ಇತಿಹಾಸದ ಅಧ್ಯಯನ ನಮ್ಮ ಸಂಸ್ಕೃತಿ ಸಮಾಜದ ಬಗ್ಗೆ ನಮಗೆ ಅರಿವು ಮೂಡಿಸುತ್ತದೆ ದೇಶಾಭಿಮಾನ ಹೆಚ್ಚಿಸುವ ಕಾರ್ಯಕ್ರಮ

The study of history makes us aware of our culture and society as a program to increase patriotism

ಇತಿಹಾಸದ ಅಧ್ಯಯನ ನಮ್ಮ ಸಂಸ್ಕೃತಿ ಸಮಾಜದ ಬಗ್ಗೆ ನಮಗೆ ಅರಿವು ಮೂಡಿಸುತ್ತದೆ ದೇಶಾಭಿಮಾನ ಹೆಚ್ಚಿಸುವ ಕಾರ್ಯಕ್ರಮ 

ಬೆಳಗಾವಿ  03 : 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಕರ್ನಾಟಕ ಏಕೀಕರಣಕ್ಕೆ ಪ್ರೇರಣೆಯಾದ ಅಧಿವೇಶನವಾಗಿದೆ. ಈ ಅಧಿವೇಶನದಲ್ಲಿ ಸ್ವಾಗತ ಗೀತೆಯಾಗಿ ಹಾಡಲಾಗಿದ್ದ ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆಯನ್ನು ಮುಂದೆ ಏಕೀಕರಣ ಗೀತೆಯಾಗಿ ಗುರುತಿಸಲಾಯಿತು. ಎಂದು ಭಾರತದ ರಾಷ್ಟೀಯ ಕಾಂಗ್ರೆಸ್ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸಮಾರಂಭದ ನಿಮಿತ್ಯ ಜೆ.ಎಸ್‌.ಎಸ್  ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ವರ್ಷದುದ್ದಕ್ಕೂ ನಡೆಸಲಾಗುವ ಉಪನ್ಯಾಸ ಮಾಲಿಕೆಯನ್ನು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಉದ್ಘಾಟಿಸಿ ಮಾತನಾಡಿದರು. ಇತಿಹಾಸದ ಅಧ್ಯಯನ ನಮ್ಮ ಸಂಸ್ಕೃತಿ ಸಮಾಜದ ಬಗ್ಗೆ ನಮಗೆ ಅರಿವು ಮೂಡಿಸುತ್ತದೆ ದೇಶಾಭಿಮಾನ ಹೆಚ್ಚಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿ ಎಂದು ಹೇಳಿದರು 

ಅದೇ ರೀತಿ ಆಗ  ಈ ಅಧಿವೇಶನದ ಮುಖಾಂತರ ಕನ್ನಡಿಗರು ಅಧ್ಯಕ್ಷರಾದ ಮಹಾತ್ಮ ಗಾಂಧೀಜಿಯವರ ಮಾತುಗಳಿಂದ ಪ್ರೇರಿತರಾದರು. ಜೊತೆಗೆ ಕನ್ನಡಿಗರಲ್ಲಿ ರಾಷ್ಟ್ರೀಯ ಭಾವನೆ ಹಾಗೂ ಕರ್ನಾಟಕ ಏಕೀಕರಣಕ್ಕೆ ಈ ಅಧಿವೇಶನವು ಬುನಾದಿಯಾಯಿತು. ಸರ್ಕಾರದ ಆದೇಶದ ಪ್ರಕಾರ ವರ್ಷದುದ್ದಕ್ಕೂ ಈ ಅಧಿವೇಶನಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು. 

ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿಯ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕೆ.ಎಸ್‌. ಕೌಜಲಗಿ ಅವರು ಈ ಅಧಿವೇಶನವು ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದದ್ದೇ ಒಂದು ಅವಿಸ್ಮರಣೀಯ ಸಂಗತಿಯಾಗಿದೆ. ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನವಾಗಿದೆ. ಅಂದು ಆ ಅಧಿವೇಶನ ನಡೆದ ಸ್ಥಳಕ್ಕೆ ವಿಜಯನಗರ ಎಂದು ಮತ್ತು ಅಲ್ಲಿ ನಿರ್ಮಿಸಲಾದ ಬಾವಿಗೆ ಪಂಪಾ ಸರೋವರ ಎಂದು ಕರೆಯಲಾಗಿತ್ತು. ಅಧಿವೇಶನದ ಪ್ರವೇಶ ದ್ವಾರವನ್ನು ಹಂಪಿಯ ವಿರೂಪಾಕ್ಷ ದೇವಸ್ಥಾನದ ಗೋಪುರದ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಸ್ವಾಗತ ಸಮಿತಿಯ ಅಧ್ಯಕ್ಷರು ಗಂಗಾಧರರಾವ್ ದೇಶಪಾಂಡೆ ಅವರಾಗಿದ್ದರು. ಹಾಗೆಯೇ ಎನ್‌.ಎಸ್‌. ಹರ್ಡಿಕರ್ ಅವರ ಹಿಂದೂಸ್ಥಾನ ಸೇವಾದಳದ ಸ್ವಯಂ ಸೇವಕರು ಅತಿಥಿ ಸತ್ಕಾರವನ್ನು ಯೋಗ್ಯ ರೀತಿಯಲ್ಲಿ ನಿಭಾಯಿಸಿದರು ಎಂದು ಗಾಂಧೀಜಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದಿದ್ದರು.  ಅಂದಿನ ಆ ಅಧಿವೇಶನದಲ್ಲಿ  ಹನ್ನೆರೆಡು ವರ್ಷದ ಬಾಲಕಿಯಾದ ಗಂಗೂಬಾಯಿ ಹಾನಗಲ್ ಅವರು ಹಾಡಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯನ್ನು ಅಂದು ಗಾಂಧೀಜಿ ಅವರು ಕೊಂಡಾಂಡಿದ್ದರು. ಈ ಅಧಿವೇಶನದಲ್ಲಿ ರಾಷ್ಟ್ರೀಯ ನಾಯಕರಾದ ಬಾಬು ರಾಜೇಂದ್ರ ಪ್ರಸಾದ, ವಲ್ಲಭಬಾಯಿಪಟೇಲ, ಚಿತ್ತರಂಜನ ದಾಸ್, ಜವಾಹರ ಲಾಲ್ ನೆಹರು, ಮಹ್ಮದ್ ಅಲಿ ಮುಂತಾದ ನಾಯಕರು ಭಾಗವಹಿಸಿದ್ದರು. ಈ ಅಧಿವೇಶನದ ಬಗ್ಗೆ ಹಾಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿದ್ಯಾರ್ಥಿಗಳು ವಿಶೇಷವಾಗಿ ತಿಳಿದುಕೊಂಡು ಆ ಬಗ್ಗೆ ಅಧ್ಯಯನ ಮಾಡಬೇಕೆಂದು ಕರೆ ನೀಡಿದರು.  

ಎಂ.ಎ. ಇಂಗ್ಲೀಷ ವಿದ್ಯಾರ್ಥಿಗಳು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯನ್ನು ಹಾಡಿದರು. ಪ್ರೊ. ಮಹಾಂತ ಎಂ.ದೇಸಾಯಿ ನಿರೂಪಿಸಿದರು, ಪ್ರೊ. ಚೇತನಾ ಕೋರಿಶೆಟ್ಟರ ಸ್ವಾಗತಿಸಿದರು, ಪ್ರೊ. ವಾಣಿಶ್ರೀ ಕುಲಕರ್ಣಿ ವಂದಿಸಿದರು. ಡಾ. ಸೂರಜ್ ಜೈನ್, ಶ್ರೀ ಮಹಾವೀರ ಉಪಾಧ್ಯೆ ಡಾ. ಆರ್‌.ವಿ.ಚಿಟಗುಪ್ಪಿ, ಪ್ರೊ. ರಜನಿ ತಾಳಿಕೋಟಿ, ಪ್ರೊ. ಸ್ಮಿತಾ ಪಾಟೀಲ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು