ಹತ್ತರಗಿ ಹರಿಮಂದಿರದಲ್ಲಿ ಹರಿಕಾಕಾ ಗೋಸಾವಿ ಪುಣ್ಯಸ್ಮರಣೋತ್ಸವ
ಯಮಕನಮರಡಿ 31: ಸಮೀಪದ ಹತ್ತರಗಿ ಹರಿಮಂದಿರದ ಕೈ. ಸದ್ಗುರು ಹರಿಕಾಕಾ ಗೋಸಾವಿ ಅವರ 35ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ದಿ.1ರಿಂದ ದಿ. 3ರವರೆಗೆ ನಡೆಯಲಿದೆ.
ಜ. 1ರಂದು ಮುಂಜಾನೆ ಲಘು ರುಧ್ರಾಭಿಷೇಕ ಮತ್ತು ಮಧ್ಯಾಹ್ನ ದಿ. 29ರಂದು ಆಯೋಜಿಸಲಾಗಿದ್ದ ಭಾವ ಭಕ್ತಿಗೀತೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಹಾಗೂ ಹರಿನಾಮ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ಗುರುವಾರ ದಿ. 2ರಂದು ಮುಂಜಾನೆ ಗಣಹೋಮ ನಡೆಯಲಿದೆ. ಸ್ಥಳೀಯ ಸರಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಭಗವದ್ಗಿತಾ ವಾಚನ ಸ್ಪಧೆೇರ್ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಜರುಗಲಿದೆ.
ಶುಕ್ರವಾರ ದಿ.3ರಂದು ಮುಂಜಾನೆ ಪುಷ್ಪವೃಷ್ಟಿ ಮತ್ತು ನಾದ ಸುರಮಯಿ ಗ್ರೂಪ್ ಕೊಣ್ಣುರು ಇವರಿಂದ ಗಾಯನ ಸೇವಾ ಕಾರ್ಯಕ್ರಮ ನಡೆಯಲಿದೆ ಎಂದು ಪೀಠಾಧೀಶ ಆನಂದ ಗೋಸಾವಿಯವರು ತಿಳಿಸಿದ್ದಾರೆ. ಇಚ್ಚೆಯುಳ್ಳ ಭಕ್ತಾದಿಗಳಿಗೆ ಅವಕಾಶವಿರುತ್ತದೆ. ಮಧ್ಯಾಹ್ನ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಸಕಲ ಭಕ್ತಾದಿಗಳು ಸದ್ಗುರು ಹರಿಕಾಕಾ ಅವರ ಕೃಪೆಗೆ ಪಾತ್ರರಾಗಲು ಕೋರಲಾಗಿದೆ.