22ರಿಂದ ಸಹಕಾರ ಭಾರತಿ ರಾಷ್ಟ್ರೀಯ ಅಧಿವೇಶನ

ಲೋಕದರ್ಶನ ವರದಿ

ಕೊಪ್ಪಳ 18: ಆಥರ್ಿಕ ಕ್ಷೇತ್ರದ ಬೆನ್ನಲಬಾಗಿರುವ ಮತ್ತು ರಾಷ್ಟ್ರವ್ಯಾಪಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ಸಂಸ್ಥೆಗಳ ಪ್ರಕಾರ ಸಂಘಟನಾ ಸಂಸ್ಥೆ ಸಹಕಾರ ಭಾರತೀಯ ರಾಷ್ಟ್ರಿಯ ಅಧಿವೇಶನ ರಾಜಸ್ಥಾನದ ತೀರ್ಥರಾಜ ಪುಷ್ಕರಜಿಯಲ್ಲಿ ನಡೆಯಲಿದೆ ಎಂದು ಸಹಕಾರ ಭಾರತಿ ಸಂಘಟನಾ ಪ್ರಮುಖ ರಮೇಶ ವೈದ್ಯ ತಿಳಿಸಿದ್ದಾರೆ.  

ನಗರದ ಮಾನ್ವಿ ಪಟ್ಟಣ ಸಹಕಾರ ಬ್ಯಾಂಕ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಥರ್ಿಕ ಮತ್ತು ಸಾಮಾಜಿಕ ಪರಿವರ್ತನೆಯ ಸಶಕ್ತ ಮಾಧ್ಯಮ ಎನಿಸಿರುವ ಸಹಕಾರ ಕ್ಷೇತ್ರವನ್ನು ಬಲವಾಗಿ ಸಂಘಟಿಸುವ ಮೂಲಕ ಜನಸಾಮಾನ್ಯರ ಆಥರ್ಿಕ ತಳಹದಿಯನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿ ಸಂಸ್ಥೆಗಳನ್ನು ಒಗ್ಗೂಡಿಸುವಲ್ಲಿ ಸಹಕಾರ ಭಾರತಿ ಹಗಲಿರಳು ಶ್ರಮಿಸುತ್ತಿದೆ.  ಸಹಕಾರ ಕ್ಷೇತ್ರದ ಪ್ರೇರಣಾ ಪುರಷ ಎಂದೇ ಗುರುತಿಸಲಾಗಿರುವ ಲಕ್ಷ್ಮಣರಾವ ಇನಾಮದಾರ್ ಅವರ ನೇತೃತ್ವದಲ್ಲಿ ಸಹಕಾರ ಭಾರತಿಯು ಕಳೆದ 1979ರ ಜನೆವರಿ 11ರಂದು ಪ್ರಾರಂಭವಾಯಿತು.  ಅಂದಿನಿಂದ ಇಂದಿನ ವರೆಗೆ ಅವಿರತವಾಗಿ ಶ್ರಮಿಸುವ ಮೂಲಕ ದೇಶದ ಉದ್ದಗಲಕ್ಕೂ ಹರಡಿಸುವ ಸಹಕಾರ ಸಂಸ್ಥೆಗಳನ್ನು ಒಗ್ಗೂಡಿಸಿ ಆಥರ್ಿಕ ಶಿಸ್ತಿನ ಸಂಸ್ಕಾರವನ್ನು ನೀಡುತ್ತಿದೆ.  

ಸಹಕಾರಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಯಕರ್ತರಿಗೆ, ಪ್ರಮುಖರಿಗೆ ಪ್ರಶಿಕ್ಷಣ ನೀಡುವುದರ ಮೂಲಕ ಅವರ ಕಾರ್ಯಕ್ಷಮತೆಯನ್ನು ವೃದ್ಧಿಗೊಳಿಸುವು ಉದ್ದೇಶದಿಂದ ಪ್ರತಿವರ್ಷವೂ ರಾಷ್ಟ್ರೀಯ ಮಟ್ಟದಲ್ಲಿ ಸಮಾವೇಶವನ್ನು ಆಯೋಜಿಸಲಾಗುತ್ತಿದ್ದು, ಈ ವರ್ಷ ರಾಜಸ್ಥಾನದ ತೀರ್ಥರಾಜ ಪುಷ್ಕರಜಿಯಲ್ಲಿ ಡಿ.22 ಮತ್ತು 23ರಂದು ಆಯೋಜಿಸಲಾಗಿದೆ.  ದೇಶವ್ಯಾಪಿ 450 ಜಿಲ್ಲೆಗಳಿಂದ ಸುಮಾರು ಮೂರು ಸಾವಿರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.  ಕನರ್ಾಟಕದ 22 ಜಿಲ್ಲೆಗಳಿಂದ 112 ಜನ ಪ್ರಮುಖರು ಭಾಗವಹಿಸಲಿದ್ದು, ಕೊಪ್ಪಳ ಜಿಲ್ಲೆಯಿಂದ 14 ಜನ ಪ್ರತಿನಿಧಿಗಳು ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.