ಸಂಚಾರಿ ಆರೋಗ್ಯ ಘಟಕ ಬಸ್‌ಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ

MLA Ganesh Hukkeri flags off mobile health unit bus

ಸಂಚಾರಿ ಆರೋಗ್ಯ ಘಟಕ ಬಸ್‌ಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ  

ಚಿಕ್ಕೋಡಿ 20: ಚಿಕ್ಕೋಡಿ-ಸದಲಗಾ ಕ್ಷೇತ್ರದ ಕೆರೂರ, ಕಾಡಾಪುರ ಜೋಡಕುರಳಿ, ಬಸನಾಳಗಡ್ಡೆ ಮತ್ತು  ನನದಿ ಗ್ರಾಮಗಳಿಗೆ ಕೃಷ್ಣಾ ನದಿಯಿಂದ ನೇರವಾಗಿ ನೀರಾವರಿ ಪೈಪಲೈನ್ ಕಾಮಗಾರಿ ಯೋಜನೆಗೆ 210 ಕೋಟಿ ರೂ ಅನುದಾನಕ್ಕೆ ಸರ್ಕಾರ ಶೀಘ್ರದಲ್ಲಿಯೇ ಒಪ್ಪಿಗೆ ಸೂಚಿಸಲಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. 

ತಾಲೂಕಿನ ಕೆರೂರ - ಜೋಡಕುರಳಿ ರಸ್ತೆಯ ಕಾಮಗಾರಿಗೆ ಹಾಗೂ ಸಂಚಾರಿ ಆರೋಗ್ಯ ಘಟಕದ ಬಸಗೆ ಚಾಲನೆ ನೀಡಿ ಅವರು ಮಾತನಾಡಿದರು. ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಎದುರಾಗಬಹುದು ಎಂಬ ಭಯ ಕಾಡುತ್ತಿತ್ತು. ಆದರೆ ಸರ್ಕಾರ ಸಮರ​‍್ಕ ವಿದ್ಯುತ್ ಪೂರೈಕೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿದೆ ಎಂದರು. 

ಕೆರೂರ ಗ್ರಾಮದಲ್ಲಿ 33 ಕೆವಿ ವಿದ್ಯುತ್ ಸ್ಟೇಷನವನ್ನು 110 ಕೆ ವಿ ಸ್ಟೇಷನ್ ಎಂದು ಮೇಲ್ದರ್ಜೆಗೆ ಮಂಜೂರಾಗಿದೆ. ಅದೇ ರೀತಿ ಪಟ್ಟಣಕೊಡಿಯಲ್ಲಿ ಸಹ 33 ಕೆ ವಿ ದಿಂದ 110 ಕೆವಿ 

ಸ್ಟೇಶನ್ ಮೇಲ್ದರ್ಜೆಗೆರಿಸಲಾಗಿದೆ.  

ನಾಗರಾಳ ಗ್ರಾಮದಲ್ಲಿ ನೂತನ ವಿದ್ಯುತ್ ಸ್ಟೇಷನ್ ನಿರ್ಮಾಣಕ್ಕಾಗಿ ನಾವು ವೈಯಕ್ತಿಕವಾಗಿ 10 ಎಕ್ಕರೆ ಭೂಮಿ ನೀಡಿದ್ದೇವೆ. ಎಲ್ಲಾ ನೀರಾವರಿ ಯೋಜನೆಗಳಿಗೆ ವಿದ್ಯುತ್ ಪೂರೈಕೆಗೆ ವ್ಯತ್ಯಯ ಆಗಬಾರದೆಂದು ಹಾಗೂ ರೈತರಿಗೆ ನಾಗರಿಕರಿಗೆ ಸಮರ​‍್ಕವಾಗಿ ವಿದ್ಯುತ್ ಪೂರೈಸಿಲಿಕ್ಕೆ ನಾವು ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇವೆ ಎಂದರು. 

ಮುಖಂಡರಾದ ಮಲ್ಲಿಕಾರ್ಜುನ್ ಪಾಟೀಲ ಮಾತನಾಡಿ ಕೇರೂರ ಗ್ರಾಮಕ್ಕೆ ಶಾಸಕ ಗಣೇಶ ಹೂಕೇರಿ ಹಾಗೂ ಎಂಎಲ್ಸಿ ಪ್ರಕಾಶ್ ಹುಕ್ಕೇರಿ ಅವರು ಐದು ಕೋಟಿ ರೂಪಾಯಿಗಳ ಅನುದಾನ ನೀಡಿದ್ದಾರೆ. ಮುಂದಿನ ದಿನಮಾನಗಳಲ್ಲಿ ಮತ್ತಷ್ಟು 5 ಕೋಟಿ ರೂಪಾಯಿಗಳು ನೀಡಲಾಗುವುದೆಂದು ಭರವಸೆ ನೀಡಿದ್ದಾರೆ. ಕಾಲುವೆಗಳಿಗೆ ಎರಡು ಬ್ರಿಜ್‌ಗಳು ಮಂಜೂರು ಮಾಡಲಾಗುವುದು ಹೇಳಿದ್ದಾರೆ. ಸೊಸೈಟಿಗಳಿಗೆ 30 ಲಕ್ಷ ಎರಡು ಗೋದಾಮು ನಿರ್ಮಿಸಿದ್ದಾರೆ. ರೈತರ ಕಬ್ಬುಗಳನ್ನು ಹೋಗಲಿಕ್ಕೆ ಅನಾನುಕೂಲತೆ ಆಗಬಾರದು ಎಂದು ಗ್ರಾಮೀಣವಾಗದ ಎಲ್ಲ ರಸ್ತೆಗಳನ್ನು ಮಾಡುತ್ತಿದ್ದಾರೆ ಎಂದರು.  

ನಿವೃತ್ತ ಶಿಕ್ಷಕ ರಾಜೇಸಾಬ ಸಯದ್  ಮಾತನಾಡಿದರು.  ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರೇಂದ್ರ ಪಾಟೀಲ್,  ರವಿ ಪಾಟೀಲ್,  ಮಲ್ಲಪ್ಪ ಬಾಗಿ, ವಿಠ್ಠಲ ವ್ಯಾಳಕೆ, ಶಿವಪ್ಪ ಪೂಜಾರಿ, ವಿಠಲ ಬೀಳಗಿ, ಸಂಭಾಜಿ ಹಕ್ಕ್ಯಾಗೋಳ ಮಹೇಶ ಪಾಟೀಲ, ಖಾನಪ್ಪ ಬಾಡಕರ, ಸೋಮಶೇಖರ  ಸಂಕಪಾಳ, ಸುರೇಶ್ ಬಾಡಕರ,  ಶಿವಾನಂದ ನಾಗನುರೆ, ಪಿಡಿಓ ವಿನೋದ ಅಸೋದೆ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.