ಜ.10 ರಂದು ಸಂಜು ವೆಡ್ಸ್‌ ಗೀತಾ-2 ಬಿಡುಗಡೆ: ನಟ ಶ್ರೀನಗರ ಕಿಟ್ಟಿ

Sanju Weds Geeta-2 release on Jan 10: Actor Srinagar Kitty

ಜ.10 ರಂದು ಸಂಜು ವೆಡ್ಸ್‌ ಗೀತಾ-2 ಬಿಡುಗಡೆ: ನಟ ಶ್ರೀನಗರ ಕಿಟ್ಟಿ

ಕೊಪ್ಪಳ 03 : ಸಂಜು ವೆಡ್ಸ್‌ ಗೀತಾ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಭರ್ಜರಿ ಯಶಸ್ವಿಯನ್ನು ನೀಡಿದ್ದೀರಿ ಅದೇ ರೀತಿ ಸಂಜು ವೆಡ್ಸ್‌ ಗೀತಾ-2 ಇದೇ ಜನವರಿ 10ರಂದು ರಾಜ್ಯದಾತ್ಯಂತ ಬಿಡುಗಡೆಗೊಳ್ಳಲಿದೆ ಎಂದು ನಾಯಕ ನಟ ಶ್ರೀನಗರ ಕಿಟ್ಟಿ ಹೇಳಿದರು.ಅವರು ಶುಕ್ರವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಈ ಚಿತ್ರ ಅತ್ಯುತ್ತಮ ಕಥೆ ಹೊಂದಿದ್ದು ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಳಿಸಲಾಗಿದೆ, ಈ ಚಿತ್ರದಲ್ಲಿ ರೈತನ ಸಮಸ್ಯೆಗಳು, ಗ್ರಾಮೀಣ ಭಾಗದಿಂದ ಬಂದು ನಗರದಲ್ಲಿ ಶ್ರೀಮಂತ ಹುಡುಗಿಗೆ ಆಕರ್ಷಿತನಾಗಿ ಕಥೆ ಸಾಗುತ್ತದೆ ಇದೊಂದು ಇಡೀ ಕುಟುಂಬ ಕುಳಿತು ನೋಡುವ ಉತ್ತಮ ಚಿತ್ರ ಎಂದು ಹೇಳಿದ ಅವರು ಉತ್ತರ ಕರ್ನಾಟಕದ ಜನತೆ ಯಾವತ್ತಿಗೂ ಚಿತ್ರರಂಗವನ್ನು ಕೈ ಹಿಡಿದಿದ್ದು ನನಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದೀರಿ ಮುಂದೆ ಸಹ ಇದೇ ರೀತಿ ಅಭಿಮಾನ ಮುಂದುವರೆಯಲಿ ಎಂದು ಹೇಳಿದ ಅವರು ಈ ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್, ರಂಗಾಯಣ ರಘು ಸೇರಿದಂತೆ ಇತರ ನಟರು ಅಭಿನಯಿಸಿದ್ದು ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು, ಕೊಪ್ಪಳ ನಗರದ ಎರಡು ಮೂರು ಕಾಲೇಜ್ ನಲ್ಲಿ  ಚಿತ್ರದ ಪ್ರಮೋಷನ್ ಮಾಡಲಾಗುವುದು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ  ನಿರ್ಮಾಪಕ ಚಲವಾದಿ ಕುಮಾರ್, ಹಿರಿಯ ಸಾಹಿತಿ ಡಾ. ಮಹಾಂತೇಶ್ ಮಲ್ಲನಗೌಡರ್, ಮುಖಂಡರಾದ ಕನಕ ಮೂರ್ತಿ ಚಲವಾದಿ, ಕಾಶಪ್ಪ ಚಲವಾದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.