ಸಾಧನೆಗಳು ಮಾತನಾಡಲಿ: ಪ್ರೊ. ಮೂಗನೂರುಮಠ

Let the achievements speak: Prof. Muganur Math

ಸಾಧನೆಗಳು ಮಾತನಾಡಲಿ: ಪ್ರೊ. ಮೂಗನೂರುಮಠ  

ಬಾಗಲಕೋಟೆ 18: ಸಾಧನೆಗಳು ಮಾತನಾಡಬೇಕೇ ಹೊರತು ಮಾತನಾಡುವುದೇ ಸಾಧನೆಗಳಾಗಬಾರದು ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ ಎಸ್ ಆರ್ ಮೂಗನೂರು ಮಠ ಅವರು ಅಭಿಪ್ರಾಯ ಪಟ್ಟರು. 

  ಅವರು ಮಹಾವಿದ್ಯಾಲಯದಲ್ಲಿ ಏರಿ​‍್ಡಸಿದ್ದ ಸಮಾರಂಭದಲ್ಲಿ ಡಿ.ಲಿಟ್ ಪದವಿ ಪಡೆದ ಡಾ ಆರ್ ನಾಗರಾಜು ಮತ್ತು ಡಾಕ್ಟರೇಟ್ ಪದವಿ ಪಡೆದ ಡಾ.ಎಂ ಹೆಚ್ ವಡ್ಡರ್‌.ಹಾಗೂ ಡಾ.ಸಂತೋಷ್ ಗೊರವರ್ ಇವರಿಗೆ ಸನ್ಮಾನ ಮಾಡಿ ಮಾತನಾಡುತ್ತಿದ್ದರು.  

ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ ಸಾಧಿಸಿ ನೋಡಬೇಕು. ಸಾಧಕನು ತಾನು ಪಡೆದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚಬೇಕು ಎಂದು ಅವರು ತಿಳಿಸಿದರು.  

ಇತಿಹಾಸ ವಿಭಾಗದ ಮುಖ್ಯಸ್ಥ ಡಾ ಎಸ್ ಎನ್ ರಾಂಪುರ್‌. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಡಾ ಕೆ ವಿ ಮಠ ವಿದ್ಯಾರ್ಥಿ ಪ್ರತಿನಿಧಿಗಳಾದ ವಾಗೀಶ ಯಂಕಂಚಿ ಪಾರ್ವತಿ ಹಿರೇಮಠ ಉಪಸ್ಥಿತರಿದ್ದರು. ಐ.ಕ್ಯೂ.ಎ.ಸಿ ಸಂಯೋಜಕರಾದ ಅಪ್ಪು ರಾಥೋಡ್ ಸ್ವಾಗತಿಸಿದರು ಡಾ. ಕೆ. ವಿ ಮಠ ಕಾರ್ಯಕ್ರಮ ನಿರೂಪಿಸಿದರು ದೈಹಿಕ ನಿರ್ದೇಶಕರಾದ ಪ್ರೊ ಮಂಜುನಾಥ್ ದೇವನಾಳ ವಂದಿಸಿದರು.  ಬಾಗಲಕೋಟೆ ಜಿಲ್ಲೆ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಇತಿಹಾಸದಲ್ಲೇ ​‍್ರ​‍್ರಥಮವಾಗಿ "ಡಾಕ್ಟರ್ ಆಫ್ ಲಿಟರೇಚರ್" ಪದವಿ ಪಡೆದ ಡಾ ಆರ್ ನಾಗರಾಜ್ ರವರು ಮೂಲತಹ ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನವರು ಕಳೆದ ಎರಡು ದಶಕಗಳಿಂದ ಬಾಗಲಕೋಟೆಯ ಬಿವಿವಿ ಸಂಘದ ಪದವಿ ಮಹಾವಿದ್ಯಾಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.