ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಅನನ್ಯ ಅಸ್ಮಿತೆ : ಶಂಕರ ಕ್ಯಾಸ್ತಿ
ಹಾರೂಗೇರಿ 13: ಕನ್ನಡದ ಸೇವೆ ಮಾಡುತ್ತಾ ಕನ್ನಡ ಕಿಂಕರನಾಗಿರುವುದರಲ್ಲಿ ಅಮಿತಾ ನಂದವಿದೆಯೆಂದು ಕನ್ನಡಪರ ಹಿರಿಯ ಹೋರಾಟಗಾರ ಬಸವರಾಜ ಸನದಿ ಹೇಳಿದರು.
ಅವರು ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನವರು ಸುಟ್ಟಟ್ಟಿ ಕ್ರಾಸದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ, ಕುಡಚಿ ಮತ್ತು ರಾಯಬಾಗ ಹೋಬಳಿ ಘಟಕಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕನ್ನಡ ನೆಲದಲ್ಲಿ ಸಿರಿಗನ್ನಡ ಮೆರೆಯಲೆಂದು ಆಶಿಸಿದರು.
ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ್ದ ಡಾ.ರತ್ನಾ ಬಾಳಪ್ಪನವರ ಸಸಿಗೆ ನೀರು ಎರೆದು ಮಾತನಾಡಿ ಕನ್ನಡ ಭಾಷೆ ಓದಾರ್ಯ, ಸೌಂದರ್ಯ, ಮಾಧುರ್ಯಗಳ ಜೇಂಗೊಡವಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಶಂಕರ ಕ್ಯಾಸ್ತಿಯವರು ಮಾತನಾಡುತ್ತ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಅನನ್ಯ ಅಸ್ಮಿತೆ. ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮೂರು ದಿನಗಳ ಮೂರು ನಾಟಕೋತ್ಸವಗಳು,ಎರಡು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು, ಪುಸ್ತಕ ಬಿಡುಗಡೆ,ಕಾವ್ಯ ಸಂಭ್ರಮ,ಸಾಧಕರಿಗೆ ಗೌರವ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡತನ ದಟ್ಟ ಗೊಳಿಸಿರುವುದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಡಚಿ ಹೋಬಳಿ ಘಟಕದ ಅಧ್ಯಕ್ಷರಾಗಿ ಸಂತೋಷ ಸನದಿ ಅಧಿಕಾರ ಸ್ವೀಕರಿಸಿ ಮಾತನಾಡಿ ಕನ್ನಡ ಸೇವೆಗೆ ಕಟಿಬದ್ಧ; ಕನ್ನಡಕ್ಕಾಗಿ ಸದಾ ಸಿದ್ಧವಿರುವುದಾಗಿ ಅಭಿಮತ ಹಂಚಿಕೊಂಡರು.
ರಾಯಬಾಗ ಹೋಬಳಿ ಘಟಕದ ಅಧ್ಯಕ್ಷರಾಗಿ ಮಹಾದೇವಿ ಮಾಳಿ ಪದಗ್ರಹಣ ಮಾಡಿ ’ಕನ್ನಡದ ಮಣ್ಣು ರಸಾನಂದದ ಗಿಣ್ಣು’.ಕನ್ನಡ ಕಸ್ತೂರಿಯ ಪರಿಮಳ ಪಸರಿಸಲು ಸಮಯ ಮುಡಿಪಾಗಿಡುವುದಾಗಿ ಹೇಳಿದರು.
ಹೋಬಳಿ ಘಟಕಗಳ ಅಧ್ಯಕ್ಷರನ್ನು ರಾಯಬಾಗ ಕ.ಸಾ.ಪ ದವರು ಸತ್ಕರಿಸಿ ಗೌರವಿಸಿದರು.
ಅವರೊಂದಿಗೆ ಎರಡು ಘಟಕಗಳ ಪದಾಧಿಕಾರಿಗಳ ಹೆಗಲಿಗೆ ಕನ್ನಡ ಕೊರಳಶಲ್ಯ ಹಾಕಿ ಪುಷ್ಪ ನೀಡಿ ಆದರಿಸಲಾಯಿತು.
ಕನ್ನಡ ಬೆಳೆಸಿದ ಮಹನಿಯರ ಗುಣಗಾನ ಮಾಡಿದ ಖ್ಯಾತ ನಿರೂಪಕಿ ವಾಣಿ ಚೌಗಲಾ ಹಚ್ಚೇವು ಕನ್ನಡದ ದೀಪ ಹಾಡಿಗೆ ಧ್ವನಿ ದಾನ ಮಾಡಿದರು.
ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಸುಪ್ರಿಯಾ ಪೂಜಾರಿ ಪ್ರಥಮ ಸ್ಥಾನ, ಸುಹಾಸಿನಿ ಹಿಪ್ಪರಗಿ ದ್ವಿತೀಯ ಸ್ಥಾನ,ಸಂಧ್ಯಾ ದಳವಾಯಿ ತೃತೀಯ ಸ್ಥಾನ ಪಡೆದು ನಗದು ಬಹುಮಾನಗಳನ್ನು ಪಡೆದುಕೊಂಡರು.
ಶ್ರೀಕಾಂತಗೌಡ ಪಾಟೀಲ ಕನ್ನಡ ಬೆಳವಣಿಗೆಗಾಗಿ ಅಹವಾಲುಗಳನ್ನು ಸಲ್ಲಿಸಿದರು.ಅಬ್ಬಾಸ್ ಲತಿಬ ನವರ,ನಂದೇಶ ಕಾಂಬಳೆ, ಶ್ರೀದೇವಿ ಸಂತೋಷ ಸನದಿ, ಸುರೇಶ ಸನದಿ, ಮಹಾವೀರ ಪಾಟೀಲ, ಸಂಜೀವ ಬ್ಯಾಕೂಡೆ, ಶ್ರೀಕಾಂತ ಕಂಬಾರ, ಅಮರ ಕಾಂಬಳೆ, ಭೂಪಾಲ ಮಾನೆ ,ಕುಮಾರ ಮಾಂಗ, ಚಿದಾನಂದ ಮಿಠಾರೆ ಪ್ರಾಚಾರ್ಯ ಪ್ರಭುಲಿಂಗ ವಾಳಕೆ ಮುಖ್ಯೋಪಾಧ್ಯಾಯ ಜೆ.ಎಲ್. ಗಸ್ತಿ ಮೊದಲಾದವರು ಉಪಸ್ಥಿತರಿದ್ದರು.
ಡಿ.ಬಿ.ಚಾಳಕೆ ನಿರೂಪಿಸಿದರು. ಎನ್. ಟಿ.ಭಿರಡಿ ಸ್ವಾಗತಿಸಿದರು. ಎಸ್. ಕೆ ಚೌಗಲಾ ವಂದಿಸಿದರು