ವಿಜಯಪುರ: ಮೂರು ತಿಂಗಳಲ್ಲಿ ಲೋಕಾರ್ಪಣೆ: ಸಚಿವ ಎಂ.ಬಿ.ಪಾಟೀಲ

ಲೋಕದರ್ಶನ ವರದಿ

ವಿಜಯಪುರ 09: ಏಷ್ಯಾದಲ್ಲಿಯೇ ಮೊದಲ ಬಾರಿಗೆ ನೀರಾವರಿ ಕ್ಷೇತ್ರದಲ್ಲಿ `ಪ್ರೀ ಕಾಸ್ಟ್ ಮತ್ತು ಪ್ರೀ ಟೆನಷನ್ ಎಂಬ ತಂತ್ರಜ್ಞಾನವನ್ನು ಬಳಸಿ ಕೃಷ್ಣಾ ಮೇಲ್ದಂಡೆ ಯೋಜನೆಯ ತಿಡಗುಂದಿ ಶಾಖಾ ಕಾಲುವೆಯಲ್ಲಿ ನಿಮಿಸಲಾಗುತ್ತಿರುವ ಬೃಹತ್ ಮೇಲುಸೇತುವೆ (ವೈಯಾಡಕ್ಟ್) ಯ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.

     ಹನ್ನೆರಡೂವರೆ ಕಿ.ಮೀ.ಉದ್ದದ ಈ ವಯಾಡಕ್ಟ್ನ್ನು ಸುಮಾರು 280.26 ಕೋಟಿ ರೂ. ವೆಚ್ಚದಲ್ಲಿ ಈ ವಿಶೇಷ ವೈಯಾಡಕ್ಟ್ ನಿರ್ಮಾಣ  ಮಾಡಲಾಗುತ್ತಿದೆ. ವಯಾಡಕ್ಟ್ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು, ಮೂರು ತಿಂಗಳಲ್ಲಿ ಪೂರ್ಣಗೊಂಡು ಕಾಲುವೆಯಲ್ಲಿ ನೀರು ಹರಿಯಲಿದೆ. 

ಗೃಹ ಸಚಿವ ಎಂ.ಬಿ.ಪಾಟೀಲ ಅವರು ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಈ ವಯಾಡಕ್ಟ್ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು, ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. 

ತಿಡಗುಂದಿ ಶಾಖಾ ಕಾಲುವೆಯಿಂದ ವಿಜಯಪುರ ಮತ್ತು ಇಂಡಿ ತಾಲೂಕಿನ ಸುಮಾರು 25572 ಹೆಕ್ಟೇರ್ ಕ್ಷೇತ್ರವು ನೀರಾವರಿಗೆ ಒಳಪಡುತ್ತದೆ. ಈ ಕಾಲುವೆಯ ಜಕಾಲವು ಸುಮಾರು 64 ಕಿ.ಮೀ.ಗಳಷ್ಟು ಉದ್ದವಿರುತ್ತದೆ. ಈ ಕಾಳುವೆಯ ಕಿ.ಮೀ. 0 ದಿಂದ 2.70 ರವರೆಗಿನ ಕಾಮಗಾರಿಯು ಪೂರ್ಣಗೊಂಡಿದ್ದು,  ಡಿಸೆಂಬರ 2018 ರಲ್ಲಿ  ನಡೆದ ಪ್ರಾಯೋಗಿಕ ಚಾಲನೆಯಲ್ಲಿ ಕಾಲುವೆ ಜಾಲದಿಂದ ಮದಭಾವಿ ಹಾಗೂ ನಾಗಠಾಣ ಸನ್ಣ ನೀರಾವರಿ ಕೆರೆಗಳನ್ನು ತುಂಬಿಸಲಾಗಿದೆ. ಈ ಕಾಳುವೆಯ ಕಿ.ಮೀ. 2,70 ರಿಂದ 17.43  ರವರೆಗಿನ ಕಾಲುವೆ ಕಾಮಗಾರಿಯನ್ನು ಬೆಂಗಳೂರಿನ ನಾರಾಯಣ ಕನ್ಟ್ಟ್ರಕ್ಷನ್ ಕಂಪನಿಗೆ ವಹಿಸಿಕೊಡಲಾಗಿದೆ.

        ವಿಜಯಪುರದ ಪಕ್ಕದಲ್ಲಿಯೇ ನಿಮರ್ಾಣಗೊಂಡಿರುವ ತಿಡಗುಂದಿ ಶಾಖಾ ಕಾಲುವೆಯ ಮೇಲುಸೇತುವೆ (ವೈಯಾಡಕ್ಟ್)ಯು ವಾಯುವಿಹಾರಕ್ಕೆ ಅತ್ಯಂತ ಪ್ರಶಸ್ತ ಸ್ಥಳವಾಗಿದೆ. ಈ ಮೇಲುಸೇತುವೆಯ ಮೇಲೆ ವಾಕಿಂಗ್ ಟ್ರ್ಯಾಕ್ ನಿಮರ್ಿಸಲು ಕಾರ್ಯಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡುತ್ತೇನೆ ಎಂದು ಸಚಿವರು ತಿಳಿಸಿದರು.  

    ಕೆರೆಗಳಿಗೆ ನೀರು ತುಂಬಿಸುವ ಮಾದರಿಯಲ್ಲಿಯೇ ಹಳ್ಳಗಳನ್ನು ತುಂಬಿಸುವ ಆಲೋಚನೆ ಇದೆ. ಅನೇಕ ಭಾಗಗಳಲ್ಲಿ ಹಳ್ಳಗಳು ಸಹ ಪ್ರಮುಖ ಜಲಮೂಲಗಳಾಗಿವೆ. ಜಿಲ್ಲೆಯಲ್ಲಿ 25 ಕ್ಕೂ ಹೆಚ್ಚು ದೊಡ್ಡ ದೊಡ್ಡ ಹಳ್ಳಗಳಿವೆ. ಈ ಹಳ್ಳಗಳನ್ನು ತುಂಬಿದರೆ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲವಾಗುವುದು.  ಈ ಕುರಿತಂತೆ ಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದರು.

ಪಕ್ಷ ಹಾಗೂ ರಾಜಕೀಯ ಬದಿಗೊತ್ತಿ ಜಿಲ್ಲೆಯ ಎಲ್ಲ ಶಾಸಕರನ್ನು, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಲಹೆಯನ್ವಯ ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತು ಜಲಸಂಪನ್ಮೂಲ ಸಚಿವರೊಂದಿಗೆ ವಿಶೇಷ ಚಚರ್ೆ ನಡೆಸುವುದಾಗಿ ಸಚಿವ ಎಂ.ಬಿ. ಪಾಟೀಲ ಹೇಳಿದರು.  

ವಿಜಯಪುರ ನಗರದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಸಚಿವರು, ಕೊತರ್ಿ-ಕೊಲ್ಹಾರ ಬ್ಯಾರೇಜ್, ಗಲಗಲಿ ಬ್ಯಾರೇಜ್ ಎತ್ತರ ಹೆಚ್ಚಿಸಲು ಆದೇಶ ಹೊರಡಿಸಲಾಗಿದೆ. ಮುಂದಿನ ದಿನಗಳಲ್ಲಿ ವಿಜಯಪುರ ನಗರಕ್ಕೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.

     ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ, ಡಾ.ಸುನೀತಾ ಚವ್ಹಾಣ, ಮೇಯರ್ ಶ್ರೀದೇವಿ ಲೋಗಾವಿ, ಉಪಮೇಯರ್ ಗೋಪಾಲ ಘಟಕಾಂಬಳೆ, ಮುಖಂಡರಾದ ಅಬ್ದುಲ್ಹಮೀದ್ ಮುಶ್ರೀಫ್, ಸಜ್ಜಾದೆಪೀರಾ ಮುಶ್ರೀಫ್,ಸಿದ್ಧಣ್ಣ ಸಕ್ರಿ, ಶರಣಪ್ಪ ಯಕ್ಕುಂಡಿ, ಅಜರ್ುನ ರಾಠೋಡ, ಡಾ.ಮಹಾಂತೇಶ ಬಿರಾದಾರ, ಡಾ. ಗಂಗಾಧರ ಸಂಬಣ್ಣಿ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.