ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ಯಮಕನಮರಡಿ 06: ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜು 2024-25 ನೇ ಸಾಲಿನ ವಾರ್ಷಿಕ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭವನ್ನು ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಎ.ರಾಮನಕಟ್ಟಿ ವಹಿಸಿದ್ದರು. ಕ್ರೀಡಾ ಸಂಯೋಜಕ ಬಿ.ಬಿ.ಕೊಡ್ಲಿ ಉಪನ್ಯಾಸಕರು ಇವರು ಎಲ್ಲರಿಗೂ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿ ಕ್ರೀಡಾ ಚಟುವಟಿಕೆಗಳ ರೂಪರೇಷೆಗಳ ಕುರಿತು ತಿಳಿಸಿದರು.
ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು. ಕ್ರೀಡಾ ಜ್ಯೋತಿಯನ್ನು ಕಾಲೇಜಿನಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಿಯಾಂಕಾ ಪ್ರಧಾನ ಹಾಗೂ ಲಕ್ಷ್ಮೀ ಪಾಟೀಲ ವಿದ್ಯಾರ್ಥಿನಿಯರು ಕ್ರೀಡಾ ಜ್ಯೋತಿ ಹಿಡಿದು ಮೈದಾನ ಸುತ್ತುಹಾಕಿ ಅಧ್ಯಕ್ಷರ ಕೈಗೆ ಹಸ್ತಾಂತರಿಸುವುದರ ಮೂಲಕ ಕ್ರೀಡೆಗಳಿಗೆ ಚಾಲನೆ ನೀಡಲಾಯಿತು.
ನಿರೂಪಣೆಯನ್ನು ಎಸ್.ಆರ್. ತಬರಿ ಇವರು ನೆರವೇರಿಸಿದರು