ಹೊಳಗುಂದಿ ; ಗುರುವಂದನಾ ಸ್ನೇಹ ಸಮ್ಮಿಲನ

Holagundi; Guru Vandana, a gathering of friends

ಹೊಳಗುಂದಿ ; ಗುರುವಂದನಾ ಸ್ನೇಹ ಸಮ್ಮಿಲನ  

ಹೂವಿನಹಡಗಲಿ  18;  ಗದಗ ಪುಟ್ಟರಾಜರು ಗವಾಯಿಗಳು. ಹಾನಗಲ್ ಕುಮಾರ ಸ್ವಾಮಿಗಳು ಸಾಹಿತ್ಯ. ಸಂಗೀತಕ್ಕೆ ನೀಡಿದ  ಕೊಡುಗೆ ಅಪಾರ ಎಂದು ಅಳವಂಡಿ ಕಟ್ಟಿಮನಿ ಹಿರೇಮಠ ದ ಮರುಳರಾದ್ಯ ಸ್ವಾಮಿಗಳು ಹೇಳಿದರು.  ತಾಲ್ಲೂಕಿನ ಹೊಳಗುಂದಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ  ಅ.ಮ.ಪ. ಶಂಕರಲಿಂಗಯ್ಯ  ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ 1990-91 ನೇ ಸಾಲಿನ 10ನೇ ವರ್ಗದ ಸಹಪಾಠಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ದಲ್ಲಿ ಸಾನಿದ್ಯ ವಹಿಸಿ ಮಾತನಾಡಿದರು. ಶಿಕ್ಷಕರಾದ ಪರಮೇಶ್ವರಯ್ಯ. ಕೆ.ಎಸ. ಜಯದೇವಯ್ಯ.ಮಲ್ಲಪ್ಪ. ಪಿಕೆ.ಪಾಟೀಲ್‌. ಟಿ.ಜಾತಪ್ಪ. ಚಂದ್ರಕಾಂತ ಸನ್ಮಾನ ಸ್ವೀಕರಿಸಿ ಮಾತನಾಡಿ ಈ ಅಭೂತಪೂರ್ವ ಕ್ಷಣದಿಂದ ಆಗುವ ಕ್ಷಣದಿಂದ ಆಗುವ ಸಂತೋಷ ವರ್ಣಿಸಲು ಶಬ್ದಗಳು ಸಾಲದು ಎಂದರು.ಇದೇ ವೇಳೆ 10ನೇ ತರಗತಿಯಲ್ಲಿ ಶೇ.90ರಷ್ಟ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. 35 ವರ್ಷಗಳ ನಂತರ ಕುಚಕು ಗೆಳೆಯರು   ಸಿದ್ದೇಶ್ವರ ದೇಗುಲದಲ್ಲಿ ಭಾನುವಾರ ಎಲ್ಲರೂ ಒಂದು ಕಡೆ ಸೇರಿದ್ದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಗುರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಗುರು ಟಿ.ವೆಂಕಟೇಶ ಅದ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ದೇಗುಲ ಅದ್ಯಕ್ಷ ಎಸ್‌.ಮಹೇಶಪ್ಪ. ವಸಂತ ಬಡಿಗೇರ ಇದ್ದರು.  ಹಳೆ ವಿದ್ಯಾರ್ಥಿ ಕೊಟ್ರೇಶ ಸ್ವಾಗತಿಸಿದರು. ಯು.ಎಂ.ಶಿವಯೋಗಿ ನಿರೂಪಿಸಿದರು.ವಿರೇಶ ಪ್ರಾಸ್ತಾವಿಕ ವಿಕ ಮಾತನಾಡಿದರು. ಯುವರಾಜ.ಎಸ್‌.ರಕ್ಷಿತಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.