ಸರ್ಕಾರದಿಂದ ವಿವಿಧ ಯೋಜನೆಗಳನ್ನು ಸದುಪಯೋಗಮಾಡಿಕೊಳ್ಳಿ: ಜಗದೀಶ ಜಾಧವ
ಬೆಟಗೇರಿ, 03 :ಗ್ರಾಮೀಣ ವಲಯದ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಸರ್ಕಾರದಿಂದ ದೊರಕುವ ವಿವಿಧ ಯೋಜನೆಗಳಡಿಯಲ್ಲಿ ದೊರಕುವ ಜೀವವಿಮಾ ಯೋಜನೆ ಸೇರಿದಂತೆ ವಿವಿಧ ಸಹಾಯ, ಸೌಲಭ್ಯಗಳನ್ನು ರೈತರು ಹಾಗೂ ಗ್ರಾಹಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಜಗದೀಶ ಜಾಧವ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಕೆನರಾ ಬ್ಯಾಂಕ್ ಕಾರ್ಯಾಲಯದಲ್ಲಿ ಮೇ.2ರಂದು ನಡೆದ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿಯಲ್ಲಿ ತಪಸಿ ಗ್ರಾಮದ ರೈತ ಮಹಾದೇವ ತಿರಕನ್ನವರ ಅವರು ಇತ್ತೀಚೆಗೆ ತೋಟದಲ್ಲಿ ವಿದ್ಯುತ್ ಚಾಲಿತ ನೀರೆತ್ತುವ ಮೋಟಾರ್ ಚಾಲೂ ಮಾಡಲು ಹೋದಾಗ ವಿದ್ಯುತ್ ತಗುಲಿ ನಿಧನರಾದ ಪ್ರಯುಕ್ತ ಅವರ ಧರ್ಮಪತ್ನಿ ಮಹಾದೇವಿ ತಿರಕನ್ನವರ ಅವರಿಗೆ ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ವತಿಯಿಂದ 2ಲಕ್ಷ ರೂಪಾಯಿಗಳ ಮೊತ್ತದ ಚೆಕ್ ವಿತರಿಸಿ ಮಾತನಾಡಿದರು.
ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ವ್ಯಾಪ್ತಿಯ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರೈತರು, ಗ್ರಾಹಕರು, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ವಾರ್ಷಿಕ ವಿಮಾ ಕಂತು ಕೇವಲ 20ರೂ ಇರುತ್ತದೆ. ಎಲ್ಲರೂ ಈ ಜೀವವಿಮಾ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು. ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ಕೆನರಾ ಬ್ಯಾಂಕ್ ಶಾಖೆಗಳಿಂದ ವಿವಿಧ ಯೋಜನೆಯಡಿಯಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಕೆನರಾ ಬ್ಯಾಂಕಿನ ಪ್ರಗತಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಮ್ಯಾನೇಜರ್ ಜಗದೀಶ ಜಾಧವ ಎಂದರು.
ಸ್ಥಳೀಯ ಕೆನರಾ ಬ್ಯಾಂಕಿನ ಪೀಲ್ಡ್ ಆಫೀಸರ್ ಮಲ್ಲಿಕಾರ್ಜುನ ನಿಂಬರಗಿ, ನರೇಂದ್ರ ಗಾಡೇಕರ, ಸೋನಾಲಿ ನಾಯ್ಕ, ಪೃಥ್ವಿ ರಡ್ಡಿ, ಅಚಲ್ ಪಾಟೀಲ, ರಮೇಶ ಪಾಟೀಲ, ಮಹೇಶ ಪತ್ತಾರ, ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ, ಬೆಟಗೇರಿ ಕೆನರಾ ಬ್ಯಾಂಕ್ ಶಾಖೆ ವ್ಯಾಪ್ತಿಯ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರೈತರು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಗ್ರಾಹಕರು, ಇತರರು ಇದ್ದರು.