ಉಪ ವಲಯ ಅರಣ್ಯ ಅಧಿಕಾರಿಗಳ ಘಟಿಕೋತ್ಸವ

ಧಾರವಾಡ 30: ಇಲ್ಲಿನ ಗುಂಗರಗಟ್ಟಿಯಲ್ಲಿರುವ ಕನರ್ಾಟಕ ರಾಜ್ಯ ಅರಣ್ಯ ಅಕಾಡೆಮಿಯಲ್ಲಿ 8ನೇ ತಂಡದ ಉಪ ವಲಯ ಅರಣ್ಯ ಅಧಿಕಾರಿಗಳ ಘಟಿಕೋತ್ಸವ ಹಾಗೂ 5ನೇ ತಂಡದ ವಲಯ ಅರಣ್ಯ ಅಧಿಕಾರಿ ಬುನಾದಿ ತರಬೇತಿ ಉದ್ಘಾಟನಾ ಸಮಾರಂಭ ಜರುಗಿತು.

ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕನರ್ಾಟಕ ರಾಜ್ಯ ಅರಣ್ಯ ಅಕಾಡೆಮಿಯ ನಿದರ್ೇಶಕಿ ಎ. ರಾಧಾದೇವಿ ಮಾತನಾಡಿ. ಧಾರವಾಡದ ತರಬೇತಿ ಅಕಾಡೆಮಿಯು ದೇಶದ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿದೆ. 18 ತಿಂಗಳ ತರಬೇತಿ ಅವಧಿಯಲ್ಲಿ ಅರಣ್ಯ ಇಲಾಖೆಯ ಕಾರ್ಯಗಳು, ಆಡಳಿತ ವಿಧಾನ, ಅರಣ್ಯ ಸವರ್ೇ, ಗಿಡನೆಡುವ ಹಾಗೂ ಸಂರಕ್ಷಿಸುವ ಕಾರ್ಯಕ್ರಮ, ಮಹಾತ್ಮಾ ಗಾಂಧಿ ನರೇಗಾ ಅಡಿ ಅರಣ್ಯದಲ್ಲಿ ಸಸಿನೆಡುವ ಚಟುವಟಿಕೆ, ಕೂಲಿ ಬಿಲ್ ಪಾವತಿ ವಿಧಾನಗಳು ಸೇರಿದಂತೆ ವಿಸ್ತೃತ  ಬೋಧನೆಗಳನ್ನು, ಪ್ರಾಯೋಗಿಕ ಕಲಿಕೆಗಳನ್ನು ಒದಗಿಸಲಾಗಿದೆ. ಇಲ್ಲಿ ಕಲಿತದ್ದನ್ನು ವಲಯ ಹಾಗೂ ಉಪ ವಲಯ ಅರಣ್ಯ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಸಮಗ್ರವಾಗಿ ಅಳವಡಿಸಿಕೊಳ್ಳಬೇಕು. ಕೇವಲ ಕಚೇರಿಯಲ್ಲಿ ಕುಳಿತುಕೊಳ್ಳದೇ ನೇರವಾಗಿ ಪ್ರತಿನಿತ್ಯ ತಮ್ಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಿರಬೇಕು. ಸ್ಥಳೀಯರೊಂದಿಗೆ ಸಂಪರ್ಕ ಹೊಂದಿರಬೇಕು. ಇಲಾಖೆಗೆ ಉತ್ತಮ ಹೆಸರು ತರುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

2017ರಿಂದ 2019ರ ವರೆಗೆ 15 ತಿಂಗಳ ವೃತ್ತಿಬುನಾದಿ ತರಬೇತಿ ಪೂರೈಸಿದ 8ನೇ ತಂಡದ 127 ಜನ ಉಪ ವಲಯ ಅರಣ್ಯ ಅಧಿಕಾರಿಗಳಿಗೆ ಘಟಿಕೋತ್ಸವ ಪ್ರಮಾಣಪತ್ರ, ಅತ್ಯುತ್ತಮ ಅಭ್ಯಥರ್ಿಗಳಿಗೆ ಪದಕ ಹಾಗೂ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮಣಿಪುರದ 16, ಮಧ್ಯಪ್ರದೇಶದ 30 ಜನ ಸೇರಿ ಒಟ್ಟು 46 ವಲಯ ಅರಣ್ಯ ಅಧಿಕಾರಿಗಳ 5ನೇ ತಂಡದ ಬುನಾದಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ತರಬೇತಾಥರ್ಿಗಳಾದ ಸುರೇಶಗೌಡ, ಗುಲಸೀರ್ ನದಾಫ್, ವಿಶ್ವನಾಥ ಜುಕ್ತಿಮಠ, ರಮ್ಯ ಸಿ.ಎನ್, ಶರತ್ ಐಹೊಳಿ, ಮನೋಹರ ವಿ.ಎಸ್ ಪ್ರಕಟಿಸಿರುವ 'ಫ್ಲೈಯಿಂಗ್ ಫೆದರ್ಸ್' ಕೃತಿಯನ್ನು ಬಿಡುಗಡೆ ಮಾಡಲಾಯಿತು.

  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಪೇಗೌಡ, ಬೇಲೂರು ಗ್ರಾ.ಪಂ. ಅಧ್ಯಕ್ಷ ಯಲ್ಲಪ್ಪ ಫಕೀರಪ್ಪ ಕಡ್ಲಿ, ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಮ್.ಎ.ಹೆಚ್. ಶೇಖ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ದೀಪ ಜೆ. ಕಾಂಟ್ರ್ಯಾಕ್ಟರ್, ಮಹೇಶಕುಮಾರ, ಗಿರೀಶ, ಹನಮಂತರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  ಡಾ. ಶ್ರೀಕಾಂತ ಪಾಟೀಲ ವಾಷರ್ಿಕ ವರದಿ ವಾಚಿಸಿದರು. ಅನಿಲ ಮೇತ್ರಿ ಮತ್ತು ಸಂಗಡಿಗರು ಪ್ರಾಥರ್ಿಸಿದರು. ರವಿ ಕುಲಕಣರ್ಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ತರಬೇತಾಥರ್ಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು.