ಶೇಡಬಾಳ ಪಟ್ಟಣದ ಸುಪುತ್ರರು ಜೈನ ಸಮಾಜದ ರಾಷ್ಟ್ರ ಸಂತರು ವಿದ್ಯಾನಂದ ಮುನಿ ಮಹರಾಜರ ಜನ್ಮ ಶತಾಬ್ದಿ ಮಹೋತ್ಸವ
ಕಾಗವಾಡ 07 : ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಸುಪುತ್ರರು ಜೈನ ಸಮಾಜದ ರಾಷ್ಟ್ರ ಸಂತರು ವಿದ್ಯಾನಂದ ಮುನಿ ಮಹರಾಜರ ಜನ್ಮ ಶತಾಬ್ದಿ ಮಹೋತ್ಸವ ಶನಿವಾರ ದಿ.11 ಹಾಗೂ 12 ರಂದು ವಿವಿಧ ಕಾರ್ಯಕ್ರಮಗಳಿಂದ ಆಯೋಜಿಸಲಾಗಿದೆ ಎಂದು ಶತಾಬ್ದಿ ಮಹೋತ್ಸವ ಕಾರ್ಯಕ್ರಮ ಸಂಯೋಜಕರಾದ ಪ್ರಕಾಶ ನಾಂದ್ರೆ ತಿಳಿಸಿದರು.ಶುಕ್ರವಾರರಂದು ಶೇಡಬಾಳದ ಪರಮ ಪೂಜ್ಯ ಆಚಾರ್ಯ ಶ್ರೀ ವಿದ್ಯಾನಂದ ಮುನಿರಾಜ ಕನ್ನಡ ಪ್ರಾಥಮಿಕ ಶಾಲೆಯ ಸಭಾ ಭವಣದಲ್ಲಿ ಪ್ರಕಾಶ ನಾಂದ್ರೆ ಇವರು ಮಾಹಿತಿ ನೀಡಿದರು.ಶನಿವಾರರಂದು ವಿದ್ಯಾನಂದ ಮುನಿ ಮಹರಾಜರ ಜನ್ಮ ಶತಾಬ್ದಿ ಮಹೋತ್ಸವದೊಂದಿಗೆ ಪ್ರಥಮ ಆಚಾರ್ಯ ಪರಮ ಪೂಜ್ಯ ಶಾಂತಿ ಸಾಗರ ಮಹರಾಜರ ಆಚಾರ್ಯ ಪದಾರೋಹಣ ಶತಾಬ್ದಿ ವರ್ಷ ಹಾಗೂ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಗಳ ವಿಜಯಪೂರ ಇವರ ಗುರು ಸ್ಮರಣೋತ್ಸವ ವರ್ಷದ ನಿಮಿತ್ಯ ವಿವಿಧ ಕಾರ್ಯಕ್ರಮ ಆಯೋಜಿಸಿದ್ದೇವೆ.ಶನಿವಾರದಂದು ಬೆಳಿಗ್ಗೆ ಪೂರ್ಣ ಕುಂಭ ಮೇಳದೊಂದಿಗೆ ಪ್ರಮುಖ ಮಾರ್ಗದಿಂದ ಪರಮ ಪೂಜ್ಯರ ಪ್ರತಿಮೆಗಳ ಭವ್ಯ ಮೆರವಣಿಗೆ ನೆರವೆರುವುದು. ಮಧ್ಯಾಹ್ನ ಭಗವಾನ ಮಹಾವೀರರ ಮೂರ್ತಿಗೆ ಪೂಜೆ ಹಾಗೂ ಸು.ಮಂಗಲೆಯರ ತೆಗೆದುಕೊಂಡ ಜಲ ಕಳಸಗಳ ಭಗವಾನ ಮಹಾವೀರರಿಗೆ ಜಲಾಭಿಷೇಕ ಜರುಗಲಿದೆ.ರವಿವಾರದಂದು ಭಟ್ಟಾರಕ ಮುನಿಗಳಾದ ಹೊಂಬಜ ಮಠ ದೇವೆಂದ್ರ ಕೀರ್ತಿ ಭಟ್ಟಾರಕ, ಸೊಂದಾ ಮಠದ ಭಟ್ಟಾಕಲಂಕ ಭಟ್ಟಾರಕರು, ಕೊಲ್ಲಾಪೂರ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ ಪಾವನ ಸಾನಿಧ್ಯ ವಹಿಸುವರು, ಸ್ವಾಮೀಜಿಗಳಾದ ಯಡೂರ ಮಠ ಶ್ರೀಶೈಲ ಜಗದ್ಗರು ಡಾ.ಚನ್ನಸಿದ್ದರಾಮ ಸ್ವಾಮೀಜಿ ಹಾಗೂ ಹಂಚಿನಾಳ ಮಠದ ಮಹೇಶಾನಂದ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಾಶ ನಾಂದ್ರೆ ಮಾಹಿತಿ ನೀಡಿ ಈ ಧರ್ಮ ಕಾರ್ಯಕ್ರಮಕ್ಕೆ ಶ್ರಾವಕ ಶ್ರಾವಕಿಯರು ಹೆಚ್ಚಿನ ಸಂಖ್ಯೆಯಿಂದ ಪಾಲ್ಗೊಳಬೇಕೆಂದು ಆಹ್ವಾನಿಸಿದ್ದಾರೆ.ಫೋಟೋ ಶೀರ್ಷಿಕೆ 7 ಕಾಗವಾಡ 2 ಶಿಡ್ಬಾಳದ ಸುಪುತ್ರರು ರಾಷ್ಟ್ರಸಂಸ್ಥೆ ವಿದ್ಯಾನಂದ ಮುನಿ ಮಹಾರಾಜರ ಭಾವಚಿತ್ರ.