ಬಸವೇಶ್ವರ ಪ್ರೌಢಶಾಲೆಯಲ್ಲಿ ತಂಬಾಕು ಮುಕ್ತ ಯುವ ಅಭಿಯಾನ ಕಾರ್ಯಕ್ರಮ
ಯರಗಟ್ಟಿ 25: ಪೋಲಿಸ್ ಇಲಾಖೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಯರಗಟ್ಟಿ ಇವರ ಸಹಯೋಗ ದೊಂದಿಗೆ ಪಟ್ಟಣದ ಬಸವೇಶ್ವರ ಪ್ರೌಢಶಾಲೆಯಲ್ಲಿ ತಂಬಾಕು ಮುಕ್ತ ಯುವ ಅಭಿಯಾನ ಕಾರ್ಯಕ್ರಮವನ್ನು ಏರಿ್ಡಸಲಾಗಿತ್ತು.ಇವತ್ತಿನ ಯುವ ಜನಾಂಗ ಚಟಗಳಿಗೆ ಬಲಿಯಾಗುತ್ತಿದ್ದು ಅದರಲ್ಲಿ ವಿಶೇಷವಾಗಿ ತಂಬಾಕು ಸೇವನೆ ಮಧ್ಯ ಸೇವನೆ ಹೆಚ್ಚಾಗುತ್ತಿದೆ ಆದ್ದರಿಂದ ಗುರುಹಿರಿಯರ, ಪಾಲಕರ ಮಾರ್ಗದರ್ಶನದ ಅವಶ್ಯಕತೆ ಇದೆ ಹಾಗೂ ದೈನಂದಿನ ಜೀವನದ ಜೊತೆಗೆ ಆರೋಗ್ಯ ದ ಕಡೆಗೆ ಕಾಳಜಿ ವಹಿಸಬೆಕಾಗಿದೆ ಎಂದು ಪಿಎ??? ಎಲ್ ಡಿ ಮಾಳಿ ಹೇಳಿದರು .ಹದಿಹರೆಯವು ಭವಿಷ್ಯ ಜೀವನದ ಪೂರ್ವ ಹಂತವಾಗಿದೆ. ಈ ಹಂತದಲ್ಲಿ ಮಕ್ಕಳಿಗೆ ದೈಹಿಕ ಮಾನಸಿಕ ಸಾಮಾಜಿಕ ಬದಲಾವಣೆಗಳಾಗುತ್ತಿದ್ದು ಮಾರ್ಗದರ್ಶನದ ಅವಶ್ಯಕತೆ ಇದೆ.ಕರ್ನಾಟಕದಲ್ಲಿ 28 ರಷ್ಟು ಹದಿನೈದು ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಯಾವುದಾದರೂ ಒಂದು ರೀತಿಯ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುತ್ತಿದ್ದಾರೆ. ತಂಬಾಕಿನಿಂದ ಕ್ಯಾನ್ಸರ್ ಹೃದಯ ಶ್ವಾಸ ಸಂಬಂಧಿ ಇತ್ಯಾದಿ ಮಾರಣಾಂಕಿತ ಖಾಯಿಲೆಗಳು ಬರುತ್ತವೆ. ತಂಬಾಕಿನಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ವಿಷಕಾರಿಕ ರಾಸಾಯನಿಕಗಳಿವೆ .ಆದ್ದರಿಂದ ಹದಿಹರೆದವರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲನ ಆಹಾರದ ಬಳಕೆ ಹಾಗೂ ಯೋಗ ವ್ಯಾಯಾಮ ವೈಯಕ್ತಿಕ ಮತ್ತು ಪರಿಸರ ನೈರ್ಮಲ್ಯವನ್ನ ಕಾಪಾಡಿಕೊಂಡಾಗ ಉತ್ತಮ ಜೀವನ ನಡೆಸಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್. ಆರ್. ಗಂಜಿ ಹೇಳಿದರು.ಈ ವೇಳೆ ಕಾರ್ಯಕ್ರಮ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಪಿ. ಹೆಚ್ ಪಾಟೀಲ ವಹಿಸಿಕೊಂಡಿದ್ದರು. ಪ್ರಧಾನ ಗುರುಗಳಾದ ಬಿ. ಎಸ್. ಆಲದಕಟ್ಟಿ, ಎನ್. ಬಿ. ಸಣ್ಣನಾಯ್ಕರ, ಎಸ್. ಜೆ. ಸತ್ತಿಗೇರಿ, ಎಂ. ಎಸ್. ಗುಗ್ಗರನಟ್ಟಿ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.