ಗದಗ 12: ಹಾವೇರಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಅಖ್ತರ ರಿಯಾಜ್ ಅವರು ಲೋಕಸಭಾ ವ್ಯಾಪ್ತಿಯ ಗದಗ ಜಿಲ್ಲೆಯ ಗದಗ, ರೋಣ ಹಾಗೂ ಶಿರಹಟ್ಟಿ ವಿಧಾನ ಸಭಾ ಕ್ಷೇತ್ರಗಳಿಗೆ ಸಂಚರಿಸಿ ಮತದಾನದ ಸಿದ್ಧತೆಗಳನ್ನು ಪರಿಶೀಲಿಸಿದರು.
ಗದಗ, ರೋಣ ಹಾಗೂ ಶಿರಹಟ್ಟಿ ವಿಧಾನ ಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕರಿಗಳೊಂದಿಗೆ ಹಾಗೂ ಸೆಕ್ಟೆರ ಅಧಿಕಾರಿಗಳೊಂದಿಗೆ ಕ್ಷೇತ್ರವಾರು ಸಭೆಯನ್ನು ಜರುಗಿಸಿ ಆಯಾ ಕ್ಷೇತ್ರವಾರು ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಕೈಗೊಳ್ಳಲಾದ ಸಿದ್ಧತೆಗಳನ್ನು ಪರಿಶೀಲಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ವಿಧಾನ ಸಭಾ ಕ್ಷೇತ್ರಗಳ ಸ್ಟ್ರಾಂಗ ರೂಂಗಳನ್ನು ಸಹ ಡಾ. ಅಖ್ತರ ರಿಯಾಜ್ ಪರಿಶೀಲಿಸಿದರು.
ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲಿ ವರ್ನೆಬಲ್, ಕ್ರಿಟಿಕಲ್ ಹಾಗೂ ಸಖಿ ಮತಗಟ್ಟೆಗಳೂ ಸೇರಿದಂತೆೆ ಸರಾಸರಿ 15 ಮತಗಟ್ಟೆಗಳಿಗೆ ಭೇಟಿ ನೀಡಿ ಭಾರತ ಚುನಾವಣಾ ಆಯೋಗದ ನಿದರ್ೇಶನದಂತೆ ಸಂಬಂಧಿತ ಮತಗಟ್ಟೆಗಳಿಗೆ ವಿಕಲಚೇತನರಿಗೆ ರ್ಯಾಂಪ್ ಹಾಗೂ ವೀಲ್ ಚೇರ್ ಸೇರಿದಂತೆ ಸೌಲಭ್ಯಗಳ ಕುರಿತು ಮತ್ತು ಪ್ರತಿ ಮತಗಟ್ಟೆಗಳಿಗೂ ಇರಬೇಕಾದ ಕನಿಷ್ಠ ಸೌಲಭ್ಯಗಳನ್ನು ಪರಿಶೀಲಿಸಿ ಇರುವ ನ್ಯೂನತೆಗಳನ್ನು ಸರಿಪಡಿಸಲು ಸಂಬಂಧಿತ ಸೆಕ್ಟೆರ ಅಧಿಕಾರಿಗಳಿಗೆ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ಶಿರಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ಮತಗಟ್ಟೆ ಸಖ್ಯೆ 20ನ್ನು ಸಖಿ ಮತಗಟ್ಟೆ ಎಂದು ಗುರುತಿಸಲಾಗಿದ್ದು ಈಗ ಸಧ್ಯಕ್ಕಿರುವ ಸಂಪರ್ಕ ರಸ್ತೆ ಸರಿ ಇಲ್ಲದಿರುವದರಿಂದ ತಕ್ಷಣಕ್ಕೆ ಸೂಕ್ತವಾದ ಬದಲಿ ಸಂಪರ್ಕ ರಸ್ತೆಗೆ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಹಾವೇರಿ ಲೋಕಸಭಾ ವ್ಯಾಪ್ತಿಯಲಿ ಬರುವ ಗದಗ ಜಿಲ್ಲೆಯ ಚೆಕ್ ಪೋಸ್ಟಗಳಿಗೆ ಭೇಟಿ ನೀಡಿದ ಡಾ. ಅಖ್ತರ್ ರಿಯಾಜ್ ಆಯಾ ಚೆಕ್ ಪೋಸ್ಟಗಳಲ್ಲಿ ತಪಾಸಣೆ ಮಾಡಲಾಗುತ್ತಿರುವ ಕುರಿತಂತೆ ವಿವರಗಳ ವಹಿಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಹಾಗೂ ಚೆಕ್ ಪೋಸ್ಟಗಳ ಮೂಲಕ ಸಾಗುವ ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಿ ಅಕ್ರಮ ವಸ್ತುಗಳು ಕಂಡುಬಂದಲ್ಲಿ ಅಂತಹ ಸಂಶಯಿತ ವಾಹನಗಳನ್ನು ತೀವ್ರವಾಗಿ ಪರಿಶೀಲಿಸಿ ವಶಪಡಿಸಿಕೊಳ್ಳಲು ಹಾವೇರಿ ಲೋಕಸಭಾ ಸಾಮಾನ್ಯ ವೀಕ್ಷಕ ಡಾ.ಅಖ್ತರ ರಿಯಾಜ ಚೆಕ್ ಪೋಸ್ಟಗಳಲ್ಲಿ ನಿಯುಕ್ತರಾದ ಅಧಿಕಾರಿಗಳಿಗೆ ನಿದರ್ೇಶನ ನೀಡಿದರು.
ಗದಗ ಜಿಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಸಂಚರಿಸುವಾಗ ಡಾ. ಅಖ್ತರ್ ರಿಯಾಜ್ ಅವರು ಮಾರ್ಗ ಮಧ್ಯದ ಗ್ರಾಮಗಳಲ್ಲಿ ಜನ ಸೇರಿರುವ ಸ್ಥಳಗಳಲ್ಲಿ ಇಳಿದು ಅವರೊಂದಿಗೆ ಮಾತನಾಡಿ ಲೋಕಸಭಾ ಚುನಾವಣೆಯ ಮತದಾನ ಕುರಿತಂತೆ ಯಾವುದೇ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಹಾಗೂ ಮತದಾನ ಮಾಡಲು ಯಾವುದೇ ರೀತಿಯಲ್ಲಿ ಅಡೆತಡೆಗಳಿದ್ದಲ್ಲಿ ಅಂತಹ ಸಂದರ್ಭದಲ್ಲಿ ಸಹಾಯವಾಣಿ ಸಂಖ್ಯೆ 1950, ಸಿ-ವಿಜಿಲ್ ಮೋಬೈಲ್ ಆಪ್ ಅಥವಾ ತಮ್ಮನ್ನು ಸಂಪಕರ್ಿಸಲು ತಮ್ಮ ದೂರವಾಣಿ ಸಂಖ್ಯೆ (8277370892) ಸಂಪಕರ್ಿಸಲು ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ ಆಮಿಷಕ್ಕೊಳಗಾಗದೇ, ಯಾವುದೇ ಒತ್ತಡಕ್ಕೊಳಗಾಗದೇ ನಿಭರ್ಿತಿಯಿಂದ ಮತದಾನ ಮಾಡಲು ಡಾ. ಅಖ್ತರ್ ರಿಯಾಜ್ ಜನರಿಗೆ ವಿನಂತಿಸಿದರು.