ಲೋಕದರ್ಶನ ವರದಿ
ವಿಜಯಪುರ 08: ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಸಂತ್ರಸ್ಥರಿಗೆ ಉಚಿತ 108 ಅಂಬುಲೆನ್ಸ್ ತುತರ್ು ಸೇವೆ ಉತ್ತರ ಕರ್ನಾಟಕದಲ್ಲಿ ಪ್ರಮುಖವಾಗಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಆಗುತ್ತಿರುವ ಭಾರಿ ಮಳೆಯಿಂದಾಗಿ ಮತ್ತು ಕೃಷ್ಣಾ ನದಿಯ ಜಲಾನಯನ ಪ್ರದೇಶದ ಜಲಾಶಯಗಳಿಂದ ಹೊರಹರಿವು ಹೆಚ್ಚಾಗಿ ಆ ಜಿಲ್ಲೆಗಳ ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ. ಹಲವಾರು ಹಳ್ಳಿಗಳು ಮತ್ತು ಕೃಷಿ ಭೂಮಿ ಜಲಾವೃತಗೊಂಡಿವೆ. ಇದರಿಂದ ಬಸ್ ಮತ್ತುಇತರೆ ಸಾರಿಗೆ ಸೇವೆಗಳು ಅಸ್ತವ್ಯಸ್ತಗೊಂಡಿವೆ. ವಿಶೇಷವಾಗಿ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಕಾಳಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳು ಹೆಚ್ಚಿನ ಪ್ರವಾಹಕ್ಕೆ ತುತ್ತಾದ ಪ್ರದೇಶಗಳಾಗಿವೆ.
ಈ ಪರಿಸ್ಥಿತಿಯನ್ನು ಗಮನಿಸಿ 108 ಅಂಬುಲೆನ್ಸ್ ತುತರ್ು ಸೇವೆಯು ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಕಾಳಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ನೆರೆ ಸಂತ್ರಸ್ತರ ತುರ್ತ ಪರಸ್ಥಿತಿಯ ಸಹಾಯಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಂಬುಲೆನ್ಸ್ಗಳನ್ನು ನಿಯೋಜಿಸಲಾಗಿದೆ. ಆಸ್ಪತ್ರೆ ಪೂರ್ವದ ಚಿಕಿತ್ಸೆಗೆ ಬೇಕಾಗುವ ಎಲ್ಲಾ ಔಷಧೋಪಚಾರದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಯಾವುದೇ ಸಂದರ್ಭದಲ್ಲಿ ಎದುರಾಗುವ ಅಪಾಯವನ್ನು ಗುರುತಿಸಿ ಅವಶ್ಯಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅಲ್ಲದೇ ನಿರಾಶ್ರಿತರನ್ನು ಹತ್ತಿರದ ಆಸ್ಪತ್ರೆಗೆ ಮತ್ತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ನಮ್ಮ 108 ಅಂಬುಲೆನ್ಸ್ ತುತರ್ು ಸೇವೆಯ ಸಿಬ್ಬಂದಿಗಳು ಸನ್ನದ್ಧರಾಗಿದ್ದಾರೆ. ಯಾವುದೇ ಸಂದರ್ಭದಲ್ಲಿಉಚಿತ ತುತರ್ು ಸಹಾಯಕ್ಕಾಗಿ ನಮ್ಮ ಉಚಿತ ಸಹಾಯವಾಣಿ ಸಂಖ್ಯೆ 108 ಕ್ಕೆ ಕರೆ ಮಾಡಬಹುದು. ಹೆಚ್ಚಿನ ಮಾಹಿತಿಗೆ ಸಂಪಕರ್ೀಸಿ: ಅನೀಲಕುಮಾರ ಪಾಟೀಲ 108 ಅಂಬುಲೆನ್ಸ್ ವಿಜಯಪುರ ಜಿಲ್ಲೆಯ ತುತರ್ುಪರಿಸ್ಥಿತಿ ನಿರ್ವಹಣಾ ಅಧಿಕಾರಿ ದೂರವಾಣಿ ಸಂಖ್ಯೆ: 973189610