ಚಿಕ್ಕರೂಗಿ ಪಿಕೆಪಿಎಸ್ ಸಮಾನ ಮನಸ್ಕರ ಪೆನೆಲ್‌ನ 12 ಅಭ್ಯರ್ಥಿಗಳ ಗೆಲುವು

Chikkaroogi PKPS like-minded panel of 12 candidates won

ಚಿಕ್ಕರೂಗಿ ಪಿಕೆಪಿಎಸ್ ಸಮಾನ ಮನಸ್ಕರ ಪೆನೆಲ್‌ನ 12 ಅಭ್ಯರ್ಥಿಗಳ ಗೆಲುವು 

ದೇವರಹಿಪ್ಪರಗಿ 30: ತಾಲೂಕಿನ ಚಿಕ್ಕರೂಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಸಮಾನ ಮನಸ್ಕರ ಪೆನಲ್ ನ ಎಲ್ಲ 12 ಅಭ್ಯರ್ಥಿಗಳು ಜಯಗಳಿಸಿದ್ದಾರೆ. 

ಗ್ರಾಮದ ಹಿರಿಯರಾದ ನಾಗಣ್ಣ ಮುಳಜಿ, ಸೋಮನಗೌಡ ಪಾಟೀಲ ಕಡ್ಲೇವಾಡ,  ಜಟ್ಟೇಪ್ಪ ಚಂಡಕಿ, ಪೂನ್ನಪ್ಪ ಖೈರಾವಿಕರ, ಹಣಮಂತ್ರಾಯ ಬಿರಾದಾರ, ಗುರಣ್ಣ ಅಂಜುಟಗಿ, ಚಂದ್ರಕಾಂತ ಬಿರಾದಾರ, ಸುಜಾತಾ ಬಾಗಲಕೋಟ, ಇಂದ್ರಾಬಾಯಿ ನಾಟೀಕಾರ, ರಾಜಬಕ್ಸರ ಚಾಂದಕವಠೆ, ಲಕ್ಷ್ಮಣ ತಳಕೇರಿ ಹಾಗೂ ಪಿಡ್ಡಪ್ಪ ಗಣಜಲಿ ವಿಜೇತ 12 ಅಭ್ಯರ್ಥಿಗಳಾಗಿದ್ದಾರೆ. 

ಅಭ್ಯರ್ಥಿಗಳು ಗೆಲುವಿನ ನಂತರ ವಿಜಯೋತ್ಸವ ಆಚರಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ಭೀಮರಾಯಗೌಡ ಬಿರಾದಾರ ಮಾತನಾಡಿ ನಮ್ಮ ಸಂಘವು ಸುಮಾರು 20 ಕೋಟಿಯಷ್ಟು ವ್ಯವಹಾರ ಹೊಂದಿದ್ದು ರೈತರಿಗೆ ಸಹಕಾರಿಯಾಗಿದೆ. ನಾವು ಮೊದಲಿನಿಂದಲೂ ಸಂಘದ ಬೆಳವಣಿಗೆ ನಮ್ಮ ಪೆನಲ್‌ನಿಂದ ಆಗಿದೆ ಮುಂದೆ ಕೂಡಾ ಸಂಘದ ಬೆಳವಣಿಗೆ ನಮ್ಮ ಎಲ್ಲರ ಹಿರಿಯರ ಸಹಕಾರ ಜವಾಬ್ದಾರಿಯು ಇದೆ ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸಂಘ ಬೆಳವಣಿಗೆ ಆಗಲು ಸಾಧ್ಯ ಎಂದು ಹೇಳಿದರು. ಗ್ರಾ.ಪಂ.ಅಧ್ಯಕ್ಷ ಸಿದ್ದಗೊಂಡಪ್ಪಗೌಡ ಪಾಟೀಲ ಗ್ರಾಮದ ಹಿರಿಯರಾದ ಜವಾಹರ್ ದೇಶಪಾಂಡೆ, ಗುಂಡಪ್ಪಗೌಡ ಪಾಟೀಲ,  ರಾಜೆಂದ್ರಕುಮಾರ ಚಂಡಕಿ ಎಂ.ಬಿ.ಕೊಂಡಗೊಳಿ,  ನ್ಯಾಯವಾದಿ ಶ್ರೀಶೈಲ ಮುಳಜಿ, ಮಾಜಿ.ತಾ.ಪಂ ಸದಸ್ಯರಾದ ವಿಠ್ಠಲ ದೆಗಿನಾಳ ಸಾಯಿಕುಮಾರ ಬಿಸನಾಳ, ಚಂದ್ರಶೇಖರ ಗಣಜಲಿ, ಶಶಿಕಾಂತ ಚಂಡಕಿ, ಈರಣ್ಣಶಾಸ್ರೀ ಬಿರಾದಾರ,  ಗೊಲ್ಲಾಳ ಬಾಗಲಕೋಟ, ಶ್ರೀಮಂತ ಬಾಗಲಕೋಟ, ಕುಮಾರಗೌಡ ಬಿರಾದಾರ, ಬಸವರಾಜ ಸುಮ್ಮನೆ, ಜಾವೀದ್ ಕೊಲ್ಹಾರ, ನಸರೋದ್ದಿನ್ ಚಾಂದಕವಠೆ, ಬಾಬು ಖೊಜಗೀರ ಸೇರಿದಂತೆ  ನೂರಾರು ಜನರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.