ಲೋಕದರ್ಶನ ವರದಿ
ಕೊಪ್ಪಳ 07: ನಮ್ಮ ಭಾರತ ದೇಶದಲ್ಲಿಯೇ ಹುಟ್ಟಿ ಬೆಳೆದ ಉದರ್ು ಭಾಷೆ ಅತ್ಯಂತ ಸೊಗಸಾದ ಭಾಷೆಯಾಗಿದ್ದು, ಪ್ರತಿಯೊಬ್ಬರೂ ಈ ಭಾಷೆಯಲ್ಲಿ ಮಾತನಾಡಲು ಬಲು ಇಷ್ಟ ಪಡುತ್ತಾರೆ ಎಂದು ಹಿರಿಯ ಸ್ವಾತಂತ್ರ್ಯ ಯೋಧ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಉದರ್ು ನಿವೃತ್ತ ಶಿಕ್ಷಕ ಶರಣಬಸವರಾಜ ಬಿಸರಳ್ಳಿ ಹೇಳಿದರು.
ಅವರು ರವಿವಾರ ರಾತ್ರಿ ವೇಳೆಯಲ್ಲಿ ಇಲ್ಲಿನ ಸಾಹಿತ್ಯ ಭವನದಲ್ಲಿ ಕನರ್ಾಟಕ ಉದರ್ು ಅಕಾಡೆಮಿ ಬೆಂಗಳೂರು ಹಾಗೂ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಕುಲ್ ಹಿಂದ್ ಮಹೆಫಿಲೆ ಮುಶಾಯರಾ ಕಾರ್ಯಕ್ರಮ ಉದ್ಘಾಟಿಸಿ ನಂತರ ಸಂಘಟಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು ಕವಿಗೋಷ್ಟಿ ಮುಶಾಯರಾ ಕಾರ್ಯಕ್ರಮ ಉದರ್ು ಭಾಷೆಯಲ್ಲಿ ಕೇಳಲು ಬಲು ಇಷ್ಟವಾಗುತ್ತದೆ. "ವಾಹ್ ವಾಹ್ ಇಷರ್ಾದ್, ಮುಕರ್ರರ್, ದುಬಾರಾ ಇಷರ್ಾದ್ ಎಂಬ ಪದಗಳು ಕವನ ವಾಚನ ಮಾಡುವ ಕವಿಗಳಿಗೆ ರೋಮಾಂಚನ ಮತ್ತು ಪ್ರೋತ್ಸಾಹ, ಧೈರ್ಯ ತುಂಬುತ್ತದೆ. ವಾಚನ ಮಾಡುವ ಕವಿಗಳಿಗೆ ಶಕ್ತಿ ಮತ್ತು ಪ್ರೇರಣೆ ನೀಡುತ್ತದೆ ಎಂದರು. ಹೈದರಾಬಾದ ಕನರ್ಾಟಕ ಪ್ರದೇಶದಲ್ಲಿ ಈ ಹಿಂದನಿಂದಲು ಉದರ್ುಗೆ ಬಹಳ ಮಹತ್ವ ಇತ್ತು. ಅಂದಿನ ಕಾಲದಲ್ಲಿ ಈ ಭಾಗದ ಆಡಳಿತ ಭಾಷೆಯಾಗಿತ್ತು ನಾನು ಕೂಡ ಆಗಿನ ಸಂದರ್ಭದಲ್ಲಿ ಉದರ್ು ಭಾಷೆಯಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದ ಅವರು ಉದರ್ು ಮುಶಾಯರಾ ಕಾರ್ಯಕ್ರಮ ಆಯೋಜನೆಯಿಂದ ನಮ್ಮ ಕಲೆ ಪರಂಪರೆ ಸಂಸ್ಕೃತಿ ಇಂದಿನ ಯುವ ಪೀಳಿಗೆಗೆ ಪರಿಚಯಿಸುವಂತಹ ಕೆಲಸ ಮಾಡಿದಂತಾಗಿದೆ ಎಂದು ಉದರ್ು ಅಕಾಡೆಮಿ ಕಾರ್ಯಕ್ರಮದ ಬಗ್ಗೆ ಶ್ಲಾಘೀಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕನರ್ಾಟಕ ಉದರ್ು ಅಕಾಡೆಮಿ ಅಧ್ಯಕ್ಷರಾದ ಮುಬೀನ್ ಮುನವ್ವರ್ ವಹಿಸಿ ಅಕಾಡೆಮಿ ವತಿಯಿಂದ ನಡೆಯುವ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು ಮತ್ತು ಉದರ್ು ಭಾಷಿಗರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ನಗರಸಭೆ ಹಿರಿಯ ಸದಸ್ಯ ಅಮಜದ ಪಟೇಲ್, ಜೆಡಿಎಸ್ ಮುಖಂಡ ಕೆ.ಎಂ. ಸೈಯದ್, ಅಂಜುಮನ್ ಅಧ್ಯಕ್ಷ ಎಂ. ಪಾಷಾ ಖಾಟಾನ್, ಹುಬ್ಬಳ್ಳಿಯ ಸಮಾಜ ಸೇವಕ ರಶೀದ್ ಶೇಖ್, ಅಕಾಡೆಮಿ ಸದಸ್ಯರಾದ ಶಫೀಕ ಆಬೀದಿ, ಶಾಹಿದ್ ಖಾಜಿ, ಮಿಲ್ಲತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಇಮಾಮ್ ಹುಸೇನ ಸಿಂದೋಗಿ, ಕಾಂಗ್ರೆಸ್ ಮುಖಂಡ ಗವಿಸಿದ್ದಪ್ಪ ಮುದಗಲ್ ಸೇರಿದಂತೆ ಯುವ ನಾಯಕ ಎಂ.ಬಿ ಯುಸೂಫ್ ಖಾನ್, ಬದಿಯೂದಿನ್ ನವಿದ್, ಮಹ್ಮದ್ ಅಲಿ, ಹೀಮಾಯತಿ ಅಕಾಡೆಮಿ ಸಿಬ್ಬಂದಿ ಇಫರ್ಾನುಲ್ಲಾ ಮತಿತ್ತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಉದರ್ು ಭಾಷೆಯ ಅಭಿವೃದ್ಧಿಗಾಗಿ ತಮ್ಮನು ತಾವು ತೊಡಗಿಸಿಕೊಂಡು ಸೇವೆ ಸಲ್ಲಿಸಿದ ಎಂ. ಎ ಮಾಜಿದ್ ಸಿದ್ದಿಕಿರವರಿಗೆ ಸನ್ಮಾನಿಸಲಾಯಿತು. ನಂತರ ಕುಲ್ ಹಿಂದ್ ಉದರ್ು ಮುಶಾಯರಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಶಫೀಕ ಆಬೀದಿರವರ ನಿರೂಪನೆಯಲ್ಲಿ ಸುಮಾರು 15 ರಾಷ್ಟ್ರ ಹಾಗೂ ರಾಜ್ಯ ಉದರ್ು ಕವಿಗಳು ತಮ್ಮ ಕವನ ವಾಚನ ಮಾಡಿ ಸಾರ್ವಜನಿಕರ ಮನ ರಂಜಿಸುದರು.