ಸಭೆಗೆ ಹಾಜರಾಗದ ಜಿಲ್ಲಾಧಿಕಾರಿ: ಸಭೆ ಹಠಾತ್ತಾಗಿ ರದ್ದು ಅಥಣಿಯ ರೈತ ಸಂಘಟನೆಗಳಿಂದ ದಿಢೀರ್ ಪ್ರತಿಭಟನೆ

ಅಥಣಿ 14: ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಹಾಗೂ ರೈತರು ಮತ್ತು ಖಾಸಗಿ ಸಕ್ಕರೆ ಮಾಲಿಕರೊಂದಿಗೆ ನಡೆಯಬೇಕಿದ್ದ ಸಭೆಗೆ ದೀಢಿರಣೆ ಜಿಲ್ಲಾಧಿಕಾರಿಗಳು ಸಭೆಗೆ ಹಾಜರಾಗದೇ ಸಭೆಯಿಂದ ದೂರ ಉಳಿದ ಕಾರಣದಿಂದಾಗಿ ಮತ್ತು ಇಂದು ಮಧ್ಯಾಹ್ನ ಸುಮಾರು 3 ಗಂಟೆಗೆ ನಡೆಯಬೇಕಿದ್ದ ಸಭೆಯನ್ನು ಹಠಾತ್ತಾಗಿ ರದ್ದುಗೊಳಿಸಿದ ಕ್ರಮವನ್ನು ವಿರೋಧಿಸಿ ಅಥಣಿಯ ರೈತ ಸಂಘಟನೆಗಳು ದಿಢೀರಣೆ ರಸ್ತೆಗಿಳಿದು ಪ್ರತಿಭಟಿಸಿದ ಪ್ರಸಂಗ ಇಂದು ಸಂಜೆ ನಡೆಯಿತು.

ಮಂಗಳವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳು ಕರೆಯಲಾಗಿದ್ದ ಸಭೆಯಲ್ಲಿ ಹಾಜರಾಗಬೇಕಿದ್ದ ಜಿಲ್ಲಾಧಿಕಾರಿಯು ರಾಜಕೀಯ ಮುಖಂಡರ ಒತ್ತಾಯದ ಮೇರೆಗೆ ಈ ಸಭೆಗೆ ಗೈರು ಹಾಜರಾಗಿ ಜಿಲ್ಲಾಧಿಕಾರಿಗಳು ತಾಲೂಕಿನ ರೈತರನ್ನು ಅವಮಾನಗೊಳಿಸಿದ್ದಾರೆ ಎಂದು ಅಥಣಿ ತಾಲೂಕಿನ ವಿವಿಧ ರೈತ ಸಂಘಟನೆಗಳ ಮುಖಂಡರು ಆರೋಪಿಸಿದರು. ಹಾಗೂ ಇದೇ ಪರಿಸ್ಥಿತಿ ಮುಂದುವರೆದರೆ ಬರುವ 15ನೇ ತಾರೀಖಿನಂದು ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದರು.

ಸಭೆಗೆ ಬಾರದ ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ರೈತರು ಜಿಲ್ಲಾ ಮಂತ್ರಿ ಹಾಗೂ ಶಾಸಕರ ಕೈಗೊಂಬೆಯಾಗಿರುವ ಜಿಲ್ಲಾಧಿಕಾರಿಗಳು ರೈತ ವಿರೋಧಿಯಾಗಿದ್ದಾರೆ. ರೈತರ ಬಾಕಿ ಇರುವ ಬಿಲ್ಲನು ಪಾವತಿಸದ ಕಾಖರ್ಾನೆಗಳ ಮೇಲೆ ಜಿಲ್ಲಾಧಿಕಾರಿಗಳು ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಮಾನಗಳಲ್ಲಿ ಭಾರಿ ವಿರೋಧವನ್ನು ಎದುರಿಸಲಿದ್ದಾರೆ. ರೈತರನ್ನು ಕಡೆಗಣಿಸಿದರೆ ಮುಂದಾಗುವ ಅನಾಹುತಗಳಿಗೆ ಜಿಲ್ಲಾಧಿಕಾರಿ ಹಾಗೂ ಖಾಸಗಿ ಸಕ್ಕರೆ ಕಾಖರ್ಾನೆಯ ಮಾಲೀಕರು ಹೊಣೆ ಎಂದು ಎಚ್ಚರಿಸಿದರು.

        ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘಟನೆಯ ಪ್ರಧಾನ ಕಾರ್ಯದಶರ್ಿ ಚೂನಪ್ಪಾ ಪೂಜಾರಿ ಅವರು ಕಳೆದ 15 ದಿನಗಳಿಂದ ಅಥಣಿ ತಾಲೂಕಿನ ರೈತರು ಕೆಲವು ಸಕ್ಕರೆ ಕಾರಖಾನೆಯನ್ನು ಹೊರತು ಪಡಿಸಿ ತಾಲೂಕಿನ ಎಲ್ಲ ಸಕ್ಕರೆ ಕಾರಖಾನೆಗಳು ಕಬ್ಬು ಬೆಳೆಗಾರರಿಗೆ ಹಿಂದಿನ ವರ್ಷ ಬಾಕಿ ಬಿಲ್ಲನ್ನು ಕೊಡಬೇಕು. ಈ ವರ್ಷ ಪಿ.ಆರ್.ಪಿ. ಪ್ರಕಾರ ಕಬ್ಬಿಗೆ ದರವನ್ನು ಪ್ರಕಟಿಸಬೇಕು ಎಂದು ಬೇಡಿಕೆ ಮುಂದಿಟ್ಟು ಸಕ್ಕರೆ ಕಾರಖಾನೆಗಳಿಗೆ ವಿರುದ್ದ ಹೋರಾಟ ನಡೆಸಿದ್ದರು. ಅದಲ್ಲದೆ ಕಬ್ಬು ಬೆಳೆಗಾರರು ಕಬ್ಬು ಪೂರೈಸದಂತೆ ಸಹ ಮನವಿ ಮಾಡಿಕೊಂಡು ಕಾರಖಾನೆಯ ಉತ್ಪಾದನೆಯನ್ನು ಸ್ಥಗಿತ ಮಾಡಿಸಿದ್ದರು. ಇದ್ದಕ್ಕಿಂತೆಯೇ ನಿನ್ನೆಯಿಂದ ಕೆಲವು ಸಕ್ಕರೆ ಕಾರಖಾನೆಗಳು ತಮ್ಮ ಉತ್ಪಾದನೆಯನ್ನು ಆರಂಭಿಸಿದ್ದಾರೆ. ಒಂದು ವೇಳೆ ಇದೆ ಪರಸ್ಥಿತಿ ಮುಂದುವರೆದರೆ ನಾವು ಉಗ್ರ ಹೋರಾಟ ಮಾಡುತ್ತೇವೆ. ಆಗ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ತಾಲೂಕಾ ಆಡಳಿತ ಹೊಣೆಗಾರರು ಎಂದು ಎಚ್ಚರಿಕೆ ನೀಡಿದರು. ಮತ್ತು ಇದೇ ಪರಿಸ್ಥಿತಿ ಮುಂದುವರೆದರೆ ಬರುವ 15ನೇ ತಾರೀಖಿನಂದು ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದರು.

       ಅನಂತರ ಮಾತನಾಡಿದ ಅಥಣಿ ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ಮಾತನಾಡುತ್ತಾ ನಮ್ಮ ಪ್ರಮುಖ ಎರಡು ಬೇಡಿಕೆಗಳಾದ ಕಳೆದ ವರ್ಷ ಕಬ್ಬು ಪೂರೈಸಿದ ರೈತರಿಗೆ 2900 ರೂಪಾಯಿಯಂತೆ ಪ್ರತಿ ಟನ್ನಗೆ ದರ ನೀಡಬೇಕು. ಅದಲ್ಲದೆ ಈ ವರ್ಷ ಕಬ್ಬು ಪೂರೈಸಿದ ರೈತರಿಗೆ ಪಿ.ಆರ್.ಪಿ ದರದಂತೆ ದರ ನೀಡಬೇಕು. ಇವೆರಡು ಬೇಡಿಕೆ ಪೂರ್ಣ ಆಗುವವರಿಗೆ ಕಾಖರ್ಾನೆಗಳನ್ನು ಪ್ರಾರಂಭಿಸಬಾರದು ಎಂದು ತಿಳಿಸಿದರು.

     ಉಪ ತಹಶಿಲ್ದಾರ ರಾಜು ಬುಲರ್ಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.


 ಪಿ.ಎಸ್.ಆಯ್ ಮಾತಿಗೆ ಬೆಲೆಕೊಡದೆ ರಸ್ತೆ ತಡೆದು ಪ್ರತಿಭಟನೆ 

 ಮಂಗಳವಾರ 3 ಗಂಟೆಗೆ ಸಭೆಗೆ ಹಾಜರಾಗಬೇಕಿದ್ದ ಜಿಲ್ಲಾಧಿಕಾರಿಗಳ ಸಲುವಾಗಿ ತಾಲೂಕಿನ ಅನೇಕ ರೈತರು ಜಮಾಗೊಂಡಿದ್ದರು ಹಠತ್ತಾಗಿ ಸಭೆಯು ರದ್ದಾಗಿದ್ದರಿಂದ ಕುಪಿತಗೊಂಡ ರೈತರು ಜೇವಗರ್ಿ ಸಂಕೇಶ್ವರ ರಾಜ್ಯ ಹೆದ್ದಾರಿಯನ್ನು ತಡೆದು ಸರಕಾರ ವಿರುದ್ದ ಘೋಷಣೆ ಕೂಗುತ್ತಾ ಬೀದಿಗೀಳಿದು ರಸ್ತೆಯನ್ನು ತಡೆದರು. ಈ ಸಂದರ್ಭದಲ್ಲಿ ಅಥಣಿ ಪೊ.ಎಸ್.ಆಯ್ ಉಸ್ಮಾನ ಅವಟಿಯವರು ಕುಪಿತಗೊಂಡ ರೈತರ ಮನವೊಲಿಸಿ ಪ್ರತಿಭಟನೆಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಕೂಡ ಅವರ ಮನವಿಗೆ ಸ್ಪಂದಿಸದ ರೈತರು ರಸ್ತೆಯನ್ನು ತಡೆದರು. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರು ಪರದಾಡುವಂತಾಯಿತು, ಈ ಪ್ರತಿಭಟನೆಯಿಂದ ಸುಮಾರು 2-3 ಕಿಮೀ ವರೆಗೆ ವಾಹನ ಸಂಚವಾರ ಸ್ಥಗಿತಗೊಂಡು ಸಂಚಾರ ವ್ಯತ್ಯಯ ಉಂಟಾಯಿತು .

             ಮಲ್ಲಪ್ಪಾ ಅಂಗಡಿ, ಮೋಬಿನ ಮೊಳೆ, ಡಿ ಎಮ್ ನಾಯಿಕ, ರಾಜು ಪೂಜಾರಿ, ಚುನಗೊಂಡ ಇಮಗೌಡರ, ರಾಮಚಂದ್ರ ಪಾಟೀಲ. ಗುರಪ್ಪ ಮುದನ್ನವರ, ತಮ್ಮಣ್ಣಾ ಸಬಕಾಳೆ, ಹಣಮಂತ ಹಲಶಿ, ರಾಜಕುಮಾರ ಜಂಬಗಿ, ಅಭಯ ಮೈಗೂರ, ಬಾಬು ಜತ್ತಿ, ಅಣ್ಣಪ್ಪಾ ಹಳ್ಳುರೆಹಾಗೂ ಮುಂತಾದ ವಿವಿಧ ಸಂಘಟನೆಗಳ ಸಾವಿರಾರು ರೈತರು ಜಮಾಯಿಸಿದ್ದರು.