ಚಿದಂಬರ ಪುಣ್ಯೋತ್ಸವ ಚತುರ್ಥಿ ಆಚರಣೆ
ಬೆಳಗಾವಿ 5: ಇದೇ ದಿ. 3 ರಂದು ಚಿದಂಬರ ಪುಣ್ಯೋತ್ಸವ ಚತುರ್ಥಿಯನ್ನು ಗೋವಾವೇಸದಲ್ಲಿರುವ ರಾಜಾರಾಮ ಮಂದಿರದಲ್ಲಿ ಆಚರಿಸಲಾಯಿತು. ಆ ದಿನ ಬೆಳಿಗ್ಗೆ ರುದ್ರಾಭಿಷೇಕ, ಚಿದಂಬರ ನಗರದ ಶಾಂಭವಿ ಮಹಿಳಾ ಮಂಡಳದವರಿಂದ ಭಜನೆ, ನಂತರ ದೇವಸ್ಥಾನದ ಟ್ರಸ್ಟ್ ಕಮಿಟಿ ಅದ್ಯಕ್ಷ ಸಮೀರ್ ಆನಗೋಳಕರ ಹಾಗೂ ಆಡಳಿತ ಮಂಡಳಿ, ಕಾಣ್ವ ಸಂಘ, ಬೆಳಗಾವಿ ಇವರಿಂದ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಚಿದಂಬರ ಮುನವಳ್ಳಿಯವರು ಸಂತ ರಾಜಾರಾಮರ ಅಭಂಗಗಳನ್ನು ಉಲ್ಲೇಖಿಸಿ ಮಹಾಸ್ವಾಮಿಗಳು ನಮಗೆಲ್ಲ ನೀಡಿದ ಉಪದೇಶದ ಪಾಲನೆಯ ಮಹತ್ವ ತಿಳಿಸಿದರು. ನಾಮ ಜಪದ ನಂತರ ಆರತಿ ನೈವೇದ್ಯ ಮಹಾಪ್ರಸಾದ ವಿತರಣೆ ಆಯಿತು.
ಎಸ್ ಎಸ್ ಕುಲಕರ್ಣಿ ಅದ್ಯಕ್ಷರು,ಕಾಣ್ವ ಶಾಖೆ, ಬೆಳಗಾವಿ, ರವಿ ಜೋಷಿ ಕಾರ್ಯದರ್ಶಿ, ಬಿ. ಆರ್. ಪಾಟೀಲ, ಲಕ್ಷ್ಮೀಪತಿ ಮುಳಗುಂದ, ಶಂಕರ ಕುಲಕರ್ಣಿ, ರಘು ಮುತಾಲಿಕ, ಪಾಂಡುರಂಗ ಮಾರಿಹಾಳಕರ, ವಸಂತ ಜೋಷಿ ಹಾಜರಿದ್ದರು, ಅಥರ್ವ ಜೋಷಿ ಪೂಜೆಯ ಕಾರ್ಯ ನೆರವೇರಿಸಿದರು.