ವೃದ್ಧಾಶ್ರಮದಲ್ಲಿ ನಾದಸುಧಾದವರಿಂದ ಸಾಂಸ್ಕೃತಿಕ ಕಾರ್ಯಕ್ರಮ

Cultural program by Nadasudha at the old age home

ವೃದ್ಧಾಶ್ರಮದಲ್ಲಿ ನಾದಸುಧಾದವರಿಂದ ಸಾಂಸ್ಕೃತಿಕ ಕಾರ್ಯಕ್ರಮ 

ಬೆಳಗಾವಿ 28: ಹಿರಿಯ ನಾಗರಿಕರು ಸಾಹಿತ್ಯ, ಸಂಗೀತ, ಚಿತ್ರಕಲೆ ಹೀಗೆ ಯಾವುದಾದರೂಂದು ಹವ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇದರಿಂದ ವಯೋಸಹಜ ಕಾಯಿಲೆ, ಬದುಕಿನ ನೋವುಗಳನ್ನು ಮರೆಯಬಹುದು. ಮನರಂಜನಾ  ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಸದೃಢತೆಯನ್ನು ಬೆಳೆಸಿಕೊಳ್ಳಬಹುದೆಂದು ಘರ್ ಕುಲ್ ವೃದ್ಧಾಶ್ರಮದ ಅಧ್ಯಕ್ಷ ರಾಜೀವ್ ಪೋದಾರ ಇಂದಿಲ್ಲಿ ಹೇಳಿದರು.  

ಇತ್ತೀಚೆಗೆ ಬೆಳಗಾವಿ ತಾಲೂಕಿನ ಬೆನಕನಹಳ್ಳಿಯ ಘರಕುಲ ವೃದ್ಧಾಶ್ರಮದ ಸದಸ್ಯರೊಂದಿಗೆ ನಾದಸುಧಾ ಸಂಗೀತ ಶಾಲೆಯ ಸಂಸ್ಥಾಪಕ ಡಾ. ಕೆ. ಸತ್ಯನಾರಾಯಣ ತಮ್ಮ 68 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸಂದರ್ಭದಲ್ಲಿ ವೃದ್ಧಾಶ್ರಮದ ಅಧ್ಯಕ್ಷ ರಾಜೀವ ಪೋದಾರ ಕಾರ್ಯಕ್ರಮವನ್ನು ಮಾತನಾಡುತ್ತಿದ್ದರು.  

ರಾಜೀವ ಅವರು ನಗರದ ನಾದಸುಧಾ ಸಂಗೀತಶಾಲೆಯ ರುವಾರಿ ಕೆ. ಸತ್ಯನಾರಾಯಣ ಹುಟ್ಟು ಹಬ್ಬದ ಸಂಭ್ರಮವನ್ನು ವೃದ್ದಾಶ್ರಮದವರೊಂದಿಗೆ ಹಂಚಿಕೊಳ್ಳುತ್ತಿರುವುದು ಸಂತೋಷದ ವಿಷಯ. ಇವರು ತಮ್ಮ ತಂಡದವರೊಂದಿಗೆ  ಅನಾಥಾಶ್ರಮ, ವೃದ್ಧಾಶ್ರಮಗಳಿಗೆ, ಅಂಧಶಾಲೆಗಳಿಗೆ ಹೋಗಿ  ಸಂಗೀತ, ಅಭಿನಯ, ನೃತ್ಯಗಳಿಂದ ಅವರನ್ನು ರಂಜಿಸುವುದರೊಂದಿಗೆ ಹಬ್ಬದ ವಾತಾವರಣ ನಿರ್ಮಿಸುತ್ತಾರೆ. ಇವರು ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.   ವಿದ್ವಾನ ಎಂ.ಜಿ. ರಾವ, ಸಂಧ್ಯಾ, ಪದ್ಮಾ ಸತ್ಯನಾರಾಯಣ, ಉಪಸ್ಥಿತರಿದ್ದರು.  ಲಕ್ಷ್ಮೀ ಪೋದಾರ  ಸ್ವಾಗತಿಸಿದರು, ಪೂರ್ಣಿಮಾ ಪತ್ತಾರ ವಂದಿಸಿದರು.