ಹತ್ತು ವರ್ಷವಾದರೂ ಪೂರ್ಣತ್ವ ಕಾಣದ ರೈತ ಸಂಪರ್ಕ ಕೇಂದ್ರ ಕಟ್ಟಡ: ಅನೈತಿಕ ಚಟುವಟಿಕೆಗೆ ತಾಣ
ಯಮಕನಮರಡಿ 06: ಸಮೀಪದ ಹತ್ತರಗಿ ಗ್ರಾ ಪಂ ವ್ಯಾಪ್ತಿಯಲ್ಲಿ ಬರುವ ಗುಡ್ಡದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ರಾರಾಜಿಸುತ್ತಿವೆ ಅನೈತಿಕ ಚಟುವಟಿಕೆಗಳ ತಾಣ. ಸುಮಾರು ಹತ್ತು ವರ್ಷಗಳ ಹಿಂದೆ ಹಾಲಿ ಸಚಿವ ಸತೀಶ ಜಾರಕಿಹೊಳಿ ರವರು ಈ ಕಟ್ಟಡಕ್ಕೆ ರಾತ್ರಿ 9 ಗಂಟೆಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದ್ದರು. ಆದರೆ ಈ ಕಟ್ಟಡ ಇಲ್ಲಿಯವರೆಗೆ ಬೆಳಕು ಕಾಣದೆ ಕತ್ತಲೆಯಲ್ಲಿಯೇ ಉಳಿದಿದೆ. ಅದೇ ಕತ್ತಲಲ್ಲಿ ಅನೈತಿಕ ಚಟುವಟಿಕೆಗಳು ಸರಾಗವಾಗಿ ಸಾಗುತ್ತಲೆ ಇವೆ. ಸಾರಾಯಿ ಬಾಟಲಿಗಳು ಹೆಣ್ಣು ಮಕ್ಕಳ ಸಮವಸ್ತ್ರಗಳು ಇಲ್ಲಿ ನೋಡಲು ಸಿಗುತ್ತವೆ. ಅದರ ಪಕ್ಕದಲ್ಲಿಯೇ ಈಗಾಗಲೇ ಸಾಕಷ್ಟು ಹೊಸ ಕಟ್ಟಡಗಳು ನಿರ್ಮಾಣವಾಗಿದ್ದು ಇರುತ್ತದೆ. ಆದರೇ ಕತ್ತಲೆಯಲ್ಲಿ ಪೂಜಿಸಲ್ಪಟ್ಟ ಈ ಕಟ್ಟಡಕ್ಕೆ ಯಾಕೆ ಕಾಯಕಲ್ಪ ಸಿಗುತ್ತಿಲ್ಲ.
ಈ ಕುರಿತು ದಾದಬಾನಹಟ್ಟಿ ಗ್ರಾಮದ ಪಂಚಾಯತಿ ಜನಪ್ರತಿನಿಧಿಗಳನ್ನು ವಿಚಾರಿಸಿದಾಗ ಅವರು ನೇರವಾಗಿ ಅವಾಚ್ಯ ಶಬ್ದಗಳೊಂದಿಗೆ ಮಾತನಾಡುತ್ತಾರೆ. ಕೂಡಲೇ ತಮ್ಮ ಪಾದರಕ್ಷೆಗಳನ್ನು ಕೈಯಲ್ಲಿ ಹಿಡಿಯುತ್ತಾರೆ. ಇದರಿಂದಾಗಿ ಜನರಿಗೆ ಯಾವುದೇ ತರಹದ ಅಭಿವೃದ್ಧಿ ಬಗ್ಗೆ ವಿಚಾರಿಸಲು ಅಧಿಕಾರವಿಲ್ಲದಂತಾಗಿದೆ. ಸುತ್ತಮುತ್ತ ಹೊಸ ಹೊಸ ಕಟ್ಟಡಗಳು ನಿರ್ಮಾಣವಾದದ್ದು ಈಗಲೂ ನೋಡಲು ಲಭ್ಯ. ಆದರೆ ಈ ಕಟ್ಟಡಕ್ಕೆ ಏಕೆ ಕಾಯಕಲ್ಪ ದೊರಕುತ್ತಿಲ್ಲ? ಎಂಬುದೇ ಯಕ್ಷಪ್ರಶ್ನೆಯಾಗಿ ಜನರನ್ನು ಕಾಡುತ್ತಿದೆ.
ಕಾರಣ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿರವರು ಖುದ್ದಾಗಿ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುತ್ತೀರಿ ಎಂದೂ ಹೇಳುತ್ತಾ ಅಲ್ಲದೆ ಅವಾಚ್ಯ ಶಬ್ದಗಳನ್ನು ಬಳಸುವ ಜನಪ್ರತಿನಿಧಿಗಳಿಗೆ ಸೂಕ್ತವಾದ ಆದೇಶ ನೀಡಿದಲ್ಲಿ ಮಾತ್ರ ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಇಲ್ಲವಾದಲ್ಲಿ ನಮ್ಮ ಪಕ್ಷದ ಮೇಲೆ ಇರುವ ಜನರ ಪ್ರೀತಿ ವಿಶ್ವಾಸ ಕಳೆದುಕೊಳ್ಳುವ ಪರಿಸ್ಥಿತಿ ದೂರವಿಲ್ಲವೆಂದು ಗ್ರಾಮಸ್ಥರು ಮಾತನಾಡುತ್ತಿದ್ದಾರೆ.
ಅರ್ಧಕ್ಕೆ ನಿಂತ ಕಟ್ಟಡ ಕುರಿತು ಸಾಕಷ್ಟು ಸಲ ಸಚಿವರ ಗಮನಕ್ಕೂ ತಂದದ್ದು ಇರುತ್ತದೆ. ಆದರೆ ಇಲ್ಲಿಯವರೆಗೆ ಯಾವುದೇ ತರಹದ ಸೂಚನೆಗಳು ಗುತ್ತಿಗೆದಾರರಿಗೆ ತಲುಪಿದಂತೆ ಕಾಣುತ್ತಿಲ್ಲ. ಆದರೆ ವಿಳಂಬದ ಪರಿಸ್ಥಿತಿ ಏಕೆ ಎದ್ದು ಕಾಣುತ್ತಿದೆ. ಶೀಘ್ರ ಮುಕ್ತಾಯಗೊಂಡು ಬೆಳಕು ಕಾಣಲಿ ಎಂದು ಗ್ರಾಮದ ಜನರು ಮಾತನಾಡುತ್ತಿದ್ದಾರೆ.