ಕೊಪ್ಪಳ ನಗರದಲ್ಲಿ ಗವಿಮಠದ ಜಾತ್ರಾ ಮಹೋತ್ಸವ
ಕೊಪ್ಪಳ 13: ಐತಿಹಾಸಿಕ ಪ್ರಸಿದ್ಧ ಗವಿಮಠದ ಜಾತ್ರಾ ಮಹೋತ್ಸವ ಸಮಾರಂಭ ಸಡಗರ ಸಂಭ್ರಮದಿಂದ ದಿ15 ರಿಂದ ಆರಂಭಗೊಳ್ಳಲಿದೆ ಈಗಾಗಲೇ ಕೊಪ್ಪಳ ನಗರದಲ್ಲಿ ಮನೆ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಗೊಂಡಿದೆ ಎಲ್ಲರೂ ಒಗ್ಗೂಡಿ ಅಜ್ಜನ ಜಾತ್ರೆ ಯಲ್ಲಿ ಪಾಲ್ಗೊಳ್ಳೋಣ ಕಾರ್ಯಕ್ರಮ ಯಶಸ್ವಿಗೊಳಿಸೋಣ ಮತ್ತು ಶ್ರೀ ಗಳವರ ಆಶೀರ್ವಾದಕ್ಕೆ ಪಾತ್ರರಾಗೋಣ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಜನರಿಗೆ ಕರೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಆವರು ದಕ್ಷಿಣ ಭಾರತದ ಕುಂಭ ಮೇಳವೆಂದೆ ಖ್ಯಾತಿ ಪಡೆದ ಗವಿಮಠ ಲಕ್ಷಾಂತರ ಬಡ ವಿದ್ಯಾರ್ಥಿಗಳ ಪಾಲಿಗೆ ಸಂಜೀವಿನಿಯಾಗಿ ಶ್ರಮಿಸುತ್ತಿರುವ ಶ್ರೀ ಗವಿಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಲಕ್ಷಾಂತರ ಭಕ್ತಾದಿಗಳು ನಗರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದ ಆವರು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಮ್ಮ ಕೊಪ್ಪಳ ನಗರಸಭೆ ವತಿಯಿಂದ ಎಲ್ಲಾ ಸುವ್ಯವಸ್ಥೆ ಯನ್ನು ಜಿಲ್ಲಾ ಆಡಳಿತದ ಮಾರ್ಗದರ್ಶನದಲ್ಲಿ ವ್ಯವಸ್ಥೆ ಮಾಡಲಾಗಿದೆ ಸಾರ್ವಜನಿಕರು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಶಾಂತತೆಯನ್ನು ಕಾಪಾಡಿಕೊಳ್ಳಬೇಕು ಸಡಗರ ಸಂಭ್ರಮ ದಿಂದ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಆಚರಿಸಬೇಕು, ಜಾತ್ರೆಗೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಕೊಪ್ಪಳ ನಗರಸಭೆಯ ಸರ್ವ ಸದಸ್ಯರ ಮತ್ತು ಅಧಿಕಾರಿಗಳ ಪರವಾಗಿ ತಮ್ಮೆಲ್ಲರಿಗೆ ಹಾರ್ದಿಕವಾದ ಸ್ವಾಗತವನ್ನು ಕೋರುವೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ತಿಳಿಸಿದ್ದಾರೆ