ಲೋಕದರ್ಶನ ವರದಿ
ಕೊಪ್ಪಳ 23: ತಾಲೂಕಿನ ಚುಕ್ಕನಕಲ್ ನಲ್ಲಿ ನಿರ್ಮಲಾ (21) ಎಂಬ ಮಹಿಳೆಗೆ ಗಂಡನ ಮನೆಯವರು ಸೀಮೆ ಎಣ್ಣೆ ಹಾಕಿ ಸುಟ್ಟುಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ನಿರ್ಮಲಾ ಎಂಬ ಮಹಿಳೆಯ ತಂದೆತಾಯಿ ಅರೋಪಿಸಿ ಗ್ರಾಮಂತರ ಪೋಲಿಸ್ ಠಾಣೆಯ ಮುಂದೆ ಪ್ರತಿಭಟಣೆಗೆ ಮುಂದಾಗಿದ್ದಾರೆ. ಅರೆ ಬರೆ ಸುಟ್ಟ ಮಹಿಳೆ ಜಿಲ್ಲಾ ಸಕರ್ಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದೂರು ಕೊಟ್ಟು ನಾಲ್ಕು ದಿನವಾದರು ಕೇವಲ ಇಬ್ಬರಿಗೆ ಮಾತ್ರ ಬಂಧಿಸಿದ್ದಾರೆ ಎಂದು ಪಾಲಕರು ಅರೋಪಿಸಿದ್ದಾರೆ. ಅಗಳಕೆರ ಗ್ರಾಮದ ರೇಣುಕಾ, ಹಾಗೂ ಲೋಕಪ್ಪ ಎಂಬುವರ ಮಗಳಾದ ನಿರ್ಮಲಾ ಅವರಿಗೆ ಚುಕ್ಕನಕಲ್ನ ರಾಮವ್ವ ಹಾಗೂ ಮಂಜಪ್ಪ ಎಂಬುವ ಮಗನಾದ ದೇವಪ್ಪನಿಗೆ ಕಳೆದ ಏಪ್ರೀಲ್ನಲ್ಲಿ ಮದುವೆ ಮಾಡಿ ಕೊಟ್ಟಿದ್ದಾರೆ. ನಿರ್ಮಲಾ ಪದವಿಧರೆಯಾಗಿದ್ದು ದೇವಪ್ಪ ಸಾಮಾಜ ಕಲ್ಯಾಣ ಇಲಾಖೆಯಲ್ಲಿ ಸಕರ್ಾರಿ ನೌಕರನಾಗಿದ್ದು, ಮದುವೆ ಮಾಡಿ ಕೊಟ್ಟಾಗಿನಿಂದ ಗಂಡ, ಅತ್ತೆ, ಮಾವ, ಇಬ್ಬರು ಮೈದುನರಾದ ಮಾರುತಿ, ರಾಮಣ್ಣ, ಹಾಗೂ ನಾದಿನಿ ಲಕ್ಷ್ಮಿ,ಎಂಬುವರು ಬಹಳ ಕಿರುಕುಳ ಕೊಡುತ್ತಿದ್ದರು ಎಂದು ಪಾಲಕರು ಅರೋಪಿಸಿದ್ದಾರೆ. ನಾಲ್ಕು ದಿನದ ಹಿಂದೆ ನಮ್ಮ ಮಗಳಿಗೆ ಮನೆಯಲ್ಲಿ ಕೂಡಿಹಾಕಿ ಸೀಮೆ ಎಣ್ಣೆಹಾಕಿ ಬೆಂಕಿ ಇಟ್ಟಿದ್ದಾರೆ ಎಂದು ಅವರು ಆರೋಪಿಸಿದರು, ನಿರ್ಮಲಾ ಈಗ ಸಕರ್ಾರಿ ಅಸ್ಪತ್ರೆಯಲ್ಲಿ ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿದ್ದಾಳೆ. ನಾವು ಏಳು ಜನರ ಮೇಲೆ ಠಾಣೆಯಲ್ಲಿ ದೂರು ಕೊಟ್ಟರೆ ಪೋಲಿಸರು ಕೇವಲ ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ. ಎಂದು ನಿರ್ಮಲಾ ತಂದೆ ತಾಯಿ ಎಲ್ಲಾರನ್ನು ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ನಾಳೆ ನಾವು ಕೆಲವು ಸಂಘಟನೆಗಳ ಜೊತೆಗೂಡಿ ಉಗ್ರ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಪಾಲಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಪೋಲಿಸರು ನಿರ್ಲಕ್ಷ್ಯವಹಿಸಲು ಕೆಲ ಕಾಣದ ಕೈಗಳು ಆಟ ಆಡಿಸುತ್ತಿವೆ ಎಂದು ಶಂಕೆ ವ್ಯಕ್ತಪಡಿದ್ದಾರೆ, ಕೂಡಲೆ ಪೋಲಿಸ್ ಅಧಿಕಾರಿಗಳು ತಪ್ಪಿತಸ್ಥರನ್ನು ಬಂಧಿಸಿ ನ್ಯಾಯ ಒದಗಿಸಿಕೊಡಲು ಮುಂದಗಾಬೇಕೆಂದು ಕೆಲ ಸಂಘಟನೆಗಳು ಒತ್ತಾಯಿಸಿವೆ.