ರಾಹ್ಮಣ ಸಮಾಜ ಮುಖಂಡ ಅನಿಲ ಪೋತದಾರ ಇಂದಿಲ್ಲಿ ಹೇಳಿದರು.

ನಗರದ ರೇಲ್ವೆ ನಿಲ್ದಾಣದ ಹತ್ತಿರವಿರವ ಬಿ. ಕೆ.  ಮಾಡೆಲ್ ಹಾಯಸ್ಕೂಲ ಸಭಾಭವನದಲ್ಲಿ ಅಖಿಲ ಕನರ್ಾಟಕ ಬ್ರಾಹ್ಮಣ ಸಮಾಜ ಜಿಲ್ಲಾ  ಘಟಕದವರು ಸಂಸದೀಯ ವ್ಯವಹಾರಗಳ  ಸಚಿವ ಅನಂತಕುಮಾರ ಶ್ರದ್ಧಾಂಜಲ ಸಭೆಯಲ್ಲಿ ಮಾತನಾಡಿದ ಅನಿಲ ಪೋತದಾರ ಅನಂತಕುಮಾರ ಭಾವ ಚಿತ್ರಕ್ಕೆ ಪುಷ್ಪವನ್ನರ್ಪಸಿ ಮೇಲಿನ ಮಾತಗಳಿಂದ ಶ್ರದ್ಧಾಂಜಲಿಯನಪರ್ಿಸಿದರು.

ಅಧ್ಯಕ್ಷರಾದ ಎಸ್. ಎಂ.ಕುಲಕಣರ್ಿ ಮಾತನಾಡುತ್ತ ಅನಂತಕುಮಾರ ಅಧಮ್ಯಚೇತನವಾಗಿದ್ದರು.  ಕೃತಿಯಿಂದ ಸರ್ವಧರ್ಮ ಮನೋಭಾವ ಬೆಳೆಸಿಕೊಂಡವರು. ಸಮಾಜಮುಖಿ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದರು.

ಆರ್.ಎಸ್.ಎಸ್. ಕಾರ್ಯಕರ್ತ, ಅನಂತಕುಮಾರ ಒಡನಾಡಿಗಳಾದ  ರಾಘವೇಂದ್ರ ಕಾಗವಾಡ ಅವರು ಮಾತನಾಡಿ ಅನಂತ ಅಂದರೇನೆ ಬೃಹದಾಕಾರ ಎಂದು ಹೆಸರಿಗೆ ತಕ್ಕ ವ್ಯಕ್ತಿತ್ವ ಅನಂತಕುಮಾರ ಅವರದ್ದಾಗಿತ್ತು. ತಾವಷ್ಟೇ ಬೆಳೆಯದೇ ತಮ್ಮೊಂದಿಗೆ ಇತರರನ್ನು ಸಮರ್ಥವಾಗಿ ಬೆಳೆಸುವ ಕಾಳಜಿಯನ್ನು ಹೊಂದಿದ್ದರು. ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ನಡೆದ ಮೇರು ವ್ಯಕ್ತಿತ್ವ ಇವರದ್ದಾಗಿತ್ತು. 

ಅ.ಕ.ಬ್ರಾ. ಸಂಘದ ಜಿಲ್ಲಾ ಘಟಕದ ಕಾರ್ಯದಶರ್ಿಗಳಾದ ಆರ್. ಎಸ್. ಮುತಾಲಿಕ ಅವರು ಮಾತನಾಡುತ್ತ ಅನಂತಕುಮಾರ ಅವರು ರಾಜಕಾರಣಿಗಳೆಂದರೆ ಹೇಗಿರಬೇಕೆಂಬುದಕ್ಕೆ ಮಾದರಿಯಾಗಿದ್ದರು.  ರಾಜ್ಯ ಹಾಗೂ ಕೇಂದ್ರ ಸಕರ್ಾರದ ಕೊಂಡಿಯಾಗಿದ್ದ ಅವರ  ಸಾವು ರಾಷ್ಟ್ರಕ್ಕೆ ಆಘಾತವನ್ನುಂಟು ಮಾಡಿದೆಯೆಂದು ತಮ್ಮ ನೋವನ್ನು ಹಂಚಿಕೊಂಡರು.

ಶ್ರೀಧರ ಹುಕ್ಕೇರಿ ಮಾತನಾಡಿ ಹಿರಿಯ ನಾಯಕರಾದ ವಾಜಪೇಯಿ ಹಾಗೂ ಅದ್ವಾನಿಯವರ ಮೆಚ್ಚಿನ ಶಿಷ್ಯರಾಗಿದ್ದ ಅನಂತಕುಮಾರ ಅವರು ನಾಯಕತ್ವಕ್ಕೆ ಜೀವತುಂಬವಂತಹ ಕಾರ್ಯವನ್ನು ಮಾಡಿದರು. ತಮ್ಮ ಅಪರೂಪದ ಕಾರ್ಯದಿಂದ ಜನಮನದಲ್ಲಿ ಚಿರಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.

ಎಲ್ಲರೂ ಎದ್ದುನಿಂತು ಮೌನದೊಂದಿಗೆ ದಿವಂಗತರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಸುಹಾಸ ಕುಲಕಣರ್ಿ, ಶಿರೀಷ ಕಾನಟಕರ, ಡಾ. ಎಸ್. ಎಲ್. ಕುಲಕಣರ್ಿ ಪಂ. ಪ್ರಮೋದಾಚಾರ್ಯ ಕಟ್ಟಿ ಮುಂತಾದವರು ಅನಂತಕುಮಾರ ಅವರ ಒಡನಾಟವನ್ನು ಹಂಚಿಕೊಂಡರು.  ವಿನಯ ಕುಲಕಣರ್ಿ ನಿರೂಪಿಸಿದರು. 

ಶ್ರೀಧರ ಹಲಗತ್ತಿ ಹಾಗೂ  ಜಯತೀರ್ಥ ಸವದತ್ತಿ, ಅರವಿಂದ ಹುನಗುಂದ, ಪಿ. ಬಿ. ಸ್ವಾಮಿ, ಆನಂದ ಗಲಗಲಿ,   ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.