ಮೂಡಲಗಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ರಾ​‍್ಯಂಕ್

Rank for Mudalagi Govt First Class College

ಮೂಡಲಗಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ರಾ​‍್ಯಂಕ್ 

        ಬೆಳಗಾವಿ 03: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು 12 ನೇ ಘಟಿಕೋತ್ಸವದಲ್ಲಿ      2022-23 ನೇ ಸಾಲಿನ ಮೂಡಲಗಿಯ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ  ಬಿ.ಎ ವಿಭಾಗದ ವಿದ್ಯಾರ್ಥಿನಿಯಾದ ಕುಮಾರಿ ದೀಪಾ ಗಂಗಣ್ಣವರ ಅವರು ಶೇಕಡಾ 90.81 ಅಂಕಗಳನ್ನು ಪಡೆದುಕೊಂಡು ವಿಶ್ವವಿದ್ಯಾಲಯಕ್ಕೆ ಎಂಟನೇ ರಾ​‍್ಯಂಕ್ ಗಳಿಸಿ ಘಟಿಕೋತ್ಸವ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.  

ವಿದ್ಯಾರ್ಥಿನಿಯ ಈ ಸಾಧನೆಗೆ ಪ್ರಾಂಶುಪಾಲರು, ಸಿ.ಡಿ.ಸಿ.ಯ ಸರ್ವ ಸದಸ್ಯರು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ತಿಳಿಸಿ ಶುಭ ಹಾರೈಸಿದ್ದಾರೆ.