ಸಂಪಾದನಾ ಶ್ರೀಗಳ ದ್ವಾದಶಿ ಪೀಠಾರೋಹಣ: ಬಸವಪುರಾಣಕ್ಕೆ ಚಾಲನೆ

ಚಿಕ್ಕೋಡಿ 14: ಮನುಷ್ಯನ ಜೀವನವನ್ನು ಪರಿವರ್ತನೆ ಮಾಡುವ ಶಕ್ತಿ ಬಸವಾದಿ ಶಿವಶರಣರ ವಚನಗಳಲ್ಲಿದೆ ಎಂದು ನೀಡಸೋಸಿ ಸಿದ್ದಸಂಸ್ಥಾನ ಮಠದ ಜ.ಪಂಚಮ ಶಿವಲಿಂಗೇಶ್ವರ  ಮಹಾಸ್ವಾಮಿಗಳು ಹೇಳಿದರು.

ಇಲ್ಲಿನ ಶ್ರೀ ಸಂಪಾದನಾ ಚರಮೂತರ್ಿದಲ್ಲಿ  ಸಂಪಾದನಾ ಮಹಾಸ್ವಾಮಿಗಳ ದ್ವಾದಶ ಪೀಠಾರೋಹಣ ಸಮಾರಂಭದ ಹಿನ್ನಲೆಯಲ್ಲಿ  ಸತತ 45 ದಿನಗಳ ಕಾಲ ಹಮ್ಮಿಕೊಂಡ ಬಸವಪುರಾಣ ಪ್ರಾರಂಭೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಅನಾದಿಕಾಲದಿಂದಲೂ ಮಠಮಾನ್ಯಗಳು ಶಿಕ್ಷಣ,ಧರ್ಮಪ್ರಸಾರವನ್ನು ಮಾಡುತ್ತಾ ಬಂದಿವೆ. ಆದ್ದರಿಂದ ನಾವು ಜೀವನದಲ್ಲಿ ಯಾವ ರೀತಿಯಾಗಿ ಬದುಕಬಹುದು ಎಂಬುದನ್ನು  ಪುರಾಣ ಪ್ರವಚನಗಳು ಹೇಳಿಕೊಡುತ್ತವೆ.ವಚನ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ ಎಂದರೇ ಶರಣರ ಒಂದು ವಚನ  ಒಬ್ಬ ಸಾಹಿತಿಯನ್ನು ತಯಾರು ಮಾಡುವ ಶಕ್ತಿ ಇದೆ . ಈ ನಿಟ್ಟಿನಲ್ಲಿ 45 ದಿನಗಳ ಕಾಲ ನಡೆಯಲಿರುವ ಬಸವಪುರಾಣವನ್ನು ಪ್ರತಿಯೋಬ್ಬರು ಆಲಿಸಿ ಜೀವನವನ್ನು ಪಾವನಗೊಳಿಸಿ ಎಂದರು.

ಚಿಂಚಣಿ ಸಿದ್ದಸಂಸ್ಥಾನ ಮಠದ ಅಲ್ಲಮಪ್ರಭು ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ,ಬಸವಣ್ಣನವರ ವಚನಗಳು ಇಂದಿನ ದಿನಮಾನದ ಅವಶ್ಯಕತೆಯನ್ನು ತೋರಿಸಿಕೊಡುತ್ತವೆ. ಅಂದು ದಾಸೋಹದ ಪರಿಕಲ್ಪನೆಯನ್ನು ಶಿವಶರಣರು ತಂದಿದ್ದು,ಇಂದು ಸಕರ್ಾರ ಅದನ್ನೇ ಮುಂದುವರೆಸಿ ಅಕ್ಷರ ದಾಸೋಹ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.ವಚನ ಸಾಹಿತ್ಯ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳೆಸಿ ಸಮಾಜಮುಖಿಯಾಗಿ ಸೇವೆ ಮಾಡಲು ಶಕ್ತಿ ನೀಡುತ್ತದೆ ಎಂದರು.

ಮುದಗಲ್ಲ ತಿಮ್ಮಾಪುರ  ಕಲ್ಯಾಣಾಶ್ರಮದ ಮಹಾಂತ ಸ್ವಾಮಿಗಳು ಬಸವಪುರಾಣ ಪ್ರವಚನ ನುಡಿಯನ್ನು ಪ್ರಾರಂಭಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಚಿಕ್ಕೋಡಿಯ ಸಂಪಾದನಾ ಮಹಾಸ್ವಾಮಿಗಳು ಶ್ರೀಮಠದ ದ್ವಾದಶ ಪೀಠಾರೋಹನ ಹಿನ್ನಲೆಯಲ್ಲಿ ಹಮ್ಮಿಕೊಂಡ ಶ್ರೀಮಠದ ಭಕ್ತರು ಹಮ್ಮಿಕೊಂಡಿರುವ ಬಸವಪುರಾಣವನ್ನು  ಚಿಕ್ಕೋಡಿಯ ಜನತೆ ಕೇಳಿ ಪುನೀತರಾಗಬೇಕೆಂದರು.

ಸಕರ್ಾರದ ಮುಖ್ಯ ಸಚೇತಕ ಗಣೇಶ ಹುಕ್ಕೇರಿ ಮತ್ತು ಪುರಸಭೆ ಸದಸ್ಯ ಸಂಜು ಕವಟಗಿಮಠ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ದಲಿತ ಕುಟುಂಬದ ಮಾಜಿ ಪುರಸಭೆ ಸದಸ್ಯ ಸಂಜೀವ ಮಧಾಳೆ ದಂಪತಿಗಳಿಂದ ಶ್ರೀಗಳ ಪಾದಪೂಜೆ ನಡೆಯಿತು.

ಗದಗದ ಶರಣ ಶಿವಾನಂದ ಮಂದೇವಾಲ ಸಂಗೀತ ಸೇವೆ,ಶಿಗ್ಗಾಂವಿಯ ಹನುಮಂತಪ್ಪ ಕಾಮನಳ್ಳಿ ಅವರ ಪಿಟೀಲು ಹಾಗೂ ಕುಷ್ಟಗಿಯ  ಪ್ರತಾಪಕುಮಾರ ಹಿರೇಮಠ ತಬಲಾ ಸಾಥ ನೀಡಿದರು.

ಪುರಸಭೆ ಸದಸ್ಯ ಜಗದೀಶ ಕವಟಗಿಮಠ,ಎಸ್.ಎಸ್.ಕವಲಾಪೂರೆ,ಪುರಸಭೆ ಮಾಜಿ ಮಾಜಿ ಸದಸ್ಯ ಪ್ರಭಾಕರ ಕೋರೆ,ರಾಜಶೇಖರ ಮಿಜರ್ಿ,ರವಿ ಹಂಪಣ್ಣವರ,ಬಿ.ಎ.ಪೂಜಾರಿ, ಶೇಖರ ಚಿತ್ತವಾಡಗಿ, ಜಗದೀಶ ಖಿನ್ನವರ,ಮಹೇಶ ಹಿರೇಮಠ, ವಿಜಯ ಕಿಲ್ಲೇದಾರ, ರಾಜು ಹೊನ್ನವರ, ಸೋಮು ಗವನಾಳೆ,ಸಾಗರ ಬಿಸ್ಕೋಪ್ ಮುಂತಾದವರು ಇದ್ದರು.