ವಿಜಯಪುರ: ಮೇಘರಾಜನ ಕೃಪೆಗಾಗಿ ಸಾಮೂಹಿಕ ಶಿವನಾಮ ಸಪ್ತಾಹ

ಲೋಕದರ್ಶನ ವರದಿ

ವಿಜಯಪುರ 28: ತಾಲೂಕಿನ ಬುರಣಾಪೂರ ಗ್ರಾಮದ ಮಲ್ಲಿಕಾರ್ಜುನ  ದೇವಾಲಯದಲ್ಲಿ ಧರ್ಮದಶರ್ಿ ಲಕ್ಷ್ಮಣ ಶಿವಶರಣರ ನೇತೃತ್ವದಲ್ಲಿ ಗುರುವಾರ ಲೋಕಕಲ್ಯಾಣ ವಿಶ್ವಶಾಂತಿಗಾಗಿ ಹಾಗೂ ಸಕಲ ಜೀವರಾಶಿಗಳ ಒಳಿತಿಗಾಗಿ ಮೇಘರಾಜನು ದಯೆ ತೋರಬೇಕೆಂದು ಪ್ರಾರ್ಥಿಸಿ  ಸಾಮೂಹಿಕ ಶಿವನಾಮ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.

    ಶಿವನಾಮ ಸ್ಮರಣೆಯ ಸಪ್ತಾಹದಲ್ಲಿ ಸೋಮನಾಥ ಮಠಪತಿ, ದುಂಡಪ್ಪ ಮೆಂಡೆಗಾರ, ವಿಷ್ಣು ಒಂಬಾಸೆ, ಹಣಮಂತ ಪುಟ್ಟಿ, ಗಂಗಪ್ಪ ನುಚ್ಚಿ, ಸಂಗವ್ವ ನುಚ್ಚಿ ಅಯ್ಯವ್ವ ಆಹೇರಿ ದೇವಕ್ಕಿ ದಳವಾಯಿ, ಬನ್ನೆವ್ವ ಹಳ್ಳಿ, ಉಮ್ಮವ್ವ ಎಲೆರಿ ಮತ್ತಿತರರು ಭಾಗವಹಿಸಿದ್ದರು.