ತಾವಂಶಿಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಒತ್ತಾಯ
ಸಂಬರಗಿ 30: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾವಂಶಿ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಹಾಗೂ ಸಂಬರಗಿ ಗ್ರಾಮದಲ್ಲಿ ಸಿಸಿ ಕ್ಯಾಮೆರಾ ದೃಶ್ಯಾವಳಿ ಸ್ಥಗಿತಗೊಂಡಿದ್ದು ಮರಳಿ ಪ್ರಾರಂಭ ಮಾಡಬೇಕು ಅವಶ್ಯಕತೆ ಇದ್ದಾಗ ಪುಟೀಸ್ ಬೇಕಾಗಿದರೆ ಸೇವಾ ಶುಲ್ಕ ವಸೂಲಿ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು. ಸಂಬರಗಿ ಗ್ರಾಮ ಪಂಚಾಯತ್ ಸಭಾಗೃಹದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಮಲ್ಲಿಕಾರ್ಜುನ್ ದಳವಾಯಿ ಇವರು ಅಧ್ಯಕ್ಷತೆಯಲ್ಲಿ ಸಭೆ ಹಾಗೂ ಜಮಾ ಬಂದಿ ಕಾರ್ಯಕ್ರಮದಲ್ಲಿ ಸದಸ್ಯರು ಅಗ್ರಹಿಸಿದ್ದಾರೆ ಸಿಸಿ ಕ್ಯಾಮರಾ ಅಗತ್ಯವಿದ್ದು, ಅದರ ಪಾಸ್ ವರ್ಡ್ ಗ್ರಾಮ ಪಂಚಾಯಿತಿಯಲ್ಲಿ ಇರಬೇಕಾಗಿದ್ದು, ಸದ್ಯ ಕ್ಯಾಮೆರಾಗಳು ಬಂದ್ ಆಗಿವೆ, ಕೂಡಲೇ ಆನ್ ಮಾಡಬೇಕು ಎಂದು ಒತ್ತಾಯಿಸಿದರು.ಗ್ರಾಮ ಪಂಚಾಯಿತಿ ಸದಸ್ಯರು ಘರಪಟ್ಟಿ ಪಾಣಿಪಟ್ಟಿ ವಸೂಲಾತಿಗೆ ಸಹಕರಿಸಬೇಕು, ಎಲ್ಲರೂ ತೆರಿಗೆ ಪಾವತಿಸಿದರೆ ಅದರಿಂದ ಬರುವ ಅನುದಾನದಿಂದ ಗ್ರಾಮ ಪಂಚಾಯಿತಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಾಗಿದೆ.
ಇದೇ ವೇಳೆ ಸರಕಾರದ ಆದೇಶದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಶಾಲೆಗೂ ಬಯೋಮೆಟ್ರಿಕ್ ಅಳವಡಿಸುವಂತೆ ಸರಕಾರ ಆದೇಶ ಹೊರಡಿಸಿದೆ.ಶೀಘ್ರವೇ ಆಗಬೇಕು ಹಾಗೂ ಶಿಕ್ಷಕರು ಯಾವಾಗ, ಎಲ್ಲಿ ಸಮಯ ನೀಡುತ್ತಿದ್ದಾರೆ ಎಂಬ ಚಿತ್ರಣವನ್ನು ಶಾಲಾ ವಿದ್ಯಾರ್ಥಿಗಳ ಪೋಷಕರು ಕಾಣಿಸಬಹುದು ಎಂದು ಸದಸ್ಯರು ಆಗ್ರಹಿಸಿದ್ದಾರೆ.
ಹದಿನೈದನೇ ಹಣಕಾಸು ಯೋಜನೆಯಿಂದ ಸರಕಾರದಿಂದ 49 ಲಕ್ಷ ರೂ.ಗಳ ಅನುದಾನ ಬಂದಿದೆ ವಿವಿಧ ಯೋಜನೆಗಳನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಮಾಡಲಾಯಿತು.ಈ ವೇಳೆ ಸಭೆಯಲ್ಲಿ ಹಲವು ಸದಸ್ಯರು ಪ್ರಶ್ನೆಗಳನ್ನು ಎತ್ತಿದ್ದು, ಹಲವರು ತಮ್ಮ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದ್ದು, ಅವುಗಳನ್ನು ಪರೀಶೀಲಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.
ಅಶೋಕ್ ಬಾಬು ಮಾನೆ, ಗ್ರಾ.ಪಂ. ಉಪಾಧ್ಯಕ್ಷ, ಭಂಗರ್ವ ಐವಾಲೆ, ಗ್ರಾ.ಪಂ.ಸದಸ್ಯೆ, ಅಥಣಿಪುರಸಭೆ ಸದಸ್ಯರಾದ ರಾಹುಸಾಹೇಬ್ ಐಹೊಳೆ,ಮಲ್ಲಿಕಾರ್ಜುನ್ ದಳವಾಯಿ ಮಿಥುನ್ ಕಾಂಬ್ಳೆ ವಿಠ್ಠಲ್ ಗಸ್ತಿ ಅಮೃತ್ ಮೀಸಾಳ ಸಹ ಸರ್ವ ಸದಸ್ಯ ಉಪಸ್ಥಿತಿ ಇದ್ದರು.ಗ್ರಾಮ ಪಂಚಾಯತ್ ಗುಮಾಸ್ತರಾದ ರಾಘು ಹೊಸ್ಮನಿಈ ಸಭೆಯಲ್ಲಿ ಸವಿಸ್ತರವಾಗಿ ಮಾಹಿತಿ ನೀಡಿದರು ಪಿ ಡಿ ಓ ದರ್ಪ ತಗಲಿ ವಂದಿಸಿರು. ಗ್ರಾಮ ಪಂಚಾಯತ್ ಸದಸ್ಯರಾದ ಅಪ್ಪಾಸಾಹೇಬ್ ರಾಯಿಗೌಡ ಕೇಂಚಗೌರ ಇತ್ತೀಚೆಗೆ ನಿಧನರಾದ ಗ್ರಾಮ ಪಂಚಾಯಿತಿ ಸದಸ್ಯರಿಂದ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಸಭೆ ಆರಂಭವಾಯಿತು. ಫೋಟೋ:ಸಂಬರಗಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆ ಹಾಗೂ ಜಮಾ ಬಂದಿ ಕಾರ್ಯಕ್ರಮದಲ್ಲಿ ರಾಘು ಹೊಸಮನಿ ಮಾಹಿತಿ ನೀಡುತ್ತಿರುವ ದೃಶ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಮಲಿಕಾರ್ಜುನ್ ದಳವಾಯಿ ಉಪಾಧ್ಯಕ್ಷ ಅಶೋಕ್ ಮಾನೆ ರಾವ್ಸಾಹೇಬ್ ಐಹೋಳೆ ಇನ್ನಿತರು( 30ಸಂಬರಗಿ1)