ಬಾಲ್ಯವಿವಾಹ ಪಿಡುಗನ್ನು ಸಮಾಜದಿಂದ ಹೋಗಲಾಡಿಸಲು ಪ್ರಾಮಾಣಿಕವಾಗಿ ಪ್ರಯತ್ನಸಿ: ಅಪರ್ಣಾ.ಎಂ.ಕೊಳ್ಳ
ಬೆಳಗಾವಿ ಡಿ.31: ಇತ್ತೀಚಿನ ದಿನಗಳಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಆದರಿಂದ ನಾವೆಲ್ಲರೂ ಕ್ರೀಯಾಶಿಲರಾಗಿ ಕಾರ್ಯನಿರ್ವಹಿಸಿ ಈ ಪೀಡುಗನ್ನು ಸಮಾಜದಿಂದ ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಗ್ರಾಮೀಣ ಮಟ್ಟ, ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿರುವ ಬಾಲ್ಯವಿವಾಹ ನಿಷೇದಾಧಿಕಾರಿಗಳು ಮಾಹಿತಿ ಬಂದ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸದಸ್ಯರಾದ ಅಪರ್ಣಾ.ಎಂ.ಕೊಳ್ಳ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ, ಬೆಂಗಳೂರಿನ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಗೋಕಾಕ ಅರಭಾವಿ, ಜಿಲ್ಲಾಮಕ್ಕಳ ರಕ್ಷಣಾ ಘಟಕ, ಇವುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ (ಡಿ.23) ಎಲ್‌ಇ ಸಂಸ್ಥೆ ಪ್ರೌಢಶಾಲೆ ಸಭಾಂಗಣಗೃಹದಲ್ಲಿ ನಡೆದ ಗೋಕಾಕ ನಗರದ ಮಕ್ಕಳ ಕಲ್ಯಾಣ ಪೋಲಿಸ್ ಅಧಿಕಾರಿಗಳಿಗೆ, ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ, ಶಾಲೆಯ ಮುಖ್ಯೊಪಾದ್ಯಾಯರಿಗೆ, ಅಂಗನವಾಡಿ ಮೇಲ್ವಿಚಾರಕಿಯರಿಗೆ, ಆಶಾಕಾರ್ಯಕರ್ತೆಯರಿಗೆ ಬಾಲ್ಯವಿವಾಹ ಮತ್ತು ಪೋಕ್ಸೋ ಕಾಯ್ದೆಗಳ ಕುರಿತು ತರಬೇತಿ ಹಾಗೂ ಆರ್‌ಟಿಇ ಅನುಷ್ಠಾನ ಮತ್ತು ಮಕ್ಕಳ ಶಿಕ್ಷಣದ ಜೊತೆಗಿದೆ ರಕ್ಷಣೆ ಶೀರ್ಷಿಕೆಯಡಿ ಮಕ್ಕಳೊಂದಿಗೆ ಅಹವಾಲು ಸ್ವೀಕಾರ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಪ್ರೀತಿ ಪ್ರೇಮದಂತಹ ನಾಟಕಗಳನ್ನು ಮಾಡಿ ಮಕ್ಕಳ ಜೀವನವನ್ನು ಹಾಳು ಮಾಡುವ ನೀಟ್ಟಿನಲ್ಲಿ ಸೈಬರ್ ವಂಚಕರು ನಿಮಗೆ ಗೋತ್ತಾಗದೇ ನಿಮ್ಮನ್ನು ಮೋಸದ ಹಾದಿಯಲ್ಲಿ ತಳ್ಳುತ್ತಾರೆ. ಆದಕಾರಣ ಮಕ್ಕಳು ತಮ್ಮ ದಿನನಿತ್ಯ ಜೀವನದಲ್ಲಿ ಚನ್ನಾಗಿ ಓದಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲ್ ಗೊಳಿಸಿಕೋಳ್ಳಬೇಕು. ಮಕ್ಕಳ ರಕ್ಷಣೆ ಪೋಷಣೆ ಅಗತ್ಯತೆ ಇದ್ದಲ್ಲಿ ಮಕ್ಕಳ ಸಹಾಯವಾಣಿ 1098/112 ಕರೆ ಮಾಡಿ ಇದು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಬಾಲ್ಯ ವಿವಾಹ ನಿಷೇಧಕಾಯ್ದೆ 2006, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕಾಯ್ದೆ 2012, ಮಕ್ಕಳೆಂದರೆ 0-18 ವರ್ಷದೊಳಗಿನ ಎಲ್ಲಾ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕು. ಇಂದಿನ ಮಕ್ಕಳೇ ಇಂದಿನ ದೇಶದ ಪ್ರಜೆಗಳು, ಈ ದೇಶದ ಭವಿಷ್ಯತ್ತು ತಮ್ಮ ಹಕ್ಕುಗಳನ್ನು ಪ್ರತಿದಿನ ಅನುಭವಿಸುವಂತಾಗಬೇಕು. ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಮಕ್ಕಳ ಗ್ರಾಮಸಭೆ ಮಾಡುವಾಗ ಹೆಚ್ಚಾಗಿ ಮಕ್ಕಳ ಸಮಸ್ಯೆಗಳ ಕುರಿತು ಚರ್ಚಿಸಿ ಅದಕ್ಕೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕು. ಆದ್ದರಿಂದ ಈ ದೇಶ ಅಭಿವೃಧ್ಧಿ ಹೊಂದಬೇಕಾದರೆ ನಮ್ಮ ಮಕ್ಕಳ ಅಭಿವೃಧ್ಧಿ ಹೊಂದಬೇಕು. ಯಾವ ಮಕ್ಕಳು ಸಹ ರಕ್ತ ಹಿನತೆಯಿಂದ, ಮಾನಸಿಕ ಕಾಯಿಲೆಗಳಿಂದ, ಇತರೆ ಯಾವುದೇ ಖಾಯಿಲೆಗಳಿಂದ ಬಳಲಬಾರದು ಎಂದು ಅಪರ್ಣಾ.ಎಂ.ಕೊಳ್ಳ ಅವರು ತಿಳಿಸಿದರು.
ಬೆಳಗಾವಿ ಜಿಲ್ಲೆಯು ಗಡಿ ವಿಭಾಗದ ಜಿಲ್ಲೆಯಾಗಿರುವುದರಿಂದ ಬಾಲ್ಯ ವಿವಾಹ ಪೋಕ್ಸೋ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಹೆಣ್ಣು ಮಕ್ಕಳು ಶಾಲೆ ಕಲೆಯುವ ಸಂದರ್ಭದಲ್ಲಿ ಆ ಮಕ್ಕಳ ಶಾಲೆಯನ್ನು ಬಿಡಿಸಿ ಮದುವೆ ಮಾಡುತ್ತಿರುವುದು ನಮ್ಮ ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಆ ಮಕ್ಕಳ ಭವಿಷ್ಯದ ಜೀವನದಲ್ಲಿ ದೈಹಿಕವಾಗಿ, ಶೈಕ್ಷಣಿಕವಾಗಿ, ಶಾರೀರಕವಾಗಿ ಹಾಗೂ ಮಾನಸಿಕವಾಗಿ ತುಂಬಾ ಹಿಂಸೆಯಾಗುತ್ತಿದ್ದು, ಆದ್ದರಿಂದ ಇಂತಹ ಪ್ರಕರಣಗಳು ಯಾರಿಗಾದರೂ ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ವಿಷಯವನ್ನು ಇಲಾಖೇಯ ಗಮನಕ್ಕೆ ತರಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಅಣ್ಣಪ್ಪ ಹೆಗಡೆ ಅವರು ಹೇಳಿದರು.
ಹೆಣ್ಣು ಮಗುವಿಗೆ 18 ವರ್ಷಆಗುವವರೆಗೆ ಗಂಡು ಮಗುವಿಗೆ 21 ವರ್ಷ ಆಗುವವರೆಗೆ ಮದುವೆ ಮಾಡಬಾರದು. ಒಂದು ವೇಳೆ ಕದ್ದು ಮುಚ್ಚಿ ಮದುವೆ ಮಾಡಿದಲ್ಲಿ ಬಾಲ್ಯವಿವಾಹ ನಿಷೇಧಕಾಯ್ದೆ 2006ರನ್ವಯ 1.00 ಲಕ್ಷದವರೆಗೆ ದಂಡ ಹಾಗೂ 2 ವರ್ಷ ಕಠಿಣ ಕಾರಾಗೃಹ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಅಣ್ಣಪ್ಪ ಹೆಗಡೆ ಅವರು ಹೇಳಿದರು.
ನಮ್ಮ ತಾಲೂಕಿನ ವ್ಯಾಪ್ತಿಯಡಿ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಎಲ್ಲ ಮಕ್ಕಳು ಕಡ್ಡಾಯವಾಗಿ ಶಾಲೆಯಲ್ಲಿ ದಾಖಲೆ ಮಾಡಿಕೊಳ್ಳಬೇಕು. ಇದರ ಕುರಿತು ಶಾಲಾ ಮುಖ್ಯೋಪಾಧ್ಯಾಯರು ಹೆಚ್ಚಿನ ಗಮನ ಹರಿಸಬೇಕು. ಆರ್.ಟಿ.ಇ ಕಾಯ್ದೆಯಡಿಯಲ್ಲಿ ದಾಖಲಾದ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಬಿ.ಬಳಿಗಾರ ಅವರು ಹೇಳಿದರು.
ಇತ್ತೀಚಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳು ತುಂಬಾ ನಡೆಯುತ್ತಿವೆ. ಆದ್ದರಿಂದ ಸಮಾಜದಲ್ಲಿ ಹೆಣ್ಣು ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರೆ ಒಳ್ಳೆಯ ಶಿಕ್ಷಣ ಪಡೆಯಬೇಕು. “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ನಾನ್ನುಡಿಯಂತೆ ಭವಿಷ್ಯದಲ್ಲಿ ಎಲ್ಲ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಒಳ್ಳೆಯ ಸ್ಥಾನಗಳನ್ನು ಪಡೆದು ಸಮಾಜದ ಮುನ್ಸೂಚನೆಯಲ್ಲಿ ಬರವಂತಾಗಬೇಕು ಜಿ.ಬಿ.ಬಳಿಗಾರ ಎಂದರು.
ಮಕ್ಕಳಿಗೆ ಶಿಕ್ಷಣಕೊಡಿಸುವಲ್ಲಿ ಪಾಲಕರ ಜವಾಬ್ದಾರಿ ತುಂಬಾ ಮುಖ್ಯವಾಗಿರುತ್ತದೆ. ಆದ್ದರಿಂದ ಎಲ್ಲ ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಿ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಪ್ರತಿದಿನ ಶಾಲೆಗೆ ಬರಬೇಕು ಒಂದು ವೇಳೆ ಯಾವುದೇ ಮಗು 6 ದಿನಗಳಿಗಿಂತ ಹೆಚ್ಚಿಗೆ ಶಾಲೆಯಲ್ಲಿ ಗೈರು ಹಾಜರಿದ್ದರೆ ಶಾಲೆಯ ಮುಖ್ಯೊಪಾದ್ಯಾಯರು ಅಂತಹ ಮಕ್ಕಳ ಮನೆಗೆ ಬೇಟಿ ನೀಡಿ ಸರಿಯಾದ ಕಾರಣವನ್ನು ತಿಳಿದುಕೊಂಡು ಆ ಮಗುವಿನ ಸಮಸ್ಯೆಗೆ ಆಲಿಸಿ ಮಗು ಮರಳಿ ಶಾಲೆಗೆ ಬರುವ ಹಾಗೇ ನೋಡಿಕೊಳ್ಳುವುದು ನಿಮ್ಮ ಆದ್ಯ ಕರ್ತವ್ಯವಾಗಿರುತ್ತದೆ ಆದ್ದರಿಂದ ಶಾಲೆಯಲ್ಲಿರುವ ಮಕ್ಕಳಿಗೆ ಯಾವುದೇ ಸಮಸ್ಯೆ ಇದ್ದರೂ ಆ ಸಮಸ್ಯೆಗಳನ್ನು ಆಲಿಸಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಜಿ.ಬಿ.ಬಳಿಗಾರ ಎಂದರು. ತಿಳಿಸಿದರು.
ಗೋಕಾಕನ ಶಿಶು ಅಭಿವೃದ್ದಿ ಯೋಜನಾಧಿಕಾರಿ ಡಿ.ಎಸ್.ಕುಡವಕ್ಕಲಿಗ, ಅರಬಾವಿಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಯಲ್ಲಪ್ಪಾ ಗದಾಡಿ, ಗೋಕಾಕ ತಾಲೂಕಾ ವೈದ್ಯಾಧಿಕಾರಿಗಳು ಡಾ.ಮುತ್ತಣ್ಣ ಕೊಪ್ಪದ, ಗೋಕಾಕ ಅಂಗನವಾಡಿ ಮೇಲ್ವಿಚಾರಕಿ ಯಶೋದಾ ಸಂಕಣ್ಣವರ, ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಶಾಲೆಯ ಮುಖ್ಯೊಪಾದ್ಯಾಯರು, ಅಂಗನವಾಡಿ ಮೇಲ್ವಿಚಾರಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಸಹಾಯವಾಣಿ-1098 ಸಿಬ್ಬಂದಿಗಳು, ಸ್ಪೂರ್ತಿ ಯೋಜನೆ ಕೆಎಚ್‌ಪಿಟಿ ಗೋಕಾಕ ಹಾಗೂ ವಿವಿಧ ಸಂಘ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.