ಆದಿಜಾಂಬವ ಸಂಘದಿಂದ ಏರಿ್ಡಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಪುತ್ಥಳಿಗೆ ಮಾಲರೆ್ಣ
ಹಾವೇರಿ 01: ವಿಶ್ವಗುರುವ ಬಸವಣ್ಣನವರು ಶೋಷಣೆ ಮುಕ್ತ, ಸರ್ವಸಮಾನತೆಯ ನಾಡನ್ನು ಕಟ್ಟುವ ಕನಸಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ದೇವಸ್ಥಾನಗಳಲ್ಲಿ ಶೂದ್ರರಿಗೆ ಪ್ರವೇಶ ನೀಡದಿದ್ದುದನ್ನು ಪ್ರಶ್ನಿಸಿ ದೇವಸ್ಥಾನಗಳನ್ನೇ ಧಿಕ್ಕರಿಸಿದರು. ಉಚ್ಚ- ನೀಚ ಎಂದು ಭೇದ ಎಣಿಸದೇ ಎಲ್ಲರನ್ನು ಒಳಗೊಂಡ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನವರಿಗೆ ಬಸವಣ್ಣನವರೆ ಸಾಟಿ ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಹೇಳಿದರು.ಬುಧವಾರ ಜಿಲ್ಲಾ ಆದಿಜಾಂಬವ ಸಂಘದಿಂದ ಏರಿ್ಡಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಪುತ್ಥಳಿಗೆ ಮಾಲರೆ್ಣ ಮಾಡಿ ಅವರು ಮಾತನಾಡಿದರು. ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ, ಉರಿಲಿಂಗ ಪೆದ್ದಿ, ಮೇದಾರ ಕೇತಯ್ಯ, ಕುಂಬಾರ ಗುಂಡಯ್ಯ, ಕುರುಬಗೊಲ್ಲಾಳ, ತಳವಾರ ರಾಮಯ್ಯ, ಈಳಿಗೇರ ಮಾರಯ್ಯ, ಒಕ್ಕಲಿಗರ ಮುದ್ದಣ್ಣ, ನುಲಿಯ ಚೆಂದಯ್ಯ, ಸೂಳೆ ಸಂಕವ್ವೆ, ಅಮುಗೆ ರಾಯಮ್ಮ ಸೇರಿದಂತೆ ನೂರಾರು ಶರಣ ಪಡೆಕಟ್ಟಿಕೊಂಡು ವಚನಗಳನ್ನು ರಚಿಸುವ ಮೂಲಕ ಸಮಾನತೆಗೆ ಹೋರಾಡಿದರು. ಅವರ ತತ್ವಗಳನ್ನು ನಾವಿಂದು ಅಳವಡಿಸಿಕೊಳ್ಳಬೇಕಿದೆ ಎಂದರು, ಅಧ್ಯಕ್ಷತೆಯನ್ನು ನ್ಯಾಯವಾದಿ, ಆದಿಜಾಂಬವ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಮಾಳಗಿ ವಹಿಸಿದ್ದರು, ಅಶೋಕ ಮರೆಣ್ಣನವರ, ಮಲ್ಲೇಶ ಕಡಕೋಳ, ಶಿವಬಸಪ್ಪ ಚೌಶೆಟ್ಟಿ, ನಾಗರಾಜ ಮೇದಾರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು