ಶಿಕ್ಷಕಿ ಸುಜಾತಾ ಮುದಗಲ್ ಸೇರಿ ಹಲವರಿಗೆ ಜಿಲ್ಲಾ ಪ್ರಶಸ್ತಿ ಪ್ರಧಾನ

District Award Principal for many including teacher Sujatha Mudagal

ಶಿಕ್ಷಕಿ ಸುಜಾತಾ ಮುದಗಲ್ ಸೇರಿ ಹಲವರಿಗೆ ಜಿಲ್ಲಾ ಪ್ರಶಸ್ತಿ ಪ್ರಧಾನ  

ಕೊಪ್ಪಳ 03: ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕಿಯಾದ ಶ್ರೀಮತಿ ಸುಜಾತಾ ಮುದಗಲ್ ರವರಿಗೆ ಅವರ ಶೈಕ್ಷಣಿಕ ಉತ್ತಮ ಸೇವೆ ಪರಿಗಣಿಸಿ ಜಿಲ್ಲಾಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಸತ್ಕರಿಸಲಾಯಿತು, ನಗರದ ಸಾಹಿತ್ಯ ಭವನದಲ್ಲಿ ವಿವಿಧ ಸಂಘಟನೆಗಳಿಂದ ಜರುಗಿದ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಾಲೆಯ ಸಹ ಶಿಕ್ಷಕರುಗಳಿಗೆ 2024- 25 ನೇ ಸಾಲಿನ ಸಾವಿತ್ರಿಬಾಯಿ ಫುಲೆ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕಿ ಸುಜಾತಾ ಮುದಗಲ್ ಸೇರಿದಂತೆ ಇರಕಲ್ ಗಡ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕ ರಾಮಣ್ಣ ಬಾರಕೇರ , ಮೈನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಸಯ್ಯ ಹಿರೇಮಠ್, ಅಳವಂಡಿಯ ಜಿಜಿ ಹೆಚ್‌ಎಸ್ ಶಾಲೆಯ ಸಹ ಶಿಕ್ಷಕಿ  ಶ್ರೀದೇವಿ ಬಂಡಿಹಾಳ, ಭೂಚನಹಳ್ಳಿ ಶಾಲೆಯ ಶಿಕ್ಷಕಿ ಸುಮಂಗಲ ಪಾಟೀಲ್, ಬೆಟಗೇರಿ ಶಾಲೆಯ ಮರ್ದಾನ ಅಲಿ ಗಡಾದ, ಅಗಳ ಕೇರಾ ಶಾಲೆಯ ಶಿಲ್ಪಾ ಅಮಲಿ ಕೊಪ್ಪ, ಚಿಲಕಮುಕ್ಕಿ ಶಾಲೆಯ ದೇವಮ್ಮ ಕೊಪ್ಪಳ ನಗರ ಜಿಜಿ ಎಚ್‌ಎಸ್ ಶಾಲೆಯ ಎಂ ವಿಜಯಲಕ್ಷ್ಮಿ ರವರುಗಳಿಗೆ ಇದೆ ವೇಳೆ ಸಾವಿತ್ರಿಬಾಯಿ ಫುಲೆ ಜಿಲ್ಲಾಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸನ್ಮಾನಿಸಿ ಸತ್ಕರಿಸಲಾಯಿತು, ಸುಜಾತಾ ಮುದಗಲ್ ಸೇರಿದಂತೆ ಹಲವು ಶಿಕ್ಷಕರುಗಳಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪರಾಚಾರ್ಯರಾದ ಎಂಎ ಖಯ್ಯುಮ್ ಮತ್ತು ನಿವೃತ್ತ ವೃತ್ತಿ ಶಿಕ್ಷಕ ಹಾಗೂ ಪ್ರಶಸ್ತಿ ಪುರಸ್ಕೃತರಾದ ಅಮೀರ್ ಹಮ್ಜಾ ನದಾಫ್ ಸೇರಿದಂತೆ ಇತರ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿ ಬಳಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.