ಲೋಕದರ್ಶನ ವರದಿ
ವಿಜಯಪುರ 26: ಬಿ.ಜೆ.ಪಿ. ನಗರ ಘಟಕದ ವತಿಯಿಂದ ವಾರ್ಡ ನಂ:13ರಲ್ಲಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಕವಟಗಿ ಹಾಗೂ ಮಾಜಿ ಪಾಲಿಕೆ ಸದಸ್ಯ ರಾಜೇಶ ದೇವಗಿರಿ ಇವರು ಚಾಲನೆ ನೀಡಿದರು. ಹಾಗೂ ವಾರ್ಡ ನಂ:7ರಲ್ಲಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ನಗರ ಅಧ್ಯಕ್ಷ ಶಿವರುದ್ರ ಬಾಗಲಕೋಟ ಹಾಗೂ ಮಾಜಿ ಪಾಲಿಕೆ ಸದಸ್ಯ ರಾಹುಲ ಜಾಧವ ಇವರು ಚಾಲನೆ ನೀಡಿದರು.
ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ ವಿಸ್ತಾರಕರ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು. ಪಕ್ಷದ ಸಂಘಟನೆಗೆ ಪೂರಕವಾಗಿ ಈ ಸದಸ್ಯತ್ವ ಅಭಿಯಾನ ಪ್ರಮುಖ ಘಟ್ಟವಾಗಿದೆ. ಈ ನಿಟ್ಟಿನಲ್ಲಿ ಬೂತಮಟ್ಟದಲ್ಲಿ ಕನಿಷ್ಟ 200 ಸದಸ್ಯರನ್ನು ನೋಂದಣಿ ಮಾಡಿಸುವಲ್ಲಿ ವಿಸ್ತಾರಕರ ಜವಾಬ್ದಾರಿ ಮಹತ್ವದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ. ರಾಜ್ಯ ಗೋ ಪ್ರಕೋಷ್ಟ ಸಹ ಸಂಚಾಲಕ ವಿಜಯ ಜೋಶಿ ಇವರು ಮಾತನಾಡಿದರು.
ಈ ಸಂದರ್ಭದಲ್ಲಿ ಸತೀಶ ಡೋಬಳೆ, ವಿನಾಯಕ ದಹಿಂಡೆ, ಮೌನೇಶ ಪತ್ತಾರ, ಸುನೀಲ ಗಣಾಚಾರಿ, ಅವಿನಾಶ ಬಿದರಿ, ಶಾಂತು, ಬಂಡಿ, ರಜಪೂತ, ಸಚೀನ ಮೋರೆ, ರಾಮಚಂದ್ರ ಚವ್ಹಾಣ, ಕಿಶೋರ ದೊಕಡೆ, ವಿಕಾಸ ಚವ್ಹಾಣ, ವಿನೊದ ಗೌಳಿ, ನರಸಿಂಗ ಮಸ್ಕೆ, ಗಣೇಶ ಕನ್ಸೆ, ಕೇತನ ಚವ್ಹಾಣ, ಜ್ಯೋತಿಬಾ ಹೊನಕಳಸೆ, ದೀಪಕ ಬೋರಾಡೆ,ಚೇತನ ಜಾಧವ, ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.