ವಿಜಯಪುರ: ನ್ಯಾಯವಾದಿಗಳೊಂದಿಗೆ ಅನುಚಿತ ವರ್ತನೆ: ಕ್ರಮಕ್ಕೆ ಖಂಡಿಸಿ ಪ್ರತಿಭಟನೆ

ಲೋಕದರ್ಶನ ವರದಿ

ವಿಜಯಪುರ 08: ನ್ಯಾಯವಾದಿಗಳೊಂದಿಗೆ ಅನುಚಿತವಾಗಿ ವರ್ತನೆ ಮಾಡಿರುವ ನರಗುಂದ ಪೊಲೀಸ್ ಠಾಣೆಯ ಸಿಪಿಐ ಅವರ ಕ್ರಮವನ್ನು ಖಂಡಿಸಿ ವಿಜಯಪುರದಲ್ಲಿ ನ್ಯಾಯವಾದಿಗಳು ಶುಕ್ರವಾರ ನ್ಯಾಯಾಲಯದ ಕಾರ್ಯ-ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.    

ನ್ಯಾಯವಾದಿಗಳು ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಜಿಲ್ಲಾಧ್ಯಕ್ಷ ವಿ.ಎಚ್. ಖಾಸನೀಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನ್ಯಾಯವಾದಿಗಳ ಮೇಲೆ ಹಲ್ಲೆ, ಅನುಚಿತ ವರ್ತನೆಗಳು ನಡೆಯುತ್ತಿವೆ. ನ್ಯಾಯದಾನದ ಪವಿತ್ರ ಕರ್ತವ್ಯದಲ್ಲಿ ತೊಡಗಿರುವ ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿ. ಇನ್ನಾದರೂ ಸಹ ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಯುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು, ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕಮರ್ಿಗಳನ್ನು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜೂ.1 ರಂದು ಹಿರಿಯ ನ್ಯಾಯವಾದಿಗಳಾದ ಸಿ.ಎಸ್. ಪಾಟೀಲ, ವ್ಹಿ.ಎಸ್. ದೇಶಪಾಂಡೆ ಅವರ ಮೇಲೆ ನರಗುಂದ ಪೊಲೀಸ್ ಠಾಣೆಯ ಸಿಪಿಐ  ಅನುಚಿತವಾಗಿ ವತರ್ಿಸಿ ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯ.  ಹಲ್ಲೆ ಮಾಡಿದ ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ನ್ಯಾಯವಾದಿಗಳ ಸಂಘದ ಜಿಲ್ಲಾ ಉಪಾಧ್ಯಕ್ಷ ಎ.ಎನ್.ರುಣವಾಲ, ಕಾರ್ಯದಶರ್ಿ ಆರ್.ಎನ್.ಅಡ್ಡೋಡಗಿ, ಜಂಟಿ ಕಾರ್ಯದರ್ಶಿ  ಸಿ.ಎ.ಇಂಚಗೇರಿ, ಎಸ್.ಎ.ಚೂರಿ, ವಿ.ವೈ.ಕಟ್ಟಿಮನಿ, ಎಸ್.ಎಸ್.ಹಿರೇಮಠ, ಬಿ.ವೈ.ದಾಲಿ, ಐ.ಬಿ.ಅಳ್ಳಿಗಿಡದ, ವಿ.ಎಸ್.ಪಾಟೀಲ, ಕೆ.ಸಿ.ರಾಠೋಡ, ಬಿ.ಬಿ. ಹಿಪ್ಪರಗಿ  ಉಪಸ್ಥಿತರಿದ್ದರು.