ಕೆ.ಎಲ್‌.ಇ. ಭೌತಚಿಕಿತ್ಸಾ ಸಂಸ್ಥೆಯಿಂದ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ಯಶಸ್ವಿ

Student exchange program from KLE Physiotherapy Institute a success

ಕೆ.ಎಲ್‌.ಇ. ಭೌತಚಿಕಿತ್ಸಾ ಸಂಸ್ಥೆಯಿಂದ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ಯಶಸ್ವಿ 

ಬೆಳಗಾವಿ 11: ಕೆ.ಎಲ್‌.ಇ. ಭೌತಚಿಕಿತ್ಸಾ ಸಂಸ್ಥೆ ವತಿಯಿಂದವಿಸ್ಕಾನ್ಸಿನ್‌-ಲಾ ಕ್ರೋಸ್ ವಿಶ್ವವಿದ್ಯಾಲಯದಲ್ಲಿ ರವಿವಾರ (ಮೇ.11) ಕೆ.ಎಲ್‌.ಇ. ಭೌತಚಿಕಿತ್ಸಾ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ  ಯಶಸ್ವಿಯಾಗಿ ಪೂರ್ಣಗೊಂಡಿತು. 

ಕೆ.ಎಲ್‌.ಇ. ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಏಂಊಇಖ) ಯ ಘಟಕವಾದ ಕೆ.ಎಲ್‌.ಇ. ಭೌತಚಿಕಿತ್ಸಾ ಸಂಸ್ಥೆಯು ತನ್ನ ಸ್ನಾತಕೋತ್ತರ ವಿದ್ಯಾರ್ಥಿಗಳು ಅಮೆರಿಕಾದ ವಿಸ್ಕಾನ್ಸಿನ್‌-ಲಾ ಕ್ರೋಸ್ ವಿಶ್ವವಿದ್ಯಾಲಯದಲ್ಲಿ (ಗಘಐ) ಎರಡು ವಾರಗಳ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ. ಏಂಊಇಖ ಮತ್ತು ಗಘಐ ನಡುವಿನ ತಿಳುವಳಿಕೆ ಒಪ್ಪಂದದ (ಒಠ) ಅಡಿಯಲ್ಲಿ ಈ ಶೈಕ್ಷಣಿಕ ವಿನಿಮಯವನ್ನು ಆಯೋಜಿಸಲಾಗಿದ್ದು, ಇದು ಭೌತಚಿಕಿತ್ಸಾ ಕ್ಷೇತ್ರದಲ್ಲಿ ಜಾಗತಿಕ ಸಹಯೋಗ ಮತ್ತು ಜ್ಞಾನ ಹಂಚಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. 

ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಡಾ. ಸುಪ್ರಿಯೋ ಸರ್ಕಾರ್, ಡಾ. ಶ್ರೇಯಸಿ ಘಾಟಗೆ ಮತ್ತು ಡಾ. ಅನುರಾಧ ಪರಮಶೆಟ್ಟಿ ಅವರು ಗಘಐ ನಲ್ಲಿ ತಮ್ಮ ವಾಸ್ತವ್ಯದ ಅವಧಿಯಲ್ಲಿ ವಿವಿಧ ಶೈಕ್ಷಣಿಕ ಮತ್ತು ಕ್ಲಿನಿಕಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. 

ಈ ಅನುಭವವು ಅವರಿಗೆ ಅಂತರರಾಷ್ಟ್ರೀಯ ಭೌತಚಿಕಿತ್ಸಾ ಪದ್ಧತಿಗಳ ಕುರಿತು ಅಮೂಲ್ಯವಾದ ಮಾಹಿತಿಗಳನ್ನು ಮತ್ತು ಅವರ ವೃತ್ತಿಪರ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಕಾರಿಯಾಯಿತು. ತಮ್ಮ ಯಶಸ್ವಿ ಭಾಗವಹಿಸುವಿಕೆಗಾಗಿ ಮತ್ತು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕೆ.ಎಲ್‌.ಇ. ಭೌತಚಿಕಿತ್ಸಾ ಸಂಸ್ಥೆಯನ್ನು ಪ್ರತಿನಿಧಿಸಿದ್ದಕ್ಕಾಗಿ ವಿದ್ಯಾರ್ಥಿಗಳಿಗೆ ಬೋಧನಾ ಸಿಬ್ಬಂದಿಗಳಿಂದ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಲಾಗಿದೆ.