ಲೋಕದರ್ಶನ ವರದಿ
ಕೊಪ್ಪಳ 05: ಕೇಂದ್ರ ಸಕರ್ಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ-2 ಯನ್ನು ಎಲ್ಲಾ ಬಡ ಜನರಿಗೆ ಆರಂಭಿಸಿದೆ ಎಂದು ಭಾರತ್ ಗ್ಯಾಸ್ ಮಾರಾಟ ವಿಭಾಗದ ಪ್ರತಿನಿಧಿ ಹಾಗೂ ಕೊಪ್ಪಳ ಜಿಲ್ಲಾ ನೋಡಲ್ ಅಧಿಕಾರಿ ಬಿಪಿನ್ ಫನರ್ಾಂಡಿಸ್ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಭಾರತ ದೇಶವನ್ನು ಹೊಗೆ ಮುಕ್ತ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ನಿರ್ಧರಿಸಿದ್ದು ಕೊಪ್ಪಳ ಜಿಲ್ಲೆಯಲ್ಲಿ ಮೊದಲು ಶೇ.33.92% ಯಿದ್ದು ಈಗ ಇಂಡಿಯನ್ ಆಯಿಲ್ ಕಂಪನಿಯಿಂದ 23922, ಭಾರತ್ ಪೆಟ್ರೋಲಿಯಂ ಕಂಪನಿ 20150, ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ ವತಿಯಿಂದ 24004 ಸೇರಿ ಒಟ್ಟು 68076 ಫಲಾನುಭವಿಗಳಿಗೆ ಡಿ.21 2018 ವೇಳೆಗೆ ಉಜ್ವಲ ಯೋಜನೆ ಆರಂಭವಾಗಿ ಸಂಪರ್ಕ ನೀಡಿ ಶೇ.69.04% ಪ್ರಗತಿ ಸಾಧಿಸಲಾಗಿದೆ,ಅದನ್ನು ಮುಂದೇ 100% ಗುರಿ ಹೊಂದುವ ಉದ್ದೇಶ ಹೊಂದಲಾಗಿದೆ ಎಂದ ಅವರು ಈ ಮೊದಲು 2011ನೇ ಜನಗಣತಿಯಲ್ಲಿ ಬಿ.ಪಿ.ಎಲ್ ಕಾರ್ಡ ಎಂದು ನೋಂದಣಿಯಿದ್ದವರಿಗೆ, ಪ್ರಧಾನ ಮಂತ್ರಿ ಆವಾಜ ಯೋಜನೆಯ ಫಲಾನುಭವಿ, ಅಂತ್ಯೋದಯ ಯೋಜನೆಯ ಕಾರ್ಡ ಹೊಂದಿದವರಿಗೆ ಮಾತ್ರ, ಪ್ರಧಾನ ಮಂತ್ರಿ ಉಜ್ವಲ ಯೋಜನೆ-2 ಅನ್ವಯಿಸುತ್ತಿತ್ತು, ಆದರೆ ಈ ಕೇಂದ್ರ ಸರಕಾರ ತೆಗೆದುಕೊಂಡ ನಿಧರ್ಾರದಿಂದ ಎಲ್ಲಾ ಬಡವರಿಗೆ ಅಂದರೆ 2,3,4 ಚಕ್ರಗಳ ವಾಹನ, 3-4 ಚಕ್ರಗಳ ಕೃಷಿ ಯಂತ್ರ, ಕಿಸಾನ ಕ್ರೆಡಿಟ್ ಕಾರ್ಡ ಮತ್ತು ರೂ. 50000 ಗಳ ಮಿತಿ, ಕುಟುಂಬ ಸದಸ್ಯರು ಸಕರ್ಾರಿ ನೌಕರಿ, ರಿಫ್ರಿಜರೆಟರಿ, ಸ್ಥಿರ ದೂರವಾಣಿ, ಲ್ಯಾಂಡ್ ಲೈನ್, ಆದಾಯ ತೆರಿಗೆ ಪಾವತಿದಾರ, ವೃತ್ತಿ ತೆರಿಗೆ ಪಾವತಿದಾರ, ಕೃಷಿಯೇತರ ಸರಕಾರಿ ಉದ್ಯಮಿಗಳಲ್ಲಿ ಕುಟುಂಬದ ಫಲಾನುಭವಿಗಳು ನೊಂದಣಿ ಮಾಡಿಸಿರಬೇಕು.
ಕುಟುಂಬದ ಫಲಾನುಭವಿಗಳು ಪ್ರತಿ ತಿಂಗಳು ರೂ. 10000.00 ಗಳಿಗಿಂತ ಮೇಲ್ಪಟ್ಟ ಗಳಿಕೆ, 2.5 ಎಕರೆ ಅಥವಾ ಹೆಚ್ಚಿನ ನೀರಾವರಿ ಕೃಷಿ ಭೂಮಿಯೊಂದಿಗೆ ಮಾಲೀಕರು ಒಂದು ನೀರಾವರಿ ಉಪಕರಣ, 5 ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ನೀರಾವರಿ ಕೃಷಿ ಜಮೀನಿನಲ್ಲಿ 2 ಅಥವಾ ಅದಕ್ಕಿಂತ ಹೆಚ್ಚಿನ ಬೆಳೆ, 3 ಅಥವಾ ಹೆಚ್ಚಿಗೆ ಕೊಠಡಿ ಹೊಂದಿದ ಪಕ್ಕಾ ಮನೆ, 7.5 ಎಕರೆ ಭೂಮಿ ಮತ್ತು ಒಂದು ಕೃಷಿ ಉಪಕರಣ,
ಈ ಸೌಲಭ್ಯವನ್ನು ಹೊಂದಿರದೇ ಇರುವವರು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಇಪಿಎಂಯುವೈ-2 ಯಡಿ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳು ಸಮೀಪದ ಗ್ಯಾಸ ವಿತರಕರಲ್ಲಿ ಆ ಕುಟುಂಬದ ಹಿರಿಯ ಮಹಿಳೆ ಹೋಗಿ ಆಧಾರ ಕಾರ್ಡ, ಬ್ಯಾಂಕ ಖಾತೆ ಮಾಹಿತಿ, ರೇಷನ್ ಕಾರ್ಡ ಮಾಹಿತಿಯನ್ನು ಒದಗಿಸಬೇಕು. ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆ-2ರ ಲಾಭ ಪಡೆದುಕೊಳ್ಳುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುಪ್ರಸಾದ್ ಗ್ಯಾಸ್ ಏಜೆನ್ಸಿ ಮಾಲೀಕರಾದ ರಾಘವೇಂದ್ರ ಕುಲಕಣರ್ಿ, ಮಂಗಳೂರು ಏಜೆನ್ಸಿಯ ಗುರುರಾಜ್ ದೇಶಪಾಂಡೆ, ಕುಕನೂರು ಏಜೆನ್ಸಿಯ ವಿನಯಕುಮಾರ, ಕುಷ್ಟಗಿ ಏಜೆನ್ಸಿಯ ಪ್ರಶಾಂತ ಪಾಟೀಲ್ ಉಪಸ್ಥಿತರಿದ್ದರು.