ಸಲಗರ ರಸ್ತೆ ಡಾಂಬರೀಕರ: ವಾಹನ ಚಾಲಕರಲ್ಲಿ ಹರ್ಷ

Salagara Road Asphalted: Motorists rejoice

ಸಲಗರ ರಸ್ತೆ ಡಾಂಬರೀಕರ: ವಾಹನ ಚಾಲಕರಲ್ಲಿ ಹರ್ಷ 

ಸಂಬರಗಿ 02: ಸಂಬರಗಿ ಕರ್ನಾಟಕದ ಮಹಾರಾಷ್ಟ್ರ್ಟ್ರದ ಗಡಿ ಸಲಗರ ರಸ್ತೆ ದುರಸ್ತಿ ಕಾಣದೆ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ಐವತ್ತು ವರ್ಷಗಳ ನಂತರ ಈ ರಸ್ತೆಯ ಭಾಗ್ಯ ಬೆಳಗಿದ್ದು, ಶಾಸಕ ರಾಜು ಕಾಗೆಯವರ ಪ್ರಯತ್ನದಿಂದ ರಸ್ತೆ ಖಡಿಕರಣ ಮುಕ್ತಾಯಗೊಂಡಿದ್ದು ಡಾಂಬರೀಕರಣ ಆರಂಭವಾಗಿದೆ.ಇದರಿಂದ ವಾಹನ ಮಾಲೀಕರಿಂದ ಸಂತಸ ವ್ಯಕ್ತವಾಗಿದೆ.ಸಂಬರಗಿ ಎರಡು ಕಿಲೋಮೀಟರ್ ದೂರದಲ್ಲಿ ಸರ್ಕಾರಿ ಆಸ್ಪತ್ರೆ ಇದೆ.ರಸ್ತೆ ಇಲ್ಲದ ಕಾರಣ ರೋಗಿಗಳು ಬಂದು ಹೋಗುವುದು ಕಷ್ಟವಾಗುತ್ತಿತ್ತು. ಈ ಸಮಸ್ಯೆ ಕಂಡು ಶಾಸಕ ರಾಜು ಕಾಗೆಯವರು ಗಮನ ಹರಿಸಿ 2 ಕೋಟಿ ಅನುದಾನ ಮಂಜೂರು ಮಾಡಿ ಗ್ರಾಮದಿಂದ ಕರ್ನಾಟಕದ ಗಡಿಭಾಗದ ಸರಕಾರಿ ಆಸ್ಪತ್ರೆ ರಸ್ತೆಯವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿ ಆರಂಭಿಸಿದ್ದಾರೆ. ಐವತ್ತು ವರ್ಷಗಳ ನಂತರ ಈರಸ್ತೆಯ ಡಾಂಬರೀಕರಣ ಆರಂಭವಾಗಿರುವುದು ಜನರಲ್ಲಿ ಸಂತಸ ಮೂಡಿದೆ. ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ವಾಹನ ಸವಾರರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಈ ರಸ್ತೆಯು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದ್ದು, ಅಧಿಕಾರಿಗಳು ಕೂಡ ಇದರ ಮುಂದೆ ನಿಂತು ಕೆಲಸ ಮಾಡುತ್ತಿರುವುದರಿಂದ ಈ ರಸ್ತೆಯು ಸರ್ಕಾರಿ ಆಸ್ಪತ್ರೆಯ ಮಾರ್ಗವಾಗಿ ಮಾರ​‍್ಪಟಟಿದೆ. ನಾಲ್ಕು ಕಿಲೋಮೀಟರ್ ರಸ್ತೆ ಡಾಂಬರೀಕರಣ ಆಗುತ್ತಿರುವುದರಿಂದ ಕರ್ನಾಟಕದ ಗಡಿವರೆಗೂ ರಸ್ತೆ ಉತ್ತಮವಾಗಿ ಎಲ್ಲರಿಗೂ ಅನುಕೂಲವಾಗಿದೆ. 

       ಈ ಪ್ರದೇಶದಲ್ಲಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ. ಪಾಂಡೆಗಾಂವ್ -ಕೊಗನೋಳಿ, ಅರಳಹಟ್ಟಿ-ಸಲಗರ, ಮಧಭಾವಿ-ಜಾನರಾವಾಡಿ, ಬಾಳಿಗೆರಿ-ಗುಗವಾಡ, ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಈಗ ಡಾಂಬರೀಕರಣಗೊಂಡಿವೆ, ಆದ್ದರಿಂದ ಸಾಂಗ್ಲಿ ಮೀರಜ್‌ಸಂಪರ್ಕ ರಸ್ತೆಗಳು ಅತ್ಯುತ್ತಮವಾಗಿವೆ. ಈ ಪ್ರದೇಶದ ನಾಗರಿಕರು ಮತ್ತು ವಾಹನ ಚಾಲಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಯಕರ್ತ ಬಸವರಾಜ್ ಅಂಗಡಿ, ಸಿದ್ದಪ್ಪ ಹುಬ್ಬಳ್ಳಿ ಮತ್ತು ಇನ್ನತರ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.