ವಾರ್ಷಿಕ ಕ್ರೀಡಾಕೂಟಕ್ಕೆ ಹವಾಲ್ದಾರ ಅಜೀತ ಅಸ್ಕಿ ಚಾಲನೆ
ಹಾರೂಗೇರಿ 30: ಪಟ್ಟಣದ ಅನುದಾನಿತ ಕರೆಸಿದ್ದೇಶ್ವರ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ವಾರ್ಷಿಕ ಕ್ರೀಡಾಕೂಟ ಜರುಗಿತು.
ಹಾರೂಗೇರಿ ಪೊಲೀಸ ಠಾಣೆಯ ಹವಾಲ್ದಾರ ಅಜೀತ ಅಸ್ಕಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳು ಸದೃಢರಾಗಿ ಬೆಳೆಯಬೇಕಾದರೆ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಸಾಧನೆ ಪರಿಶ್ರಮದಿಂದ ಬರುತ್ತದೆ. ಅದ್ದರಿಂದ ಸತತ ಪ್ರಯತ್ನ ಬೇಕೆಂದರು. ಮತ್ತೋರ್ವ ಅತಿಥಿ ಯಾಗಿ ಪೊಲೀಸ ಇಲಾಖೆಯ ಬಸವರಾಜ ಲಠ್ಠೆ ಆಗಮಿಸಿದ್ದರು.
ಪ್ರೌಢ ಶಾಲಾ ದೈಹಿಕ ಶಿಕ್ಷಕರಾದ ಜೆ ಜೆ ಗಡಾದ ನಾಣ್ಯ ಚಿಮ್ಮಿ ಕಬಡ್ಡಿ ಆಟಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗಾಗಿ ವೈಯಕ್ತಿಕ ಹಾಗೂ ಗುಂಪು ಆಟಗಳನ್ನು ನಡೆಸಲಾಯಿತು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾದ ಆಯ್ ಬಿ ಬಾರಾದಾರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕರಾದ ಎನ್ ಎಲ್ ತಟ್ಟಿಮನಿ. ಡಿ. ಎಸ್ ಬಸಗೌಡರ. ಜಿ. ಎಸ್. ಹಾಡಕಾರ. ಸುನೀಲ ಜಂಬಗಿ. ವೀಣಾ ಹಾಲಪ್ಪನ್ನವರ. ಬಾಲಾನಂದ ಮಾಳಗಿ. ಎಸ್ ಎ ಜಲಗೇರಿ. ಎಸ್ ಎ ಕಾಂಬಳೆ. ತಾಲೂಕಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ. ವಾಯ್ ನಾಯಿಕ. ಎಚ್ ಎಸ್ ಕಂಟೆಪ್ಪಗೋಳ. ಬಾಲಾನಂದ ಮಾಳಗಿ. ಎಸ್ ಎಸ್ ಸರಿಕಾರ. ಪ್ರಮೋದ ದೊಡಮನಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಪ್ರಧಾನ ಗುರುಗಳಾದ ಎಸ್ ಎಮ್ ಚೌಗುಲೆ ಕ್ರೀಡಾಕೂಟ ನಡೆಸಿಕೊಟ್ಟರು.