ರೈನಾಪುರ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಆಯ್ಕೆ
ಯರಗಟ್ಟಿ 30: ಸಮೀಪದ ರೈನಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಐದು ವರ್ಷಗಳ ಕಾಲಾವಧಿಗೆ ಒಟ್ಟು 12 ನಿರ್ದೇಶಕ ಹುದ್ದೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಸಾಲಗಾರ ಕ್ಷೇತ್ರದಿಂದ ವಿಠ್ಠಲ ಬಂಟನೂರ, ಭೀಮಪ್ಪ ಕಳ್ಳಿಗುದ್ದಿ, ಬಸವರಾಜ ಪಟ್ಟಣಶೆಟ್ಟಿ, ಹಣಮಂತ ಶಿದ್ನಾಳ, ಹೇಮರೆಡ್ಡಿ ಚುಳಕಿ, ಹಿಂದುಳಿದ ಬ ವರ್ಗದಿಂದ ಮುದಕಪ್ಪ ಜುಗನವರ, ಪರಿಶಿಷ್ಟ ಜಾತಿಯಿಂದ ಭೀಮಪ್ಪ ಮುಡೆನ್ನವರ, ಸಾಲಗಾರರಲ್ಲದ ಅಭ್ಯರ್ಥಿಯಾಗಿದ್ದ ಆನಂದ ಪಟ್ಟಣಶೆಟ್ಟಿ ಅವರು ಭಾನುವಾರ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. ಅವಿರೋಧ ಆಯ್ಕೆ: ಮಹಿಳಾ ಕ್ಷೇತ್ರದಿಂದ ಸುಧಾ ಪಟ್ಟಣಶೆಟ್ಟಿ, ಶಾಂತವ್ವ ಶಿದ್ನಾಳ, ಹಿಂದುಳಿದ ಅ ವರ್ಗದಿಂದ ಪಡೆಪ್ಪ ನರಗಟ್ಟಿ, ಪರಿಶಿಷ್ಟ ಪಂಗಡದಿಂದ ಮಂಜುನಾಥ ದಳವಾಯಿ ಸೇರಿ ನಾಲ್ಕು ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟನಿಂರ್ಗ ಅಧಿಕಾರಿ ಎಂ.ಎಸ್. ಗೌಡಪ್ಪನವರ ಪ್ರಕಟಣೆ ತಿಳಿಸಿದ್ದಾರೆ.