ತಹಶೀಲ್ದಾರ ಕಚೇರಿಗೆ ದೀಡೀರನೆ ಲೋಕಾಯುಕ್ತ ಡಿವೈಎಸ್‌ಪಿ ಭೇಟಿ

Lokayukta DySP visits Tahsildar's office

  ತಹಶೀಲ್ದಾರ ಕಚೇರಿಗೆ ದೀಡೀರನೆ ಲೋಕಾಯುಕ್ತ ಡಿವೈಎಸ್‌ಪಿ ಭೇಟಿ 


ಶಿರಹಟ್ಟಿ 18: ಪಟ್ಟಣದ ತಹಶೀಲ್ದಾರ ಕಚೇರಿಗೆ ಲೋಕಾಯುಕ್ತ ಡಿವೈಎಸ್‌ಪಿ ವಿಜಯಕುಮಾರ ಬಿರಾದಾರ, ಪರಮೇಶ ಕವಟಗಿ ಹಾಗೂ ಸಿಬ್ಬಂದಿಗಳು ದಿಢೀರನೇ                                      ಭೇಟಿ ನೀಡಿ ಕಡತಗಳನ್ನು ಪರೀಶೀಲಿಸಿದರು.   

ತಹಶೀಲ್ದಾರ್ ಕಚೇರಿಯಲ್ಲಿ ಸಕಾಲದಲ್ಲಿ ಸಾರ್ವಜನಿಕರ ಕೆಲಸ ಮಾಡದೆ ಕಚೇರಿಗೆ ಅಲೆದಾಡಿಸುವುದು, ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಸೇರಿದಂತೆ ವಿವಿಧ ದೂರುಗಳ ಬಂದ  ಹಿನ್ನೆಲೆಯಲ್ಲಿ ಲೋಕಾಯುಕ್ತರು ರೇಕಾರ್ಡ್‌ ರೂಂಗೆ ಭೇಟಿ ನೀಡಿದ ತಕ್ಷಣ ರೈತರ ಸಮಸ್ಯೆಯಗಳನ್ನು ಆಲಿಸಿದರು. ದಾಖಲಾತಿಯನ್ನು ಪಡೆಯಲು ಇಚ್ಚಿಸುವರು ಚಲನ್ ಕಟ್ಟಬೇಕು. ಅವರಿಗೆ ದುಡ್ಡು ನೀಡಬಾರದು ಎಚಿದು ಸಲಹೆ ನೀಡಿದರು. ಯಾವ ದಾಖಲಾತಿಗಳಿಗೆ ಎಷ್ಞು ದುಡ್ಡು ಎನ್ನುವ ಫಲಕವನ್ನು ಹಾಕುವಚಿತೆ ಅಧಿಕಾರಿಗಳಿಗೆ ತಾಕೀತು ಮಾಡಿದರು, 

ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ವಿವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಿಗೆ ಕೋರಿ ಬಂದ ಅರ್ಜಿಗಳು, ನಾಡ ಕಚೇರಿ ಕಡತಗಳು, 370 (ಜೆ), ಆಹಾರ ಇಲಾಖೆ, ಪಹಣಿ, ಭೂಮಿ ಮಂಜೂರು ಅರ್ಜಿಗಳ ಕಡತಗಳು ಸೇರಿದಂತೆ ಕಚೇರಿಯ ಹಾಜರಾತಿ, ಕ್ಯಾಶ್ ನೋಂದಣಿ ಬುಕ್ ನಲ್ಲಿ ಸಂಜೆ 4 ವರೆಗೆ ಪರೀಶೀಲಿಸಿದರು. ಕಚೇರಿಗೆ ಅರ್ಜಿಗಳು ಹಿಡಿದು ಬಂದಿದ್ದ ಸಾರ್ವಜನಿಕರ ದೂರುಗಳನ್ನೂ ಆಲಿಸಿ, ಸಂಬಂಧಿಸಿದ ದಾಖಲೆಗಳನ್ನೂ ಸ್ವೀಕರಿಸಿದರು. 

ತಹಶೀಲ್ದಾರ ಕಚೇರಿಯಲ್ಲಿ ಕೆಲವು ಕಡೆ ಹಲವಾರು ಸಮಸ್ಯೆಗಳು ಇವೆ, ಇವುಗಳನ್ನು 15 ದಿನಗಳಲ್ಲಿ ಸರಿಪಡಿಸಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮುಂದಿನ ಬಾರಿ ಭೇಟಿ ಕೊಟ್ಟಾಗ ಯಾವುದೇ ಸಮಸ್ಯೆ ಇರಬಾರದು. ಒಂದು ವೇಳೆ ಕಂಡುಬಂದರೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.